For Quick Alerts
  ALLOW NOTIFICATIONS  
  For Daily Alerts

  Exclusive: ಉಮಾಪತಿ 'ಕ್ರಾಂತಿ' ಪ್ರಮೋಷನ್: "ನಮ್ಮದು ಸಿನಿಮಾ ಜಾತಿ.. ಇಲ್ಲಿ ಶಾಶ್ವತ ಶತ್ರುಗಳು ಯಾರು ಇಲ್ಲ"

  |

  ಬಾಕ್ಸಾಫೀಸ್ ಸುಲ್ತಾನ್ ದರ್ಶನ್ ನಟ ನಟನೆಯ 'ಕ್ರಾಂತಿ' ಸಿನಿಮಾ ಬಿಡುಗಡೆಗೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಈವರೆಗೆ ಚಿತ್ರತಂಡ ಯಾವುದೇ ಪ್ರಮೋಷನ್ ಮಾಡದೇ ಇದ್ದರೂ ಅಭಿಮಾನಿಗಳೇ ದೊಡ್ಡಮಟ್ಟದಲ್ಲಿ 'ಕ್ರಾಂತಿ' ಸಿನಿಮಾವನ್ನು ರಾಜ್ಯದ ಮೂಲೆ ಮೂಲೆಗೂ ಕೊಂಡೊಯ್ಯುವ ಪ್ರಯತ್ನ ಮಾಡ್ತಿದ್ದಾರೆ. ಇದೀಗ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಕೂಡ 'ಕ್ರಾಂತಿ' ಪೋಸ್ಟರ್ ಹಿಡಿದು ಬೆಂಬಲ ಸೂಚಿಸಿದ್ದಾರೆ.

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ರಾಬರ್ಟ್' ಚಿತ್ರವನ್ನು ಉಮಾಪತಿ ಶ್ರೀನಿವಾಸ್ ನಿರ್ಮಾಣ ಮಾಡಿದ್ದರು. ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಆದರೆ ನಂತರ ನಟ ದರ್ಶನ್ ಹೆಸರಿನಲ್ಲಿ 25 ಕೋಟಿ ರೂಪಾಯಿ ವಂಚನೆ ಯತ್ನ ಪ್ರಕರಣದಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹೆಸರು ಕೇಳಿಬಂದಿತ್ತು. ಈ ವಿಚಾರ ಕಳೆದ ವರ್ಷ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಕೋಲಾಹಲ ಸೃಷ್ಟಿಸಿತ್ತು. ದರ್ಶನ್ ಹಾಗೂ ಉಮಾಪತಿ ಇಬ್ಬರು ಸುದ್ದಿಗೋಷ್ಠಿಗಳನ್ನು ನಡೆಸಿ ತಮ್ಮ ತಮ್ಮ ವರ್ಷನ್‌ ಹೇಳಿದ್ದರು. ಕೊನೆಗೂ ಇಬ್ಬರು ಭೇಟಿ ಮಾಡಿ ಒಟ್ಟಿಗೆ ಫೋಟೊ ಕ್ಲಿಕ್ಕಿಸಿಕೊಂಡು ಎಲ್ಲ ಸುಖಾಂತ್ಯವಾಗಿದೆ ಎಂದಿದ್ದರು. ಆದರೂ ಈ ಪ್ರಕರಣದಿಂದ ಇಬ್ಬರೂ ದೂರಾಗುವಂತಾಯಿತು.

  Exclusive: ದರ್ಶನ್ ಬೇರೆ ಸಿನಿಮಾದಲ್ಲಿ ತರುಣ್ ಬ್ಯುಸಿ: 'ಸಿಂಧೂರ ಲಕ್ಷಣ'ದ ಕಥೆಯೇನು?Exclusive: ದರ್ಶನ್ ಬೇರೆ ಸಿನಿಮಾದಲ್ಲಿ ತರುಣ್ ಬ್ಯುಸಿ: 'ಸಿಂಧೂರ ಲಕ್ಷಣ'ದ ಕಥೆಯೇನು?

  25 ಕೋಟಿ ವಂಚನೆ ಯತ್ನ ಪ್ರಕರಣದ ನಂತರ ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇದೀಗ ಕಾರ್ಯಕ್ರಮವೊಂದರಲ್ಲಿ ಉಮಾಪತಿ ಶ್ರೀನಿವಾಸ್ 'ಕ್ರಾಂತಿ' ಸಿನಿಮಾ ಪೋಸ್ಟರ್ ಹಿಡಿದುಕೊಂಡಿರುವ ವಿಡಿಯೋ ಫುಲ್ ವೈರಲ್ ಆಗಿದೆ. ಈ ಬಗ್ಗೆ ಫಿಲ್ಮಿಬೀಟ್ ಜೊತೆ ಅವರು ಮಾತನಾಡಿದ್ದಾರೆ.

   ನಾವೆಲ್ಲಾ ಸಿನಿಮಾ ಜಾತಿಯವರು

  ನಾವೆಲ್ಲಾ ಸಿನಿಮಾ ಜಾತಿಯವರು

  ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ದೇವರಚಿಕ್ಕನಹಳ್ಳಿಯಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಉಮಾಪತಿ ಶ್ರೀನಿವಾಸ್ ಭಾಗಿ ಆಗಿದ್ದರು. ಈ ವೇಳೆ ವೇದಿಕೆಯಲ್ಲಿ 'ಕ್ರಾಂತಿ' ಸಿನಿಮಾ ಪೋಸ್ಟರ್ ಹಿಡಿದು ಕ್ಯಾಮರಾಗೆ ಪೋಸ್ ಕೊಟ್ಟಿದ್ದರು. ಈ ಬಗ್ಗೆ ಅವರು ಮಾತನಾಡಿದ್ದು, "ನಾವೆಲ್ಲಾ ಸಿನಿಮಾ ಜಾತಿ ಅಂತಾರಲ್ಲ, ಆ ರೀತಿ. ಜೊತೆ ನಮ್ಮ ಬ್ಯಾನರ್‌ನಲ್ಲಿ ದರ್ಶನ್ ಅವರು ಕೆಲಸ ಮಾಡಿದ್ದಾರೆ. ಏನೇ ನಡೆದಿರಬಹುದು. ಆದರೆ ನಮಗೆ ಅವರ ಮೇಲಿನ ಗೌರವ ಇದ್ದೇ ಇರುತ್ತದೆ. ಹೀರೊ ಆಗಿ ಅಲ್ಲದೇ ಇದ್ದರೂ ವ್ಯಕ್ತಿಗತವಾಗಿ ಅವರ ಮೇಲೆ ಗೌರವ ಇದ್ದೇ ಇರುತ್ತದೆ."

  'ಕ್ರಾಂತಿ' ಕೆಫೆ ಆರಂಭಿಸಿದ ಬೆಂಗಾಲಿ ಹುಡುಗ: ಈತನ ಆಸೆ ಈಡೇರಿಸುತ್ತಾರಾ ನಟ ದರ್ಶನ್?'ಕ್ರಾಂತಿ' ಕೆಫೆ ಆರಂಭಿಸಿದ ಬೆಂಗಾಲಿ ಹುಡುಗ: ಈತನ ಆಸೆ ಈಡೇರಿಸುತ್ತಾರಾ ನಟ ದರ್ಶನ್?

   ಇಲ್ಲಿ ಶಾಶ್ವತ ಶತ್ರುಗಳು ಯಾರು ಇಲ್ಲ

  ಇಲ್ಲಿ ಶಾಶ್ವತ ಶತ್ರುಗಳು ಯಾರು ಇಲ್ಲ

  ಯಾರಿಗಾಗಿ ಅಲ್ಲದೇ ಇದ್ದರೂ. ನಿರ್ಮಾಪಕರಿಗಾಗಿ ನಾವೆಲ್ಲ ಒಟ್ಟಿಗೆ ಇರುತ್ತೇವೆ. ನಿರ್ಮಾಪಕರ ಕಷ್ಟ ಏನು ಎನ್ನುವುದು ನಮಗೆ ಗೊತ್ತು. ಯಾರದೋ ತಪ್ಪಿಗೆ ಮತ್ಯಾರೋ ಹೊಣೆಯಾಗೋದು ಸರಿಯಲ್ಲ. ಇಲ್ಲಿ ಶಾಶ್ವತ ಶತ್ರುಗಳು ಯಾರು ಇಲ್ಲ, ಶಾಶ್ವತ ಮಿತ್ರರು ಯಾರು ಇಲ್ಲ. ಆ ಘಟನೆ ಮುಗೀತು. ಅದರ ಬಗ್ಗೆ ದರ್ಶನ್‌ ಅವರು ಹೇಳಿಕೆ ಕೊಟ್ಟಿದ್ದಾರೆ. ನಾನು ಹೇಳಿಕೆ ಕೊಟ್ಟಿದ್ದೇನೆ, ಅದು ಅಲ್ಲಿಗೆ ಮುಕ್ತಾಯವಾಯಿತು. ಅವರ ಜೊತೆ ಸಿನಿಮಾ ಮಾಡಿದ್ದೀನಿ, ಅಷ್ಟು ದಿನ ನಮ್ಮನ್ನು ಚೆನ್ನಾಗಿ ನಡೆಸಿಕೊಂಡಿದ್ದಾರೆ. ಅವರ ಬಗ್ಗೆ ಗೌರವ ಇದೆ" ಎಂದು ಉಮಾಪತಿ ಶ್ರೀನಿವಾಸ್ ಹೇಳಿದ್ದಾರೆ.

   'ಸಿಂಧೂರ ಲಕ್ಷ್ಮಣ' ಸಿನಿಮಾ ಕಥೆ ಏನಾಯ್ತು?

  'ಸಿಂಧೂರ ಲಕ್ಷ್ಮಣ' ಸಿನಿಮಾ ಕಥೆ ಏನಾಯ್ತು?

  'ರಾಬರ್ಟ್' ಸಿನಿಮಾ ಬೆನ್ನಲ್ಲೇ ಅದೇ ಕಾಂಬಿನೇಷನ್‌ನಲ್ಲಿ 'ಸಿಂಧೂರ ಲಕ್ಷ್ಮಣ' ಸಿನಿಮಾ ಶುರುವಾಗಬೇಕಿತ್ತು. ಆದರೆ 25 ಕೋಟಿ ರೂ. ಲೋನ್ ಪ್ರಕರಣದ ನಂತರ ದರ್ಶನ್ ಈ ಸಿನಿಮಾ ಮಾಡುವುದು ಅನುಮಾನ ಎನ್ನುವ ಚರ್ಚೆ ನಡೀತಿತ್ತು. ಆದರೆ ಇತ್ತೀಚೆಗೆ ಉಮಾಪತಿ ಶ್ರೀನಿವಾಸ್ ಮಾತನಾಡಿ ದರ್ಶನ್‌ ಅವ್ರನ್ನೇ ಹೀರೊ ಮಾಡಿ ಸಿನಿಮಾ ಮಾಡುವುದಾಗಿ ಹೇಳಿದ್ದರು. ಸದ್ಯ ಸ್ಕ್ರಿಪ್ಟ್ ವರ್ಕ್‌ ನಡೀತಿದೆ. ಫೈನಲ್ ಆದಮೇಲೆ ದರ್ಶನ್‌ ಭೇಟಿ ಮಾಡಿ ಕಥೆ ಹೇಳುವುದಾಗಿಯೂ ಹೇಳಿದ್ದರು.

   'ಉಪಾಧ್ಯಕ್ಷ' ಸಿನಿಮಾ ನಿರ್ಮಾಣ

  'ಉಪಾಧ್ಯಕ್ಷ' ಸಿನಿಮಾ ನಿರ್ಮಾಣ

  ಸದ್ಯ ಉಮಾಪತಿ ಶ್ರೀನಿವಾಸ್ 'ಉಪಾಧ್ಯಕ್ಷ' ಚಿತ್ರವನ್ನು ನಿರ್ಮಾಣ ಮಾಡ್ತಿದ್ದಾರೆ. 3 ತಿಂಗಳ ಹಿಂದೆಯಷ್ಟೆ ಮುಹೂರ್ತ ನೆರವೇರಿಸಿ, ಚಿತ್ರಕ್ಕೆ ಚಾಲನೆ ನೀಡಿದ್ದರು. ಹಾಸ್ಯ ನಟ ಚಿಕ್ಕಣ್ಣ ಈ ಚಿತ್ರದಲ್ಲಿ ಹೀರೊ ಆಗಿ ನಟಿಸ್ತಿದ್ದು, 'ದಿಲ್‌ವಾಲಾ' ಖ್ಯಾತಿಯ ಅನಿಲ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಇದೊಂದು ಸಿನಿಮಾ ಬಿಟ್ಟರೆ ಫಿಲ್ಮ್ ಸಿಟಿ ನಿರ್ಮಾಣದ ಕಡೆ ಉಮಾಪತಿ ಶ್ರೀನಿವಾಸ್ ಹೆಚ್ಚು ಗಮನ ಹರಿಸಿದ್ದಾರೆ.

  English summary
  Producer Umapathi Srinivas join Hands for Challenging Star Darshan Starrer Kranti Movie Promotion. Know More.
  Monday, September 19, 2022, 14:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X