For Quick Alerts
  ALLOW NOTIFICATIONS  
  For Daily Alerts

  ಪ್ಯಾನ್ ಇಂಡಿಯಾ ಸಿನಿಮಾಗಳ ಅಸಲಿ ಕಥೆ ಬಿಚ್ಚಿಟ್ಟ ನಿರ್ಮಾಪಕ

  By ರವೀಂದ್ರ ಕೊಟಕಿ
  |

  ಈಗ ಸಿನಿಮಾದ ಭಾಷೆ ಬದಲಾಗಿದೆ, ಯಾವುದೇ ಒಂದು ಸಿನಿಮಾರಂಗದ ಸ್ಟಾರ್ ನಟರ ಸಿನಿಮಾಗಳು ಆ ಭಾಷೆಗೆ ಮಾತ್ರ ಸೀಮಿತವಾಗದೆ ಗಡಿಗಳನ್ನು ದಾಟಿ ಅನ್ಯ ಭಾಷೆಗಳಲ್ಲಿ ಕೂಡ ಬಿಡುಗಡೆಯಾಗುತ್ತಿವೆ. ಈಗಂತೂ ಯಾವುದೇ ಸಿನಿಮಾ ಘೋಷಣೆಯ ಸಮಯದಲ್ಲೇ ಅದನ್ನ ಪ್ಯಾನ್ ಇಂಡಿಯಾ ಅಂತ ಹೇಳಿ ಘೋಷಣೆ ಮಾಡುತ್ತಾರೆ ಮತ್ತು ನೂರಾರು ಕೋಟಿಯ ಬಜೆಟ್ಟಿನ ಬಗ್ಗೆ ಮಾತನಾಡುತ್ತಾರೆ.

  ಇಷ್ಟಕ್ಕೂ ಇಂತಹ ನೂರಾರು ಕೋಟಿಯ ಪ್ಯಾನ್ ಇಂಡಿಯಾ ಸಿನಿಮಾಗಳ ಹಿಂದಿರುವ ಅಸಲಿ ಕಥೆಯಾದರೂ ಏನು? ಇದರ ಬಗ್ಗೆ ಹೈದರಾಬಾದಿನಲ್ಲಿ ಮಾತನಾಡಿರುವ ನಿರ್ಮಾಪಕ ನಟ್ಟಿ ಕುಮಾರ್ ಅವರು ವಿವರಿಸುವುದು ಹೀಗೆ.

  ಸೌಂದರ್ಯ ಟಾಪ್ ನಟಿಯಾಗಿದ್ದಾಗ ಕೊಟ್ಟ ಸಂಭಾವನೆ ಎಷ್ಟು?

  'ಇವತ್ತು ಒಂದು ಅಥವಾ ಎರಡು ಚಿತ್ರಗಳಲ್ಲಿ ನಟಿಸಿದ ನಟಿ ಕೂಡ ಎರಡರಿಂದ ಮೂರು ಕೋಟಿ ಡಿಮ್ಯಾಂಡ್ ಮಾಡ್ತಾಳೆ. ಆಕೆಗೆ ಸ್ಟಾರ್ ಹೋಟೆಲ್ ನಲ್ಲಿ ವಾಸ್ತವ್ಯ. ನಾಲ್ಕು ಬಾಡಿಗಾರ್ಡ್ ಗಳು, ಒಂದು ಕಾರು, ಆಕೆ ಜೊತೆ ಬರುವಂತಹ ಸಹಾಯಕರಿಗೆ ಒಂದು ಕಾರು, ಪ್ರತ್ಯೇಕವಾದ ಕ್ಯಾರವಾನ್ ಇದರೊಂದಿಗೆ ಇತರ ವೆಚ್ಚಗಳನ್ನು ಕೂಡ ನಿರ್ಮಾಪಕರೇ ಭರಿಸಬೇಕು. ಅದೇ ಸೌಂದರ್ಯ ದಕ್ಷಿಣ ಭಾರತದಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದ ಕಾಲದಲ್ಲಿ ಆಕೆ ಪಡೆಯುತ್ತಿದ್ದ ಸಂಭಾವನೆ 30 ಲಕ್ಷ. ಜೊತೆಗೆ ಯಾವುದೇ ಪ್ರತ್ಯೇಕವಾದ ಡಿಮ್ಯಾಂಡ್ ಗಳು ಕೂಡ ಆಕೆಯ ಕಡೆಯಿಂದ ನಿರ್ಮಾಪಕರಿಗೆ ಇರುತ್ತಿರಲಿಲ್ಲ. ಆದರೆ ಇಂದು ಒಂದು ಹಿಟ್ ಚಿತ್ರದಲ್ಲಿ ಕಾಣಿಸಿಕೊಂಡರೆ ಸಾಕು, ಒಂದು ಕಡೆ ಡಿಮ್ಯಾಂಡ ಗಳು ಇನ್ನೊಂದು ಕಡೆ ಕಿರಿಕ್ ಇವೆರಡನ್ನು ನಿರ್ಮಾಪಕರು ಭಾವಿಸಬೇಕಾಗುತ್ತದೆ. ಡೈರೆಕ್ಟರ್ ಗಳು ಇದೇ ನಟಿಯರು ಬೇಕು ಅಂತ ನಿರ್ಮಾಪಕರು ತಲೆ ಮೇಲೆ ಕೂತು ಹಿಂಸೆ ಕೊಡುತ್ತಾರೆ' ಅಂತ ಈ ಹಿರಿಯ ನಿರ್ಮಾಪಕ ಆವೇದನೆಯಿಂದ ಹೇಳುತ್ತಾರೆ.

  150 ಕೋಟಿ ಸಿನಿಮಾದಲ್ಲಿ ಪ್ರೊಡಕ್ಷನ್ ಕಾಸ್ಟ್ ಎಷ್ಟು?

  ಪ್ಯಾನ್ ಇಂಡಿಯಾ ಸಿನಿಮಾಗಳ ಅಸಲಿ ಕತೆ ಬಗ್ಗೆ ಮಾತನಾಡಿದ ನಟ್ಟಿ ಕುಮಾರ್ ವಿವರಿಸುವುದು ಹೀಗೆ 'ಈಗ ಯಾವುದೇ ಸಿನಿಮಾ ತೆಗೆದುಕೊಂಡರೂ ಅದನ್ನು ಪ್ಯಾನ್ ಇಂಡಿಯಾ ಸಿನಿಮಾ ಅಂತ ಮೊದಲ ಘೋಷಣೆ ಮಾಡುತ್ತಾರೆ. ಕನಿಷ್ಠ ಬಜೆಟ್ ಕೂಡ ಈಗ 150 ಕೋಟಿ. ಆದರೆ ವಾಸ್ತವದಲ್ಲಿ 150 ಕೋಟಿಯಲ್ಲಿ ಪ್ರೊಡಕ್ಷನ್ ಕಾಸ್ಟ್ ಎಷ್ಟು? ಅದು ಕೇವಲ 70 ಕೋಟಿ ಮಾತ್ರ! ಹಾಗಾದರೆ ಉಳಿದ 80 ಕೋಟಿ ಎಲ್ಲಿ ಖರ್ಚಾಗುತ್ತದೆ?. ಪ್ಯಾನ್ ಇಂಡಿಯಾ ಸಿನಿಮಾ ಅಂತ ಘೋಷಣೆ ಆಗಿರುವ ಕಾರಣ ಇತರ ಸಿನಿಮಾರಂಗದಲ್ಲಿ ನ ಖ್ಯಾತ ನಟರ ಇಲ್ಲಿಗೆ ಕರೆದು ತರಬೇಕಾಗುತ್ತದೆ. ಹೀಗಾಗಿ ಅವರ ಡಿಮ್ಯಾಂಡ್ ಗಳನ್ನು ಕೂಡ ನಿರ್ಮಾಪಕರು ಒಪ್ಪಿಕೊಳ್ಳಬೇಕಾಗುತ್ತದೆ. ಇನ್ನು ಮುಂಬೈ ನಾಯಕಿ ಜೊತೆಗೆ ಇಲ್ಲಿನ ಸ್ಟಾರ್ ನಟರ ಮತ್ತು ಡೈರೆಕ್ಟರುಗಳು ಸಂಭಾವನೆ ರೂಪದಲ್ಲೇ 80 ಕೋಟಿ ಖರ್ಚಾಗುತ್ತದೆ. ಅಂದರೆ ಉಳಿದ 70 ಕೋಟೆಯಲ್ಲಿ ಮಾತ್ರ ನಿಜವಾದ ಸಿನಿಮಾ ನಿರ್ಮಾಣ ಆಗಿರುತ್ತದೆ.

  ದೊಡ್ಡ ಬಜೆಟ್ ಸಿನಿಮಾ ಎಂಬ ಹೆಸರಿನಲ್ಲಿ ವಂಚನೆ

  ದೊಡ್ಡ ಬಜೆಟ್ಟಿನಲ್ಲಿ ನಿರ್ಮಾಣವಾದ ಸಿನಿಮಾ ಎಂಬ ಹೆಸರಿನಲ್ಲಿ ಟಾಲಿವುಡ್ ನಲ್ಲಿರುವ 7 ಸಿನಿಮಾ ಕಂಪನಿಗಳು ( ಇವರುಗಳ ಕೈಯಲ್ಲೇ ಎಲ್ಲ ಥಿಯೇಟರ್ ಗಳ ಹಿಡಿತವಿದೆ) ಥಿಯೇಟರುಗಳಲ್ಲಿ ಸಿನಿಮಾ ದರವನ್ನು ಯದ್ವಾತದ್ವಾ ಏರಿಸುತ್ತಾರೆ. ಪ್ರೇಕ್ಷಕರು ಗತ್ಯಂತರವಿಲ್ಲದೆ ತಮ್ಮ ನೆಚ್ಚಿನ ಸ್ಟಾರ್ ನಟರ ಸಿನಿಮಾಗಳನ್ನು ಒಂದಕ್ಕೆ ದುಪ್ಪಟ್ಟು ದರದಲ್ಲಿ ಟಿಕೆಟ್ ಖರೀದಿ ಮಾಡಿ ನೋಡಬೇಕಾದ ಪರಿಸ್ಥಿತಿ ಬಂದಿದೆ. ಇದರ ಮೇಲೆ ಯಾವುದೇ ನಿಯಂತ್ರಣವಿಲ್ಲದೆ, ಪ್ರೇಕ್ಷಕರು ದುಬಾರಿ ವೆಚ್ಚದ ದರಗಳಿಗೆ ಬಲಿಯಾಗುತ್ತಿದ್ದಾರೆ. ಹಳೆಯ ನಿರ್ಮಾಪಕರು ನೈಪಥ್ಯಕ್ಕೆ ಸರಿದಿದ್ದಾರೆ. ಸಣ್ಣ ನಿರ್ಮಾಪಕರಿಗೆ ದಿಕ್ಕುತೋಚದ ಪರಿಸ್ಥಿತಿ ಉಂಟಾಗಿದೆ. ಇದು ಅತ್ಯಂತ ದುರದೃಷ್ಟಕರ ಅಂತ. ನಟ್ಟಿಕುಮಾರ್ ಅವರ ಮಾತುಗಳಲ್ಲಿ ಸಿನಿಮಾರಂಗದ ಅಸಲಿ ಸಮಸ್ಯೆ ಮತ್ತು ಸಣ್ಣ ನಿರ್ಮಾಪಕರ ಆವೇದನೆ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ.

  English summary
  Producer Nattykumar Reveals the Real Story of Pan India Movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X