'ಜೇಮ್ಸ್' ಪ್ರಿರಿಲೀಸ್: ಸುಳ್ಳು ಸುದ್ದಿ ನಂಬಬೇಡಿ ಎಂದ ಚಿತ್ರತಂಡ

ಪುನೀತ್ ರಾಜ್‌ಕುಮಾರ್ ಪೂರ್ಣ ಪ್ರಮಾಣದ ನಾಯಕ ನಟನಾಗಿ ನಟಿಸಿದ ಕೊನೆಯ ಸಿನಿಮಾ 'ಜೇಮ್ಸ್' ಮಾರ್ಚ್ 17 ಕ್ಕೆ ಬಿಡುಗಡೆ ಆಗುತ್ತಿದ್ದು, ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಲು ಚಿತ್ರತಂಡ ರೆಡಿಯಾಗಿದೆ.

ಚಿತ್ರತಂಡಕ್ಕಿಂತಲೂ ಅಪ್ಪು ಅಭಿಮಾನಿಗಳು ಇನ್ನಷ್ಟು ಉತ್ಸುಕರಾಗಿದ್ದು ಸಿನಿಮಾದ ಪ್ರಿ ರಿಲೀಸ್, ಬಿಡುಗಡೆಗೆ ಈಗಿನಿಂದಲೇ ತಯಾರಿ ಆರಂಭಿಸಿದ್ದಾರೆ. ಆದರೆ ಈ ನಡುವೆ ಕೆಲವು ಸುಳ್ಳು ಸುದ್ದಿಗಳು ಅಪ್ಪು ಅಭಿಮಾನಿಗಳ ದಿಕ್ಕು ತಪ್ಪಿಸುತ್ತಿವೆ.

'ಜೇಮ್ಸ್' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದ ಬಗ್ಗೆ ಈಗಾಗಲೇ ಹಲವು ಸುದ್ದಿಗಳು ಹರಿದಾಡುತ್ತಿವೆ. ರಾಜ್ಯ ಸೇರಿದಂತೆ ನೆರೆ ರಾಜ್ಯಗಳ ಹಲವು ನಗರಗಳಲ್ಲಿ 'ಜೇಮ್ಸ್' ಪ್ರೀ ರಿಲೀಸ್ ಕಾರ್ಯಕ್ರಮ ನಡೆಯಲಿದ ಎನ್ನಲಾಗಿದ್ದು ಈ ಬಗ್ಗೆ ದಿನಾಂಕ, ಅತಿಥಿಗಳ ಪಟ್ಟಿಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆದರೆ ಇವ್ಯಾವು ಚಿತ್ರತಂಡದಿಂದ ಅಧಿಕೃತವಾಗಿ ಘೋಷಣೆ ಆದ ಸಮಯ ಹಾಗೂ ಕಾರ್ಯಕ್ರಮಪಟ್ಟಿಗಳಲ್ಲ.

ಈ ಬಗ್ಗೆ 'ಜೇಮ್ಸ್' ಚಿತ್ರತಂಡ ಇದೀಗ ಅಧಿಕೃತ ಹೇಳಿಕೆಯೊಂದನ್ನು ಹೊರಡಿಸಿದ್ದು, ''ಜೇಮ್ಸ್' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದ ದಿನಾಂಕ, ಸ್ಥಳ ಹಾಗೂ ಅತಿಥಿಗಳ ಬಗ್ಗೆ ಪರಿಪೂರ್ಣವಾದ ಮಾಹಿತಿಯನ್ನು ಹಾಗೂ ಮುಂಬರುವ ಎಲ್ಲ ಕಾರ್ಯಕ್ರಮಗಳ ಅಧಿಕೃತ ಮಾಹಿತಿಯನ್ನು ಚಿತ್ರತಂಡ ಅಧಿಕೃತವಾಗಿ ಆದಷ್ಟು ಬೇಗ ಹೊರಹಾಕಲಿದೆ. ದಯವಿಟ್ಟು ಅನಧಿಕೃತವಾದ ಸುದ್ದಿಗಳಿಗೆ ಕಿವಿಗೊಡಬೇಡಿ'' ಎಂದು ಮನವಿ ಮಾಡಿದೆ. ಕಿಶೋರ್ ಪ್ರೊಡಕ್ಷನ್‌ನಿಂದ ಈ ಹೇಳಿಕೆ ಹೊರಡಿಸಲಾಗಿದೆ.

ಹೊಸಪೇಟೆಯಲ್ಲಿ ನಡೆಯಲಿದೆ ಎಂದು ಸುದ್ದಿ

ಹೊಸಪೇಟೆಯಲ್ಲಿ ನಡೆಯಲಿದೆ ಎಂದು ಸುದ್ದಿ

'ಜೇಮ್ಸ್' ಸಿನಿಮಾದ ಮೊದಲ ಪ್ರೀ ರಿಲೀಸ್ ಕಾರ್ಯಕ್ರಮ ಬಳ್ಳಾರಿಯ ಹೊಸಪೇಟೆಯಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ತೆಲುಗು ಚಿತ್ರರಂಗದ ಸ್ಟಾರ್ ನಟರಾದ ಮೆಗಾಸ್ಟಾರ್ ಚಿರಂಜೀವಿ ಹಾಗೂ ಜೂ ಎನ್‌ಟಿಆರ್ ಭಾಗವಹಿಸಲಿದ್ದಾರೆ. ಜೊತೆಗೆ ಕನ್ನಡ ಚಿತ್ರರಂಗದ ಗಣ್ಯರು ಹಾಗೂ ರಾಜಕಾರಣಿಗಳು ಭಾಗವಹಿಸಲಿದ್ದಾರೆ. ಆ ಬಳಿಕ ಬೆಂಗಳೂರು, ಚಾಮರಾಜನಗರಗಳಲ್ಲಿಯೂ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಚಿತ್ರತಂಡ ಹೊರಡಿಸಿರುವ ಹೇಳಿಕೆಯಂತೆ ಇದೆಲ್ಲವೂ ಕೇವಲ ಗಾಳಿಸುದ್ದಿಯಾಗಿ ಉಳಿದಿದೆ.

ಸಿಹಿ ವಿತರಣೆ, ಭೋಜನ ವ್ಯವಸ್ಥೆ

ಸಿಹಿ ವಿತರಣೆ, ಭೋಜನ ವ್ಯವಸ್ಥೆ

'ಜೇಮ್ಸ್' ಸಿನಿಮಾದ ಬಿಡುಗಡೆಗೆ ಅಭಿಮಾನಿಗಳು ಈಗಾಗಲೇ ತಯಾರಾಗಿದ್ದಾರೆ. ವಿರೇಶ್ ಚಿತ್ರಮಂದಿರದ ಬಳಿ, ಅಪ್ಪು ನಾಯಕ ನಟನಾಗಿ ನಟಿಸಿರುವ 31 ಚಿತ್ರಗಳ ಬೃಹತ್ ಕಟೌಟ್​ ಹಾಕಲಾಗುವುದು. ಎಲ್ಲಾ ಕಟೌಟ್​ಗಳಿಗೂ ಬಾರಿ ಹೂವಿನ ಹಾರ ಹಾಕಲಾಗುವುದು, ಹೆಲಿಕ್ಯಾಫ್ಟರ್​ನಿಂದ ಅಪ್ಪು ಕಟೌಟ್​ಗಳಿಗೆ ಪುಷ್ಪಾರ್ಚನೆ ಮಾಡಲಾಗುವುದು. ಮಾರ್ಚ್ 18ರ ಬೆಳಗ್ಗೆ ಸಿಹಿ ಹಂಚಿಕೆ, ಮಧ್ಯಾಹ್ನ ಅನ್ನದಾನ, ಸಂಜೆ ದೀಪೋತ್ಸವ ಮಾರ್ಚ್‌ 19ಕ್ಕೆ ಅನ್ನದಾನ, ನೇತ್ರದಾನ ತಪಾಸಣೆ, ರಕ್ತದಾನ ಶಿಬಿರ, ಮಾರ್ಚ್ 20ಕ್ಕೆ ಚಿಕ್ಕನ್ ಬಿರಿಯಾನಿ ಹಂಚಿಕೆ ಮಾಡಲು ಯೋಜಿಸಲಾಗಿದೆ. ಈ ಬಗ್ಗೆ ಕರಪತ್ರಗಳನ್ನು ಹೊರಡಿಸಿ ಹಂಚುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಕಾರ್ಯಕ್ರಮಗಳ ಪಟ್ಟಿ ಹರಿಬಿಟ್ಟಿದ್ದಾರೆ.

ಒಂದು ಗಂಟೆ ಕಾಲ ಪುಷ್ಪಾರ್ಚನೆ

ಒಂದು ಗಂಟೆ ಕಾಲ ಪುಷ್ಪಾರ್ಚನೆ

ಕಮಲಾನಗರ ವೀರಭದ್ರೇಶ್ವರ ಚಿತ್ರಮಂದಿರದ ಬಳಿ, ರಾಜ್ ಕುಮಾರ್, ಪಾರ್ವತಮ್ಮ, ಪುನೀತ್ ಅವರ ಬೃಹತ್ ಕಟೌಟ್ ಹಾಕಲಾಗುವುದು. ಹೆಲಿಕ್ಯಾಫ್ಟರ್​ನಿಂದ ಪುನೀತ್​ಕಟೌಟ್​​ಗೆ ನಿರಂತರ 1 ಗಂಟೆ ಪುಷ್ಪಾರ್ಚನೆ. ಹೆಲಿಕ್ಯಾಫ್ಟರ್​ನಿಂದ 40 ಅಡಿಯ ಪುನೀತ್ ಫೋಟೋ ತೂಗು ಬಿಡಲಾಗುವುದು. ಡೊಳ್ಳು ಕುಣಿತ, ಪೂಜಾಕುಣಿತ, ವೀರಗಾಸೆ, ಕೇರಳದ ಪ್ರಸಿದ್ಧ ವಾದ್ಯದವರಿಂದ ವಾದ್ಯಗೋಷ್ಠಿ ಮತ್ತು ಬೆಂಗಳೂರು ತಮಟೆ. ಬೆಳ್ಳಿಪರದೆ ಮುಂದೆ ಪುನೀತ್​ರವರ ವಿಶೇಷ ಲೈಟಿಂಗ್ಸ್ ವ್ಯವಸ್ಥೆ. ಬಸವೇಶ್ವರನಗರ ಸರ್ಕಲ್​ನಿಂದ ಚಿತ್ರಮಂದಿರವರೆಗೂ ಬೆಳ್ಳಿರಥದ ಮೆರವಣಿಗೆ. 'ಜೇಮ್ಸ್' ಚಿತ್ರತಂಡದ ಸದಸ್ಯರು ಅಭಿಮಾನಿಗಳೊಟ್ಟಿಗೆ ಸಿನಿಮಾ ವೀಕ್ಷಣೆ. ಅಭಿಮಾನಿಗಳಿಗೆ ಊಟ ಹಾಗೂ ಉಪಹಾರದ ವ್ಯವಸ್ಥೆ ಮಾಡಲಾಗುತ್ತಿದೆ.

ಹುಟ್ಟುಹಬ್ಬಕ್ಕೆ 'ಜೇಮ್ಸ್' ಸಿನಿಮಾ ಬಿಡುಗಡೆ

ಹುಟ್ಟುಹಬ್ಬಕ್ಕೆ 'ಜೇಮ್ಸ್' ಸಿನಿಮಾ ಬಿಡುಗಡೆ

ಮಾರ್ಚ್ 17 ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವಾಗಿದ್ದು ಅದೇ ದಿನ 'ಜೇಮ್ಸ್' ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾವನ್ನು ಚೇತನ್ ನಿರ್ದೇಶನ ಮಾಡಿದ್ದಾರೆ. ನಾಯಕಿಯಾಗಿ ಪ್ರಿಯಾ ಆನಂದ್ ನಟಿಸಿದ್ದಾರೆ. ತೆಲುಗಿನ ಶ್ರೀಕಾಂತ್, ಅವಿನಾಶ್, ಶರತ್ ಕುಮಾರ್, ರಂಗಾಯಣ ರಘು, ಸಾಧು ಕೋಕಿಲ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಕಿಶೋರ್ ಪಾತಿಕೊಂಡ. ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್‌ ಪಾತ್ರಕ್ಕೆ ಶಿವರಾಜ್ ಕುಮಾರ್ ಧ್ವನಿ ನೀಡಿದ್ದಾರೆ.

More from Filmibeat

English summary
Puneeth Rajkumar's James movie Producer request fans not to believe in rumors surrounding James Pre Release Event.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X