ನಿರ್ಮಾಪಕ ಉಮಾಪತಿ ವಿರುದ್ಧ ಬಾಂಬೆ ರವಿಗೆ ಸುಪಾರಿ ನೀಡಲು ಯತ್ನಿಸಿದ್ದು ಯಾರು?

By ಫಿಲ್ಮಿಬೀಟ್ ಡೆಸ್ಕ್

ನಟೋರಿಯಸ್ ರೌಡಿ ಬಾಂಬೆ ರವಿ ಕೊರೊನಾದಿಂದ ಸಾವಿಗೀಡಾಗಿದ್ದಾನೆ. ಆದರೆ ಈ ಹಿಂದೆ, ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಜೊತೆ ಬಾಂಬೆ ರವಿ ಫೋನ್‌ನಲ್ಲಿ ನಡೆಸಿದ್ದ ಸಂಭಾಷಣೆಯ ಆಡಿಯೊ ಇದೀಗ ವೈರಲ್ ಆಗಿದೆ.

ಉಮಾಪತಿ ಹಾಗೂ ಬಾಂಬೆ ರವಿ ನಡುವೆ ನಡೆದ ಸಂಭಾಷಣೆಯಲ್ಲಿ ಬಾಂಬೆ ರವಿ, ಉಮಾಪತಿ ಶ್ರೀನಿವಾಸಸ್‌ಗೆ ಕ್ಷಮೆ ಕೇಳಿರುವುದಲ್ಲದೆ, ಉಮಾಪತಿ ವಿರುದ್ಧ ಸುಫಾರಿ ನೀಡಲು ಹಲವರು ಯತ್ನಿಸಿದ್ದರು ಎಂಬುದನ್ನು ಸ್ವತಃ ಬಾಂಬೆ ರವಿ ಹೇಳಿದ್ದಾನೆ.

ಉಮಾಪತಿ ಶ್ರೀನಿವಾಸ್ ಹಾಗೂ ಅವರ ಸಹೋದರನ ಮೇಲೆ ಕೊಲೆ ಮಾಡಲು ಹೊಂಚು ಹಾಕಿದ್ದ ಕೆಲವರನ್ನು ಕೆಲ ತಿಂಗಳ ಹಿಂದೆ ಬೆಂಗಳೂರು ಪೊಲೀಸರು ಬಂಧಿಸಿದ್ದರು. ಆಗ ಬಾಂಬೆ ರವಿ ಹೆಸರು ಸಹ ಕೇಳಿಬಂದಿತ್ತು.

ವೈರಲ್ ಆಗಿರುವ ಆಡಿಯೋದಲ್ಲಿ, ''ಯಾರೊ ಸೈಕಲ್ ರವಿ ಅಂತೆ ಅವನ ಬಳಿ ನಾನು ಹತ್ತು ಕೋಟಿ ತಗೊಂಡಿದ್ದೀನಿ ಎಂದು ಹೇಳಿದರು. ಒಂದು ವಾರ ನಾನಂತೂ ಬಹಳ ಕಷ್ಟಪಟ್ಟೆ'' ಎಂದಿದ್ದಾರೆ ಉಮಾಪತಿ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಬಾಂಬೆ ರವಿ, ''ನಮಗೂ ನಿಮ್ಮ ಮೇಲೆ ಕೋಪ ಇತ್ತು. ನಾವೇನೂ ತಪ್ಪು ಮಾಡಿಲ್ಲ. ನೀವು ನಮ್ಮ ವಿರುದ್ಧ ಮಾತನಾಡಿಬಿಟ್ಟಿರಿ, ನಾವು ಮಾತನಾಡಿದೆವು. ನಾವೂ ಏನೋ ಗೊತ್ತಿಲ್ಲದೆ ತಪ್ಪು ಮಾಡಿರ್ತೀವಿ. ನಮ್ಮ ಕಡೆಯಿಂದ ತಪ್ಪು ಆಗಿದೆ'' ಎಂದಿದ್ದಾನೆ.

ದುಡ್ಡು ಬೇಕಾಗಿದ್ದಿದ್ದರೆ ನೇರವಾಗಿ ಕಾಲ್ ಮಾಡ್ತಿದ್ದೆ: ಬಾಂಬೆ ರವಿ

ದುಡ್ಡು ಬೇಕಾಗಿದ್ದಿದ್ದರೆ ನೇರವಾಗಿ ಕಾಲ್ ಮಾಡ್ತಿದ್ದೆ: ಬಾಂಬೆ ರವಿ

ಮುಂದುವರೆದು, ''ನಾವು ಯಾವತ್ತೂ ಒಂದು ದಿನವೂ ನಿಮ್ಮ ಬಗ್ಗೆ ಆಲೋಚನೆ ಮಾಡಿಲ್ಲ. ನಮಗೆ ದುಡ್ಡೇ ಬೇಕಿದ್ದಿದ್ದರೆ, ನಾನು ನೇರವಾಗಿ ನಿಮಗೆ ಫೋನ್ ಮಾಡಿ, ನನಗೆ ದುಡ್ಡು ಬೇಕು ಇಲ್ಲಾ ಅಂದ್ರೆ, ಹಾಗೆ ಮಾಡಿಸ್ತೀನಿ, ಹೀಗೆ ಮಾಡಿಸ್ತೀನಿ ಅಂತ ಬೆದರಿಕೆ ಹಾಕಿರುತ್ತಿದ್ದೆ. ನನಗೆ ನೀವು ಯಾರೆಂಬುದು ಗೊತ್ತಿಲ್ಲ, ನಿಮ್ಮ ಮೇಲೆ ದುಷ್ಮನಿ ಇಲ್ಲ, ನಿಮ್ಮ ಬಳಿ ಇರುವ ದುಡ್ಡಿನ ಮೇಲೆ ನಾನು ಗುರಿ ಇಟ್ಟುಕೊಂಡಿಲ್ಲ. ಇದೇ ಮೊದಲ ಬಾರಿಗೆ ನಾನು ನಿಮಗೆ ಕರೆ ಮಾಡುತ್ತಿದ್ದೀನಿ'' ಎಂದಿದ್ದಾನೆ ಬಾಂಬೆ ರವಿ.

ನನ್ನನ್ನು ಸಂಪರ್ಕಿಸಲು ಹಲವರು ಯತ್ನಿಸಿದ್ದರು: ಬಾಂಬೆ ರವಿ

ನನ್ನನ್ನು ಸಂಪರ್ಕಿಸಲು ಹಲವರು ಯತ್ನಿಸಿದ್ದರು: ಬಾಂಬೆ ರವಿ

''ಇವತ್ತು ಯಾಕೆ ನಾನು ಫೋನ್ ಮಾಡಿದೆ ಎಂದರೆ ಇತ್ತೀಚೆಗೆ ಯಾರ್ಯಾರೊ ಬರ್ತಾ ಇದಾರೆ. ಯಾರೊ ಬರ್ತಾರೆ ನಮ್ಮ ಹೆಸರು ತಗೋತಾರೆ. ಬಾಂಬೆ ಪಾತ್ರ ಇದೆ ಅಂತಾರೆ. ನಿಮ್ಮದೇನೋ ಸಮಸ್ಯೆ ಆದಾಗ ಎಷ್ಟು ಜನ ನಮ್ಮನ್ನು ಸಂಪರ್ಕಿಸಲು ಯತ್ನಿಸಿದ್ದರು ಗೊತ್ತಾ? ನಿಮ್ಮ ವಿರುದ್ಧ ಎಂಥೆಂತವರೊ ಸಂಪರ್ಕ ಮಾಡಲು ಯತ್ನಿಸಿದ್ದಾರೆ. ದೊಡ್ಡ-ದೊಡ್ಡ ಹೆಸರುಗಳು ಅವೆಲ್ಲ ಹೇಳಿದರೆ ತಪ್ಪಾಗುತ್ತದೆ. ಆದರೆ ನನಗೆ ಇದಕ್ಕೂ ಸಂಬಂಧವಿಲ್ಲ ನನ್ನ ನಂಬರ್‌ ಅನ್ನೇ ಕೊಡಬೇಡ ಎಂದು ಹೇಳಿದ್ದೆ'' ಎಂದಿದ್ದಾನೆ ಬಾಂಬೆ ರವಿ.

ನಿಮ್ಮ ಪೋಷಕರ ಬಳಿ ಕ್ಷಮೆ ಕೇಳುತ್ತೇನೆ: ಬಾಂಬೆ ರವಿ

ನಿಮ್ಮ ಪೋಷಕರ ಬಳಿ ಕ್ಷಮೆ ಕೇಳುತ್ತೇನೆ: ಬಾಂಬೆ ರವಿ

''ನನ್ನ ಕಡೆಯಿಂದ ತಪ್ಪಾಗಿದೆ. ನೀವು ಹೇಳಿದ್ದೀರ ನಿಮ್ಮ ಮನೆಯವರು ಬೇಸರ ಪಟ್ಟುಕೊಂಡಿದ್ದಾರೆ ಎಂದು ಹೇಳಿದ್ದೀರ. ನಾನು ಸಂಜೆ ಕಾಲ್ ಮಾಡ್ತೀನಿ, ಹಾಲ್‌ನಲ್ಲಿ ಫೋನ್ ಇಟ್ಟು ಲೌಡ್‌ ಸ್ಪೀಕರ್ ಆನ್ ಮಾಡಿ. ನಾನು ನಿಮ್ಮ ತಂದೆ, ತಾಯಿ ಬಳಿ ಕ್ಷಮೆ ಕೇಳಿಬಿಡ್ತೀನಿ. ಪಾಪ ಅವರೂ ಹೆದರಿಕೊಂಡಿರ್ತಾರೆ. ಆ ಮೇಲೆ ನಾನು ನಿಮಗೆ ಫೋನ್ ಸಹ ಮಾಡುವುದಿಲ್ಲ. ನನಗೆ ಇದೆಲ್ಲ ಬೇಡದೇ ಇರೊ ವಿಷಯ'' ಎಂದಿದ್ದಾನೆ ರವಿ.

ಎಲ್ಲರಿಗೂ ಅವರದ್ದೇ ಆದ ಕಷ್ಟಗಳಿರುತ್ತವೆ: ಉಮಾಪತಿ

ಎಲ್ಲರಿಗೂ ಅವರದ್ದೇ ಆದ ಕಷ್ಟಗಳಿರುತ್ತವೆ: ಉಮಾಪತಿ

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಉಮಾಪತಿ, ''ಹೌದು ರವಿ ಅವರೇ, ನಿಮಗೂ ಒಳ್ಳೆಯದಾಗಬೇಕು, ನಮಗೂ ಒಳ್ಳೆಯದಾಗಬೇಕು. ಅವರವರ ಕಷ್ಟಗಳು ಅವರವರಿಗೆ ಇರುತ್ತದೆ'' ಎಂದಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ರವಿ, ''ಹೌದು, ಇದೆಲ್ಲ ನೆಮ್ಮದಿ ಇರಲ್ಲ. ಏನ್ ಮಾಡ್ತಾ ಇದ್ದಾನೊ ರವಿ ಅನ್ಕೋತಾ ಇರ್ತೀರಾ ಆದರೆ ನಾನು ಇಲ್ಲಿ ನನ್ನ ಪಾಡಿಗೆ ನಾನು ಇದ್ದೀನಿ. ನನ್ನ ಫೋಕಸ್ ಬೇರೆ ಕಡೆ ಇದೆ. ಈಗ ನಮ್ಮಿಂದ ತಪ್ಪು ಆಗಿದೆ ನಾನು ನಿಮ್ಮ ಪೋಷಕರಲ್ಲಿ ಕ್ಷಮೆ ಕೇಳಿ ಈ ವಿಷಯ ಇಲ್ಲಿಗೆ ಮುಗಿಸಿಬಿಡೋಣ'' ಎಂದಿದ್ದಾನೆ ರವಿ. ಇದಕ್ಕೆ ಪ್ರತಿಕ್ರಿಯಿಸಿರುವ ಉಮಾಪತಿ ಶ್ರೀನಿವಾಸ್, ''ಸರಿ, ನಮ್ಮ ಮೇಲೆ ಅಷ್ಟು ಮಾತ್ರ ಅಭಿಮಾನ ಇಟ್ಟುಕೊಂಡಿರುವುದಕ್ಕೆ ಥ್ಯಾಂಕ್ಸ್, ಆ ಗೌರವ ಉಳಿಸಿಕೊಳ್ಳಲು ಏನು ಮಾಡಬೇಕೊ ಅದನ್ನು ಮಾಡುತ್ತೇನೆ'' ಎಂದಿದ್ದಾರೆ ಉಮಾಪತಿ.

ಜಯನಗರದಲ್ಲಿ ಪ್ರಕರಣ ದಾಖಲಾಗಿತ್ತು

ಜಯನಗರದಲ್ಲಿ ಪ್ರಕರಣ ದಾಖಲಾಗಿತ್ತು

ಉಮಾಪತಿ ಮತ್ತು ಅವರ ಸಹೋದರನ ಕೊಲೆ ಸಂಚು ಆರೋಪದಲ್ಲಿ ನೇಪಾಳ ಗಡಿಯ ಬಳಿ ರೌಡಿಶೀಟರ್ ರಾಜೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಬಾಂಬೆ ರವಿ ತಮ್ಮ ಅಣ್ಣನಿಗೆ ಕರೆ ಮಾಡಿ ಧಮ್ಕಿ ಹಾಕಿರುವ ಬಗ್ಗೆ ಸ್ವತಃ ಉಮಾಪತಿಯೇ ಹೇಳಿದ್ದರು. ಈಗ ಬಾಂಬೆ ರವಿ ನಿಧನ ಹೊಂದಿದ್ದು, ಉಮಾಪತಿ ವಿರುದ್ಧ ಬಾಂಬೆ ರವಿಗೆ ಸುಫಾರಿ ಕೊಟ್ಟವರು ಯಾರು, ಕೊಡಲು ಯತ್ನಿಸಿದವರು ಯಾರು ಎಂಬ ಅಂಶಗಳು ಹೊರಗೆ ಬರಬೇಕಿವೆ.

More from Filmibeat

English summary
Rowdy Bombay Ravi and producer Umapathi Srinivas's audio gets viral. In the audio Bombay Ravi said many people contacted him to give supari against Umapati Srivnias Gowda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X