ದರ್ಶನ್ ಗೆ ಇರೋ ಕ್ರೇಜ್ ನೋಡಿ ಬೆರಗಾದ್ರು ನಿರ್ಮಾಪಕಿ ಶೈಲಜಾ
ದರ್ಶನ್ ಅಂದರೆನೇ ಕ್ರೇಜ್. ಅದು ಯಾವ ಸಿನಿಮಾವೇ ಆಗಿರಲಿ ಅದರ ಅಬ್ಬರ ಬಲು ಜೋರಾಗಿರುತ್ತದೆ. ಅದರಲ್ಲಿಯೂ 'ಯಜಮಾನ' ಸಿನಿಮಾದ ಮೇಲೆ ಅಭಿಮಾನಿಗಳು ಇಟ್ಟಿರುವ ನಿರೀಕ್ಷೆ ಬಹಳ ದೊಡ್ಡದಿದೆ.
'ಯಜಮಾನ' ಕ್ರೇಜ್ ಸಿಕ್ಕಾಪಟ್ಟೆ ಜೋರಾಗಿದೆ. ನಾಲ್ಕು ಹಾಡುಗಳು ಸೂಪರ್ ಹಿಟ್ ಆಗಿದೆ. ಟ್ರೇಲರ್ ಬರೋಬ್ಬರಿ 17 ಮಿಲಿಯನ್ ಗಡಿ ದಾಟುತ್ತಿದೆ. ದರ್ಶನ್ ಅವರಿಗೆ ಇರುವ ಈ ಮಟ್ಟದ ಕ್ರೇಜ್ ನೋಡಿ ಸ್ವತಃ ನಿರ್ಮಾಪಕಿ ಶೈಲಜಾ ನಾಗ್ ಬೆರಗಾಗಿದ್ದಾರಂತೆ.
ನಿನ್ನೆ ಚಿತ್ರದ ಪತ್ರಿಕಾಗೋಷ್ಠಿಯ ವೇಳೆ ಮಾತನಾಡಿದ ನಿರ್ಮಾಪಕಿ ಶೈಲಜಾ ನಾಗ್ ಚಿತ್ರದ ಅನೇಕ ವಿಷಯಗಳನ್ನು ಹಂಚಿಕೊಂಡರು. ಚಿತ್ರದ ಹಾಡುಗಳು ಹಾಗೂ ಟ್ರೇಲರ್ ದೊಡ್ಡ ಮಟ್ಟದಲ್ಲಿ ಹಿಟ್ ಆಗಲು ದರ್ಶನ್ ಕಾರಣ ಎಂದು ಹೇಳಿದ್ದಾರೆ.
ಅಂದಹಾಗೆ, ಚಿತ್ರದ ಬಗ್ಗೆ ಶೈಲಜಾ ನಾಗ್ ಆಡಿದ ಮಾತುಗಳು ಮುಂದಿವೆ ಓದಿ..

ಒಂದು ಅದ್ಬುತ ಅನುಭವ
''ಯಜಮಾನ' ಎನ್ನುವುದು ಒಂದು ಅದ್ಬುತ ಅನುಭವ. 2014 ರಲ್ಲಿ ನಾನು ಹರಿಕೃಷ್ಣ, ದರ್ಶನ್ ಸರ್ ಮನೆಗೆ ಹೋದ್ವಿ. ಮೊದಲ ಸಲ ಮಾತಾಡಿದಾಗಲೇ ಡೇಟ್ ನೀಡಿದರು. ಸಿನಿಮಾ ಮುಗಿಯುವವರೆಗೆ ಯಾವ ಸಣ್ಣ ಸಮಸ್ಯೆ ಆಗಲೇ ಇಲ್ಲ. ಅದಕ್ಕೆ ಕಾರಣ ದರ್ಶನ್. ಅವರು ಈ ಪ್ರಾಜೆಕ್ಟ್ ಗೆ ದೊಡ್ಡ ಬೆನ್ನೆಲುಬು ಆಗಿದ್ದರು''. - ಶೈಲಜಾ ನಾಗ್, ನಿರ್ಮಾಪಕಿ

ದರ್ಶನ್ ಜೊತೆ ಸಿನಿಮಾ ಮಾಡುವ ಕನಸು
''ಎಲ್ಲ ಕಲಾವಿದರು ತುಂಬ ಸಹಕಾರ ನೀಡಿದರು. ಶಶಿಧರ್ ಅಡಪ ಅವರ ಸೆಟ್ ತುಂಬ ಚೆನ್ನಾಗಿದೆ. ಕ್ಯಾಮರಾ ವರ್ಕ್ ಸೂಪರ್ ಆಗಿದೆ. ದರ್ಶನ್ ಜೊತೆಗೆ ಸಿನಿಮಾ ಮಾಡಬೇಕು ಅಂತ ಕನಸು ಇತ್ತು. ಮೊದಲು ಹರಿಕೃಷ್ಣ ಅವರು ಈ ಚಿತ್ರದ ಸಂಗೀತ ನಿರ್ದೇಶಕರು ಮಾತ್ರ ಆಗಿದ್ದರು. ಆದರೆ, ಕಾಲಕ್ರಮೇಣ ಅವರು ನಿರ್ದೇಶಕರಾಗುವ ಹಾಗೆ ಆಯ್ತು.'' - ಶೈಲಜಾ ನಾಗ್, ನಿರ್ಮಾಪಕಿ

ನಾವು ನೋಡಿದರ ರೆಕಾರ್ಡ್
''ಎಲ್ಲ ಹಾಡುಗಳು ಹಿಟ್ ಆಗಿವೆ. ನಾವು ನೋಡಿದರ ರೆಕಾರ್ಡ್ ಅನ್ನು ಹಾಡುಗಳು ಮಾಡಿವೆ. ಆನೆ ನೆಡೆದಂದೆ ದಾರಿ ಅಂತ್ತಾರೆ ಆದರೆ, ದರ್ಶನ್ ಎರಡು ಆನೆ ಇದ್ದ ಹಾಗೆ. ಕ್ರೇಜ್..ಎನ್ನುವುದರ ಅಪ್ಪನ ಅಪ್ಪ ಅವರು. ಆ ತರ ಸಾಂಗ್ ಗಳು ಟ್ರೇಲರ್ ಗಳು ಹಿಟ್ ಆಗಿವೆ. ಈ ಮಟ್ಟಿಗೆ ಹಾಡು ಹೋಗಿದೆ ಅಂದರೆ ಅದಕ್ಕೆ ಕಾರಣ ದರ್ಶನ್ - ಶೈಲಜಾ ನಾಗ್, ನಿರ್ಮಾಪಕಿ

ಕನ್ನಡದಲ್ಲಿ ಮಾತ್ರ ಬಿಡುಗಡೆ
''ಚಿತ್ರವನ್ನು ಕನ್ನಡದಲ್ಲಿ ಮಾತ್ರ ಬಿಡುಗಡೆ ಮಾಡುತ್ತಿದ್ದೇವೆ. ವಿದೇಶ ಹಾಗೂ ಇಡೀ ಭಾರತದ ತುಂಬ ಬೇರೆ ಬೇರೆ ರಾಜ್ಯಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಮಾರ್ಚ್ 1 ಸಿನಿಮಾ ಬಿಡುಗಡೆಯಾಗುತ್ತಿದೆ. ಸಿನಿಮಾದ ಮೇಲೆ ನಮಗೆ ನಂಬಿಕೆ ಇದೆ. ಅದಕ್ಕೆ ಈ ಸಿನಿಮಾವನ್ನು ನಾವೇ ವಿತರಣೆಯನ್ನು ಮಾಡುತ್ತಿದ್ದೇವೆ.'' - ಶೈಲಜಾ ನಾಗ್, ನಿರ್ಮಾಪಕಿ


Click it and Unblock the Notifications











