twitter
    For Quick Alerts
    ALLOW NOTIFICATIONS  
    For Daily Alerts

    ಪೋಲೀಸರಿಗೆ ಬೆಳ್ಳಿ ನಾಣ್ಯದ ಗಿಫ್ಟ್ ನೀಡಿದ ನಿರ್ಮಾಪಕಿ ಶ್ರುತಿ ನಾಯ್ಡು

    By Coovercolly Indresh
    |

    ಮಾರಕ ಕೋವಿಡ್ 19 ಸೋಂಕಿನ ವಿರುದ್ದ ಹೋರಾಡಲು ಇಡೀ ದೇಶವೇ ಒಂದಾಗಿ ಹೋರಾಡುತ್ತಿದೆ. ಅದರಲ್ಲೂ ಮುಂಚೂಣಿ ಸೇವೆಯಲ್ಲಿರುವ ಪೌರ ಕಾರ್ಮಿಕರು, ಪೋಲೀಸ್‌ ಮತ್ತು ವೈದ್ಯಕೀಯ ಸಿಬ್ಬಂದಿಗಳ ಶ್ರಮ ಅಪಾರವಾಗಿದ್ದು ಇವರ ಕರ್ತವ್ಯವು ಸವಾಲಿನದ್ದಾಗಿದೆ.

    Recommended Video

    ಮೈಸೂರಿನಲ್ಲಿ ಕೊರೊನ ವಾರಿಯರ್ ಪೊಲೀಸರಿಗೆ ಬೆಳ್ಳಿ ನಾಣ್ಯ ನೀಡಿದ ನಟಿ , ನಿರ್ಮಾಪಕಿ ಶೃತಿ ನಾಯ್ಡು | Corona Warriors

    ತಮ್ಮ ಕರ್ತವ್ಯದ ನಡುವೆ ಇವರು ಕೋವಿಡ್ ಸೋಂಕಿತರ ಜತೆ ಮುಖಾಮುಖಿ ಆಗಲೇಬೇಕಿದೆ. ಈ ಸಂದರ್ಭದಲ್ಲಿ ಇವರಿಗೇ ಸೋಂಕು ತಗುಲುವ ಅಪಾಯವಿದ್ದರೂ ಇವರು ಕರ್ತವ್ಯದಿಂದ ವಿಮುಖರಾಗಿಲ್ಲ. ಇವರ ಸೇವೆ ಗುರುತಿಸಿ ನಾಗರಿಕರು ದೇಶದ ಹಲವೆಡೆ ಹೂಗಳನ್ನು ಎರಚಿ ಕೃತಜ್ಞತೆ ಸಲ್ಲಿಸಿದ್ದನ್ನು ನೀವು ಓದಿರುತ್ತೀರಿ. ಜೀವದ ಹಂಗು ತೊರೆದು, ಕೊರೋನಾ ತಡೆಗಟ್ಟುವಲ್ಲಿ ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ನಟಿ ಹಾಗೂ ನಿರ್ಮಾಪಕಿ ಶೃತಿ ನಾಯ್ಡು ವಿಶೇಷ ರೀತಿಯಲ್ಲಿ ಧನ್ಯವಾದ ಸಲ್ಲಿಸಿದ್ದಾರೆ.

    ಪೊಲೀಸರಿಗೆ ನಾಣ್ಯ

    ಪೊಲೀಸರಿಗೆ ನಾಣ್ಯ

    ವಿಭಿನ್ನ ವಿನ್ಯಾಸದಲ್ಲಿ ಸಿದ್ಧಪಡಿಸಿರುವ ಬಾಕ್ಸ್ ವೊಂದರಲ್ಲಿ 20 ಗ್ರಾಂ ತೂಕದ ಬೆಳ್ಳಿ ನಾಣ್ಯವನ್ನಿಟ್ಟು ಅದನ್ನು ನೀಡುವ ಮೂಲಕ ಮೈಸೂರಿನ ಪೊಲೀಸರಿಗೆ ಶ್ರುತಿ ನಾಯ್ಡು ಕೃತಜ್ಞತೆ ಸಲ್ಲಿಸಿದ್ದಾರೆ. ಈಗಾಗಲೇ ಕೊರೊನಾ ವಾರಿಯರ್ಸ್‌ ಮತ್ತು ಲಾಕ್​ಡೌನ್​ ಹಿನ್ನೆಲೆ ಹಸಿವಿನಿಂದ ಬಳಲುತ್ತಿದ್ದ ಅನೇಕ ಕುಟುಂಬಗಳಿಗೆ ಶ್ರುತಿ ನೆರವಾಗಿದ್ದಾರೆ. ಮೈಸೂರಿನ ಸಮೀಪದ ಕಾಡಂಚಿನ ಜನರಿಗೂ ಆಹಾರದ ಕಿಟ್ ತಲುಪಿಸಿ, ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅಲ್ಲದೇ ತಮ್ಮದೇ ಒಡೆತನದ ಮೈಸೂರು ಮಿರ್ಚಿ ರೆಸ್ಟೋರೆಂಟ್ ಮೂಲಕವೂ ಜನರಿಗೆ ನೆರವಾಗಿದ್ದಾರೆ.

    ನಿಜವಾದ ನಷ್ಟ ಯಾರಿಗೆ?: ನೊಂದ ಸಿನಿಮಾ ತಂತ್ರಜ್ಞನೊಬ್ಬನ ಅಳಲಿನ ಪತ್ರನಿಜವಾದ ನಷ್ಟ ಯಾರಿಗೆ?: ನೊಂದ ಸಿನಿಮಾ ತಂತ್ರಜ್ಞನೊಬ್ಬನ ಅಳಲಿನ ಪತ್ರ

    ಕುವೆಂಪು ನಗರ ಠಾಣೆ

    ಕುವೆಂಪು ನಗರ ಠಾಣೆ

    ಮೈಸೂರಿನ ಕುವೆಂಪು ನಗರದಲ್ಲಿ ವಾಸವಾಗಿರುವ ಶ್ರುತಿನಾಯ್ಡು, ಕುವೆಂಪು ನಗರ ಠಾಣೆಗೆ ತೆರಳಿ 90 ಪೊಲೀಸ್​ ಸಿಬ್ಬಂದಿಗೆ ಬೆಳ್ಳಿ ನಾಣ್ಯ ನೀಡಿ ಕೃತಜ್ಞತೆ ಸಲ್ಲಿಸಿದ್ದಾರೆ. ರೆಡ್ ಝೋನ್​​ನಲ್ಲಿದ್ದ ಮೈಸೂರನ್ನು ಗ್ರೀನ್ ಝೋನ್​ನತ್ತ ತರುವಲ್ಲಿ ಶ್ರಮಿಸುತ್ತಿರುವ ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಮತ್ತು ಮೈಸೂರು ನಗರ ಪೊಲೀಸ್ ಕಮಿಷನರ್ ಡಾ. ಚಂದ್ರಗುಪ್ತ ಅವರನ್ನು ಈ ಸಂದರ್ಭದಲ್ಲಿ ಶ್ರುತಿ ನಾಯ್ಡು ಸ್ಮರಿಸಿದರು.

    ರಜೆ ಇಲ್ಲದೆ ಕೆಲಸ ಮಾಡಿದ್ದಾರೆ

    ರಜೆ ಇಲ್ಲದೆ ಕೆಲಸ ಮಾಡಿದ್ದಾರೆ

    ನಾವು ಇಂದು ಮನೆಯಲ್ಲಿ ಆರಾಮಾಗಿ ಇರಬೇಕಾದರೆ ಪೊಲೀಸ್ ಸಿಬ್ಬಂದಿಯ ಶ್ರಮ ಅಪಾರ. ಅಪಾಯಕಾರಿ ಸ್ಥಳಗಳಲ್ಲೂ ರಜೆ ಪಡೆಯದೆ ಡ್ಯೂಟಿ ಮಾಡಿದ್ದಾರೆ. ಲಾಕ್ ಡೌನ್ ಕಾರಣದಿಂದಾಗಿ ನಾನೂ ಮೈಸೂರಿನಲ್ಲಿ ಇರಬೇಕಾಯಿತು ಎಂದು ತಿಳಿಸಿದರು.

    ಅವರ ಕಾರ್ಯಕ್ಕೆ ನನ್ನ ಕೃತಜ್ಞತೆ

    ಅವರ ಕಾರ್ಯಕ್ಕೆ ನನ್ನ ಕೃತಜ್ಞತೆ

    'ಪ್ರತಿ ದಿನವೂ ಪೊಲೀಸ್ ಅಧಿಕಾರಿಗಳು ಮತ್ತು ಅವರ ಸಿಬ್ಬಂದಿಯ ಕೆಲಸ ಕಾರ್ಯ ನೋಡುತ್ತಿದ್ದೇವೆ. ಹಗಲಿರುಳು ಕೆಲಸ ಮಾಡಿದ್ದಾರೆ. ಎಷ್ಟೇ ಒತ್ತಡವಿದ್ದರೂ ಶಾಂತಿ ರೀತಿಯಲ್ಲಿ ವರ್ತಿಸಿ ಜನಸೇವೆಯಲ್ಲಿ ತೊಡಗಿದ್ದಾರೆ. ಜನರ ಸಹಾಯಕ್ಕೆ ನಿಂತಿದ್ದಾರೆ. ಅವರ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಬೇಕೆನ್ನಿಸಿತು. ಹಾಗಾಗಿ ಈ ಮೂಲಕ ಸಲ್ಲಿಸಿದ್ದೇನೆ' ಎಂದು ಶ್ರುತಿ ಹೇಳಿದರು. ಕಾರ್ಯಕ್ರಮದಲ್ಲಿ ಎಸಿಪಿ ಪೂರ್ಣಚಂದ್ರ ತೇಜಸ್ವಿ, ಇನ್ಸ್‌ಪೆಕ್ಟರ್ ರಾಜು ಜಿ.ಸಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

    English summary
    Producer Shruti Naidu distributed silver coins to police personnel in Mysuru as a gift for their service.
    Monday, May 11, 2020, 16:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X