ಸುದೀಪ್ ಜೊತೆ ಕೈ ಜೋಡಿಸಿದ ದರ್ಶನ್ ಖಾಯಂ ನಿರ್ಮಾಪಕ ? ಇನ್ನೂ ಆರಿಲ್ಲ ಹೊಟೇಲ್ ಕಿಚ್ಚು..?

By ಫಿಲ್ಮಿಬೀಟ್ ಡೆಸ್ಕ್

ಒಂದ್ಕಾಲದಲ್ಲಿ ದರ್ಶನ್ ಮತ್ತು ಹಿರಿಯ ನಿರ್ಮಾಪಕ ಸಂದೇಶ್ ನಾಗರಾಜ್ ನಡುವೆ ಅವಿನಾಭಾವ ಸಂಬಂಧ ಇತ್ತು. ಸ್ನೇಹಕ್ಕೂ ಮೀರಿದ್ದ ಆತ್ಮೀಯವಾದ ಸಂಬಂಧ ಅದು. ಪ್ರಿನ್ಸ್ .. ಮಿಸ್ಟರ್ ಐರಾವತ .. ಒಡೆಯ .. ಇದೇ ಸಂಬಂಧಕ್ಕೆ ಹಿಡಿದ ಕೈಗನ್ನಡಿ.

ಆದರೆ, 2021ರ ಆಚೀಚೆ ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್‌ನಲ್ಲಿ ನಡೆದ ಗಲಾಟೆಯ ನಂತರ ಸಂಬಂಧದಲ್ಲಿ ಬಿರುಕು ಕಂಡು ಬಂತು. ಇದಕ್ಕೆ ಪೂರಕವಾಗಿ ಆ ನಂತರ ಸಂದೇಶ್ ನಾಗರಾಜ್ ಅವರ ಜೊತೆ ದರ್ಶನ್ ಕಾಣಿಸಿಕೊಂಡಿಲ್ಲ. ದರ್ಶನ್ ಅವರ ಜೊತೆ ಸಂದೇಶ್ ನಾಗರಾಜ್ ಅವರ ಪುತ್ರ ಸಂದೇಶ್ ಜೊತೆ ಕೂಡ ಕಾಣಿಸಿಕೊಳ್ಳಲಿಲ್ಲ.

producer-sandesh-nagaraj-likely-to-collaborate-with-kichcha-sudeep

ಗಲಾಟೆ-ಗದ್ದಲದ ನಂತರ ಅವರ ಅವರ ಜೀವನದಲ್ಲಿ ಇಬ್ಬರು ಬ್ಯುಸಿಯಾದರು. ರಾಬರ್ಟ್, ಕ್ರಾಂತಿ, ಕಾಟೇರ, ಹೀಗೆ ದರ್ಶನ್.. ಒಂದಾದ ಮೇಲೊಂದು ಸಿನಿಮಾ ಮಾಡಿದರೆ, ಸಂದೇಶ್ ನಾಗರಾಜ್ ಘೋಸ್ಟ್ ಸಿನಿಮಾವನ್ನ ನಿರ್ಮಾಣ ಮಾಡಿದರು.

ಹೀಗೆ ಕವಲೊಡೆದ ದಾರಿಯಲ್ಲಿಒಂದೊಂದು ದಿಕ್ಕಿನ ಕಡೆ ಹೊರಟ ಇಬ್ಬರಲ್ಲಿ, ಸಂದೇಶ್ ನಾಗರಾಜ್ ಇದೀಗ ಸುದೀಪ ಅವರ ಸಮೀಪ ಬಂದಿದ್ದಾರೆ. ಇದಕ್ಕೆ ಸಾಕ್ಷಿ ಅನ್ನುವಂತೆ ಚೆನೈನಲ್ಲಿ ಮ್ಯಾಕ್ಸ್ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಸಂದೇಶ್ ನಾಗರಾಜ್ ಕಿಚ್ಚ ಸುದೀಪ್ ಅವರನ್ನ ಭೇಟಿ ಮಾಡಿದ್ದಾರೆ. ಚಿತ್ರವೊಂದರ ಕುರಿತು ಮಾತುಕಥೆಯನ್ನೂ ನಡೆಸಿದ್ದಾರೆ.

producer-sandesh-nagaraj-likely-to-collaborate-with-kichcha-sudeep

ಎಲ್ಲವೂ ಅಂದುಕೊಂಡತೆ ಆದರೆ ಸಂದೇಶ್ ನಾಗರಾಜ್, ಸದ್ಯದಲ್ಲಿಯೇ ಸುದೀಪ್ ಅವರ ಚಿತ್ರವನ್ನ ಘೋಷಿಸುವ ಸಾಧ್ಯತೆ ಇದೆ. ಆ ಚಿತ್ರಕ್ಕೆ ಸಂದೇಶ್ ನಾಗರಾಜ್ ಪೂರ್ಣ ಪ್ರಮಾಣದ ನಿರ್ಮಾಪಕರಾದರು ಆಗಬಹುದು ಅಥವಾ ನಿರ್ಮಾಪಕರಲ್ಲಿ ಒಬ್ಬರಾದರು ಆಗಬಹುದು, ಮಹತ್ವಕಾಂಕ್ಷೆಯ ಈ ಚಿತ್ರಕ್ಕೆ ಸಂದೇಶ್ ನಾಗರಾಜ್ ಬೇರೆ ನಿರ್ಮಾಪಕರ ಜೊತೆ ಕೈ ಜೋಡಿಸಿದರು ಜೋಡಿಸಬಹುದು. ಆ ಸಾಧ್ಯತೆಯೂ ಇದೆ ಅನ್ನುವುದು ಸದ್ಯಕ್ಕೆ ಗಾಂಧಿನಗರದ ತುಂಬೆಲ್ಲ ಕೇಳಿ ಬರುತ್ತಿರುವ ಮಾತು.

ಇನ್ನೂ.. ಸುದೀಪ್ ಮತ್ತು ಸಂದೇಶ್ ನಾಗರಾಜ್ ಸಂಗಮದಲ್ಲಿ ಮೂಡಿ ಬರಲಿರುವ ಈ ಚಿತ್ರ ಸೆಟ್ಟೇರುವುದು ಯಾವಾಗ ಅನ್ನುವ ಸಹಜವಾದ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಹೇಳುವುದು ಕಷ್ಟ. ಯಾಕೆಂದರೆ ಸುದೀಪ್ ಸದ್ಯಕ್ಕೆ ಮ್ಯಾಕ್ಸ್ ಚಿತ್ರದ ಚಿತ್ರೀಕರಣವನ್ನ ಮ್ಯಾಕ್ಸಿಮಮ್ ಸ್ಪೀಡ್‌ನಲ್ಲಿ ಮಾಡ್ತಿದ್ದಾರೆ. ಇನ್ನೂ ಇದಾದ ಬೆನ್ನಲ್ಲಿಯೇ ಚೇರನ್ ಸಿನಿಮಾ ಶುರುವಾಗಲಿದೆ. ಆ ನಂತರ ಸರತಿ ಸಾಲಿನಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಆರ್.ಚಂದ್ರು ಕೂಡ ಇದ್ದಾರೆ. ಅನೂಪ್ ಭಂಡಾರಿ ಕೂಡ ಇದ್ದಾರೆ. ಇದರ ನಡುವೆ.. ಸುದೀಪ್ ನಿರ್ದೇಶಕನಾಗಿಯೂ ಕಣಕ್ಕಿಳಿಯಬೇಕಿದೆ. ಇನ್ನೂ ಇತ್ತ ಸಂದೇಶ್ ನಾಗರಾಜ್ ಅವರ ನಿರ್ಮಾಣ ಸಂಸ್ಥೆ ಸೃಜನ್ ಲೊಕೇಶ್ ನಿರ್ದೇಶನದ ಚೊಚ್ಚಲ ಚಿತ್ರ ಜಿಎಸ್‌ಟಿ ಚಿತ್ರವನ್ನ ನಿರ್ಮಾಣ ಮಾಡ್ತಿದೆ. ಮತ್ತೊಂದು ಕಡೆ ಬೀರಬಲ್ 2 ಚಿತ್ರದ ಆಲೋಚನೆ ಕೂಡ ಇದೆ. ಈ ಎಲ್ಲ ಕಮ್ಮಿಟ್ಮೆಂಟ್‌ಗಳನ್ನ ಇಬ್ಬರು ಮುಗಿಸಿದ ನಂತರವಷ್ಟೇ ಈ ಚಿತ್ರ ಆರಂಭವಾಗಬಹುದು.

producer-sandesh-nagaraj-likely-to-collaborate-with-kichcha-sudeep

ಇದೆಲ್ಲದರ ನಡುವೆ ಸುದೀಪ್ ಜೊತೆ ಸಂದೇಶ್ ನಾಗರಾಜ್ ಕೈ ಜೋಡಿಸಿದ ಬೆನ್ನಲ್ಲಿಯೇ, ಗಾಂಧಿನಗರದ ಮಂದಿ ನಾನಾ ರೀತಿಯ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ದರ್ಶನ್ ಕಾಲೆಳೆಯಲು ಅಂತನೇ ಸಂದೇಶ್ ಈ ಹೆಜ್ಜೆಯನ್ನ ಇಟ್ಟಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಅವತ್ತು ನಡೆದ ಹೊಟೇಲ್ ಗಲಾಟೆ ಇವತ್ತು ಕೂಡ ಸಂದೇಶ್ ನಾಗರಾಜ್ ಮನಸಿನಲ್ಲಿ ಹಸಿರಾಗಿದೆ ಅನ್ನುವುದಕ್ಕೆ ಇದೇ ಸಾಕ್ಷಿ ಅನ್ನುತ್ತಿದ್ದಾರೆ. ಸುದೀಪ್ ಮತ್ತು ಸಂದೇಶ್ ನಾಗರಾಜ್ ನಡುವೆ ಅನಗತ್ಯವಾಗಿ ದರ್ಶನ್ ಅವರ ಹೆಸರನ್ನ ಎಳೆದು ತರುವ ಕೆಲಸವನ್ನ ಈ ಮೂಲಕ ಹಲವರು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ.

ಒಟ್ನಲ್ಲಿ ಸದ್ಯಕ್ಕೆ ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ಸುದೀಪ್ ಚಿತ್ರ ಆರಂಭವಾಗಲಿದೆ. ಚಿತ್ರದ ನಿರ್ದೇಶಕರಾದಿ ಸೇರಿ ಪಾತ್ರವರ್ಗದ ಮಾಹಿತಿ, ಕಾಲ..ಕಾಲಕ್ಕೆ.. ಹೊರ ಬೀಳುವ ಸಾಧ್ಯತೆ ಇದೆ.

More from Filmibeat

English summary
There's buzz surrounding a potential collaboration between Producer Sandesh Nagaraj and Kichcha Sudeep, sparked by their recent encounter in Chennai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X