ನನ್ನನ್ನು ಗುಂಡಿಟ್ಟು ಸಾಯಿಸ್ತಾರಾ, ಆ ತಾಕತ್ತು ಇದಿಯಾ: ನಿರ್ಮಾಪಕ ಉಮಾಪತಿ ತಿರುಗೇಟು
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಿನಲ್ಲಿ 25 ಕೋಟಿ ವಂಚನೆ ಪ್ರಕರಣ ಸಂಬಂಧ ನಿರ್ಮಾಪಕ ಉಮಾಪತಿ ಪ್ರತಿಕ್ರಿಯೆ ನೀಡಿದ್ದಾರೆ. ನಟ ದರ್ಶನ್ ಮತ್ತು ಸ್ನೇಹಿತರು ಪ್ರೆಸ್ ಮೀಟ್ ನಡೆಸಿದ ಬೆನ್ನಲ್ಲೇ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಕೂಡ ಪ್ರೆಸ್ ನಡೆಸಿದ್ದಾರೆ.
"ಇನ್ನೊಬ್ಬರ ಭಿಕ್ಷೆಯಿಂದ ನಾನು ಜೀವನ ಮಾಡುತ್ತಿಲ್ಲ. ಅವರು ಆರೋಪ ಮಾಡುತ್ತಿದ್ದಾರೆ ಅಂತ ನಾನು ಅವರ ಮೇಲೆ ಆರೋಪ ಮಾಡಲ್ಲ. ಈಗಾಗಲೇ ಅರ್ಧ ದಾರಿಗೆ ಬಂದಿದ್ದೀನಿ. ಇನ್ನು ಅರ್ಧ ದಾರಿಗೆ ಬರಲು ನನಗೇನು ಕಷ್ಟ ಅಲ್ಲ. ನನ್ನನ್ನು ಗುಂಡಿಟ್ಟು ಸಾಯಿಸುತ್ತಾರಾ, ಆ ತಕತ್ತು ಇದಿಯಾ?" ಎಂದು ಉಮಾಪತಿ ಪ್ರಶ್ನೆ ಮಾಡಿದ್ರು.
"ಕಾನೂನಿನ ಮೇಲೆ ನಂಬಿಕೆ ಇದೆ, ನ್ಯಾಯ ಇದೆ. ಇನ್ನು ಸ್ವಲ್ಪ ಸಮಯ ಕಾಯಿರಿ ಗೊತ್ತಾಗುತ್ತೆ. ಯಾರ ತಪ್ಪು ಎನ್ನುವುದು" ಎಂದಿದ್ದಾರೆ. "ಅಂದು

ರಾಕೇಶ್ ಪಾಪಣ್ಣ, ಹರ್ಷ ಮಿಲಂಟ, ರಾಕೇಶ್ ಶರ್ಮ ಅವರು ಪೊಲೀಸ್ ಜೊತೆ ಮಾತನಾಡಿದ್ರು ಆ ಸಮಯದಲ್ಲಿ ಅರುಣಾ ಕುಮಾರಿ ಇದ್ರು. ಆದರೆ ನನ್ನನ್ನು ಯಾಕೆ ಕರಿಲಿಲ್ಲ. ನನ್ನನ್ನು ಯಾಕೆ ದೂರ ಇಡಬೇಕಿತ್ತು" ಎಂದು ಉಮಾಪತಿ ಆರೋಪಿಸಿದ್ದಾರೆ.
ದರ್ಶನ್ ಅವರ ಆಸ್ತಿ ಮೇಲೆ ನಾನ್ಯಾಕೆ ಕಣ್ಣು ಹಾಕಲಿ. ನನ್ನ ಆಸ್ತಿ ಬೇಜಾನ್ ಇದೆ. ಬೇರೆಯವರ ಆಸ್ತಿ ಒಡೆಯುವ ದರ್ದು ನನಗಿಲ್ಲ. ನನ್ನ ಮನೆಗೆ ನಾನೆ ಕಿಂಗ್, ರಾಜ. ನಾನು ಸಿನಿಮಾ ಮಾಡುತ್ತೇನೆ, ಹೀರೋಗಳಿಗೆ ಹಣ ಕೊಡ್ತೀನಿ, ರಿಲೀಸ್ ಮಾಡುತ್ತೇನೆ. ನನ್ನದೂ ಕ್ವಾರಿ ಬ್ಯುಸಿನೆಸ್ ಇದೆ, ಫಿಲ್ಮ್ ಸಿಟಿ ಮಾಡುತ್ತಿದ್ದೇನೆ ಇದರಿಂದ ನನಗೆ ಪಬ್ಲಿಸಿಟಿ ಬೇಡ" ಎಂದು ಉತ್ತರಿಸಿದರು.
"ನಾನು ಮತ್ತೆ ದರ್ಶನ್ ಹಾಗೆ ಇದ್ದೀವಿ. ದೂರ ಆಗಿದ್ದೀವಿ ಅಂತ ಖುಷಿ ಪಡಬೇಡಿ, ಇಬ್ಬರೂ ಚೆನ್ನಾಗಿದ್ದೀವಿ" ಎಂದರು. "ಇನ್ನು 3 ಪಾಯಿಂಟ್ ಹೇಳಿದ್ರೆ ಇಡೀ ಮಂಡ್ಯ ವೈಬ್ರೇಟ್ ಆಗುತ್ತೆ" ಎನ್ನುವ ಮಾತನ್ನು ಗಂಭೀರ ಮಾತನ್ನು ಹೇಳಿದರು. ಆದರೆ ಯುವುದೂ ಆ 3 ಪಾಯಿಂಟ್ ಎನ್ನುವುದನ್ನು ಉಮಾಪತಿ ಬಹಿರಂಗ ಬಡಿಸಿಲ್ಲ.


Click it and Unblock the Notifications











