For Quick Alerts
  ALLOW NOTIFICATIONS  
  For Daily Alerts

  'ಚಕ್ರವರ್ತಿ' ಚೆನ್ನಾಗಿಲ್ಲ ಅಂದೋರಿಗೆಲ್ಲಾ ಮಾತಲ್ಲೇ ಪೆಟ್ಟು ಕೊಟ್ಟ ಸಂದೇಶ್ ನಾಗರಾಜ್.!

  By Harshitha
  |

  'ಚಕ್ರವರ್ತಿ' ಸಿನಿಮಾ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕರ್ನಾಟಕದ ಅನೇಕ ಥಿಯೇಟರ್ ಗಳಲ್ಲಿ 'ಚಕ್ರವರ್ತಿ' ಚಿತ್ರಕ್ಕೆ ಹೌಸ್ ಫುಲ್ ಬೋರ್ಡ್ ಬೀಳುತ್ತಿದ್ದರೂ, 'ಚಕ್ರವರ್ತಿ' ಸಿನಿಮಾಗೆ ವಿಮರ್ಶಕರು ಮಿಶ್ರ ಪ್ರತಿಕ್ರಿಯೆ ನೀಡಿದ್ದರು.

  'ಬ್ರೇನ್ ಮತ್ತು ಕ್ರೈಂ' ಮಿಶ್ರಿತವಾಗಿರುವ 'ಚಕ್ರವರ್ತಿ' ಅವರವರ ಅಭಿರುಚಿಗೆ ತಕ್ಕಂತೆ... ಕೆಲವರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದ್ರೆ, ಉಳಿದವರಿಗೆ ಸಪ್ಪೆ ಎನಿಸಿರಬಹುದು. ಹಾಗೆ 'ಚಕ್ರವರ್ತಿ' ಚೆನ್ನಾಗಿಲ್ಲ ಅಂತ ಗೊಣಗಿದವರಿಗೆಲ್ಲ ನಿರ್ಮಾಪಕ ಸಂದೇಶ್ ನಾಗರಾಜ್ ತಮ್ಮ ಮಾತಲ್ಲೇ ಪೆಟ್ಟು ಕೊಟ್ಟಿದ್ದಾರೆ. ಮುಂದೆ ಓದಿ....

  ಫೇಸ್ ಬುಕ್ ನಲ್ಲಿ ಸಂದೇಶ್ ನಾಗರಾಜ್ ಮಾತು

  ಫೇಸ್ ಬುಕ್ ನಲ್ಲಿ ಸಂದೇಶ್ ನಾಗರಾಜ್ ಮಾತು

  'ಚಕ್ರವರ್ತಿ' ಚಿತ್ರವನ್ನ ಕಣ್ತುಂಬಿಕೊಂಡ ನಿರ್ಮಾಪಕ ಸಂದೇಶ್ ನಾಗರಾಜ್, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನಿಸಿಕೆಯನ್ನ ವ್ಯಕ್ತಪಡಿಸಿದ್ದಾರೆ. ಫೇಸ್ ಬುಕ್ ನಲ್ಲಿ 'ಚಕ್ರವರ್ತಿ' ಬಗ್ಗೆ ಸಂದೇಶ್ ನಾಗರಾಜ್ ಬರೆದುಕೊಂಡಿರುವುದು ಹೀಗೆ....

  ಇಂತಹ ಸಿನಿಮಾ ಮಾಡುವುದೇ ಕಷ್ಟ.!

  ಇಂತಹ ಸಿನಿಮಾ ಮಾಡುವುದೇ ಕಷ್ಟ.!

  ''ಚಕ್ರವರ್ತಿ' ಅಂತಹ ಸಿನಿಮಾ ಮಾಡುವುದು ತುಂಬಾ ಕಷ್ಟ ಇದೆ. 80 ರ ದಶಕದ ಕಾಲಘಟ್ಟದ ಸ್ಥಳ, ಬಟ್ಟೆ, ಮಾತುಕತೆ... ಹೀಗೆ ಹಲವು ರೀತಿಯಲ್ಲಿ ಕೆಲಸ ಮಾಡಬೇಕು'' - ಸಂದೇಶ್ ನಾಗರಾಜ್, ನಿರ್ಮಾಪಕ [ಕನ್ನಡ ಚಿತ್ರಪ್ರೇಮಿಗಳೇ ನೀವು ಮಾಡುತ್ತಿರುವುದು ಎಷ್ಟು ಸರಿ ನೀವೇ ಹೇಳಿ?]

  'ಚಕ್ರವರ್ತಿ' ಚೆನ್ನಾಗಿಲ್ಲ ಅನ್ನೋದು ಮೂರ್ಖತನ ಮಾತು

  'ಚಕ್ರವರ್ತಿ' ಚೆನ್ನಾಗಿಲ್ಲ ಅನ್ನೋದು ಮೂರ್ಖತನ ಮಾತು

  ''ಒಂದು ಬಾರಿ ಸಿನಿಮಾ ನೋಡಿ ಇಂತಹ ಸಿನಿಮಾಗಳನ್ನ ಚೆನ್ನಾಗಿದೆ, ಚೆನ್ನಾಗಿಲ್ಲ ಅನ್ನೋದು ಮೂರ್ಖತನದ ಮಾತು. ಇಲ್ಲಿ ಅಭಿಮಾನಿಗಳಿಗೆ ಮಜಾ ನೀಡುತ್ತಿಲ್ಲ ಎನ್ನುವುದನ್ನು ಬಿಟ್ಟರೆ ಚಿತ್ರ ನಿಜವಾಗಲೂ ಚೆನ್ನಾಗಿದೆ. ಒಂದು ಘರ್ಷಣೆ ಇದೆ. ಅಂದಿನ ಪರಿಸ್ಥಿತಿಯ ಉಲ್ಲೇಖವಿದೆ. ಇದು ಒಂದು ಒಳ್ಳೆಯ ಪ್ರಯತ್ನ'' ಅಂತ ಫೇಸ್ ಬುಕ್ ನಲ್ಲಿ ಸಂದೇಶ್ ನಾಗರಾಜ್ ಕೊಂಡಾಡಿದ್ದಾರೆ.[ಹಿಂದಿನ ರೆಕಾರ್ಡ್ಸ್ ಪೀಸ್ ಪೀಸ್: ಬಾಕ್ಸ್ ಆಫೀಸ್ ಚಿಂದಿ ಉಡಾಯ್ಸಿದ 'ಚಕ್ರವರ್ತಿ']

  ದರ್ಶನ್ ಮೇಲೆ ಅಪಾರ ಅಭಿಮಾನ

  ದರ್ಶನ್ ಮೇಲೆ ಅಪಾರ ಅಭಿಮಾನ

  'ಚಕ್ರವರ್ತಿ' ಚಿತ್ರಕ್ಕೆ ನಿರ್ಮಾಪಕ ಸಂದೇಶ್ ನಾಗರಾಜ್ ಬಂಡವಾಳ ಹಾಕಿಲ್ಲ. ಆದ್ರೆ, ದರ್ಶನ್ ಮೇಲಿನ ಅಪಾರ ಅಭಿಮಾನದಿಂದ 'ಚಕ್ರವರ್ತಿ' ಚಿತ್ರವನ್ನ ನೋಡಿ, ಸಿನಿಮಾದ ಕುರಿತು ನಿರ್ಮಾಪಕ ಸಂದೇಶ್ ನಾಗರಾಜ್ ಒಂದೆರಡು ಒಳ್ಳೆಯ ಮಾತುಗಳನ್ನಾಡಿದ್ದಾರೆ.

  'ಚಕ್ರವರ್ತಿ' ಚಿತ್ರದ ಕುರಿತು...

  'ಚಕ್ರವರ್ತಿ' ಚಿತ್ರದ ಕುರಿತು...

  ಬಿಗ್ ಬಜೆಟ್ ನಲ್ಲಿ ತಯಾರಾಗಿರುವ 'ಚಕ್ರವರ್ತಿ' ಸಿನಿಮಾದಲ್ಲಿ ದರ್ಶನ್, ದೀಪಾ ಸನ್ನಿಧಿ, ಆದಿತ್ಯ, ಸೃಜನ್ ಲೋಕೇಶ್, ಚಾರುಲತಾ, ಕುಮಾರ್ ಬಂಗಾರಪ್ಪ ರಂತಹ ದೊಡ್ಡ ತಾರಾಬಳಗ ಇದೆ. ಎಂಬತ್ತರ ದಶಕದ ಭೂಗತಲೋಕದ ಕಥೆಯೇ ಈ ಚಿತ್ರದ ಕಥಾವಸ್ತು.

  'ಚಕ್ರವರ್ತಿ' ವಿಮರ್ಶೆ ಓದಿ...

  'ಚಕ್ರವರ್ತಿ' ವಿಮರ್ಶೆ ಓದಿ...

  'ಚಕ್ರವರ್ತಿ' ಚಿತ್ರದ ಕುರಿತು 'ಫಿಲ್ಮಿಬೀಟ್ ಕನ್ನಡ'ದಲ್ಲಿ ಪ್ರಕಟವಾಗಿರುವ ವಿಮರ್ಶೆ ಇಲ್ಲಿದೆ ಓದಿ....[ವಿಮರ್ಶೆ: ಭೂಗತ ಲೋಕಕ್ಕೆ ದೇಶಪ್ರೇಮದ ಪಾಠ ಹೇಳುವ 'ಚಕ್ರವರ್ತಿ']

  English summary
  Producer Sandesh Nagaraj has taken his Facebook account to praise Darshan starrer 'Chakravarthy' movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X