For Quick Alerts
  ALLOW NOTIFICATIONS  
  For Daily Alerts

  'ರಾಬರ್ಟ್'ಗೆ ಮೊದಲು ಆಯ್ಕೆಯಾಗಿದ್ದು ರಾಶಿ ಖನ್ನಾ; ಆದರೆ ಆಶಾ ಸೆಲೆಕ್ಟ್ ಆಗಿದ್ದು ಹೇಗೆ?

  By ಫಿಲ್ಮ್ ಡೆಸ್ಕ್
  |

  ಡಿ ಬಾಸ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ರಿಲೀಸ್ ಆಗಿ ಸೂಪರ್ ಸಕ್ಸಸ್ ಆಗಿದೆ. ನಿರೀಕ್ಷೆಗೂ ಮೀರಿ ಯಶಸ್ಸು ಗಳಿಸಿರುವ ಸಂತಸದಲ್ಲಿ ಇಡೀ ಸಿನಿಮಾತಂಡವಿದೆ. ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಗಳಿಕೆ ಮಾಡಿರುವ ರಾಬರ್ಟ್ ಸ್ಯಾಂಡಲ್ ವುಡ್‌ನಲ್ಲಿ ದಾಖಲೆ ನಿರ್ಮಿಸಿದೆ. ಕೊರೊನಾ ಬಳಿಕ ಸಿಕ್ಕ ಬಹುದೊಡ್ಡ ಗೆಲುವು ಇದಾಗಿದ್ದು, ಅಭಿಮಾನಿಗಳು ಸಹ ಸಿನಿಮಾ ನೋಡಿ ಸಂಭ್ರಮಿಸುತ್ತಿದ್ದಾರೆ.

  Asha Bhat ರಾಬರ್ಟ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದು ಹೇಗೆ?? | Filmibeat Kannada

  ಮಾರ್ಚ್ 11ರಂದು ತೆರೆಗೆ ಬಂದ ರಾಬರ್ಟ್ ಇಂದಿಗೂ ಬಹುತೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಯಶಸ್ಸಿನ ಜೊತೆಗೆ ಚಿತ್ರದ ಬಗ್ಗೆ ಒಂದಿಷ್ಟು ಕುತೂಹಲಕಾರಿ ಸಂಗತಿಗಳು ಸಹ ಒಂದೊಂದಾಗಿ ಬಹಿರಂಗ ವಾಗುತ್ತಿದೆ. ಇತ್ತೀಚಿಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ನಿರ್ಮಾಪಕ ಉಮಾಪತಿ ಚಿತ್ರದ ನಾಯಕಿ ಆಯ್ಕೆ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ...

  ರಾಬರ್ಟ್ ಸಕ್ಸಸ್: ವಿಜಯ ಯಾತ್ರೆ ಹೊರಟ ಸಿನಿಮಾತಂಡ, ಯಾವ ಊರಿಗೆ ಯಾವ ದಿನ ಭೇಟಿ?

  ರಾಶಿ ಜಾಗಕ್ಕೆ ಆಶಾ ಭಟ್ ಎಂಟ್ರಿ ಕೊಟ್ಟಿದ್ದು ಹೇಗೆ?

  ರಾಶಿ ಜಾಗಕ್ಕೆ ಆಶಾ ಭಟ್ ಎಂಟ್ರಿ ಕೊಟ್ಟಿದ್ದು ಹೇಗೆ?

  ರಾಬರ್ಟ್ ಸಿನಿಮಾಗೆ ಮೊದಲು ಆಯ್ಕೆಯಾಗಿದ್ದು, ತೆಲುಗು ಮತ್ತು ತಮಿಳು ಸಿನಿಮಾರಂಗದಲ್ಲಿ ಮಿಂಚುತ್ತಿರುವ ನಟಿ ರಾಶಿ ಖನ್ನಾ ಎನ್ನುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ದರ್ಶನ್ ಜೊತೆ ನಾಯಕಿಯಾಗಿ ಆಶಾ ಭಟ್ ಜಾಗದಲ್ಲಿ ರಾಶಿ ಖನ್ನಾ ಇರುತ್ತಿದ್ದರು.

  ಆಶಾ ಭಟ್ ಆಯ್ಕೆ ಮಾಡಿದ್ದು ದರ್ಶನ್

  ಆಶಾ ಭಟ್ ಆಯ್ಕೆ ಮಾಡಿದ್ದು ದರ್ಶನ್

  ಆದರೆ ಹಾಗಾಗಿಲ್ಲ, ರಾಶಿ ಬದಲಿಗೆ ಕನ್ನಡತಿ ಆಶಾ ಭಟ್ ಚಾಲೆಂಜಿಂಗ್ ಸ್ಟಾರ್ ಜೊತೆ ಮಿಂಚಿದ್ದಾರೆ. ಅಂದಹಾಗೆ ಆಶಾ ಭಟ್ ಅವರನ್ನು ಆಯ್ಕೆ ಮಾಡಿದ್ದು, ಮತ್ಯಾರು ಅಲ್ಲ ಡಿ ಬಾಸ್ ದರ್ಶನ್. ಕನ್ನಡದ ನಾಯಕಿಯೇ ಇರಲಿ ಎಂದು ದರ್ಶನ್ ಅವರೇ ಹೇಳಿ, ಆಶಾ ಭಟ್ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಉಮಾಪತಿ ವಿವರಿಸಿದ್ದಾರೆ.

  ಎಷ್ಟು ಸುಂದರವಾದ ಭಾಷೆ; 'ರಾಬರ್ಟ್' ಹಾಡಿನ ಬಗ್ಗೆ ಖ್ಯಾತ ಗಾಯಕಿ ಶ್ರೇಯಾ ಗೋಷಲ್ ಮಾತು

  ವಿನೋದ್ ಪ್ರಭಾಕರ್ ಆಯ್ಕೆ ಮಾಡಿದ್ದು ಸಹ ದರ್ಶನ್

  ವಿನೋದ್ ಪ್ರಭಾಕರ್ ಆಯ್ಕೆ ಮಾಡಿದ್ದು ಸಹ ದರ್ಶನ್

  ರಾಬರ್ಟ್ ಗಾಗಿ ದರ್ಶನ್ ಆಯ್ಕೆ ಮಾಡಿದ್ದು, ನಾಯಕಿ ಆಶಾ ಭಟ್ ಒಬ್ಬರನ್ನೇ ಅಲ್ಲ, ದರ್ಶನ್ ಸ್ನೇಹಿತನಾಗಿ ಕಾಣಿಸಿಕೊಂಡಿರುವ ವಿನೋದ್ ಪ್ರಭಾಕರ್ ಅವರನ್ನು ಆಯ್ಕೆ ಮಾಡಿದ್ದು ಸಹ ದರ್ಶನ್ ಅವರೆ. ವಿನೋದ್ ಪ್ರಭಾಕರ್ ಜಾಗಕ್ಕೆ ಮೊದಲು ಬೇರೆ ಭಾಷೆಯ ಸ್ಟಾರ್ ಕಲಾವಿದನನ್ನು ಆಯ್ಕೆ ಮಾಡಲಾಗಿತ್ತಂತೆ ಆದರೆ ಕನ್ನಡದ ನಟ ವಿನೋದ್ ಇರಲಿ ಎಂದು ಹೇಳಿ ರಾಘವನ ಪಾತ್ರ ಆಯ್ಕೆ ಮಾಡಿದ್ದು ಸಹ ದರ್ಶನ್.

  ರಾಬರ್ಟ್ ನಲ್ಲಿ ಬಹುತೇಕರು ಕನ್ನಡಿಗರೇ ಇರುವುದು

  ರಾಬರ್ಟ್ ನಲ್ಲಿ ಬಹುತೇಕರು ಕನ್ನಡಿಗರೇ ಇರುವುದು

  ಇನ್ನು ಚಿತ್ರದ ಮತ್ತೋರ್ವ ಪ್ರಮುಖ ಪಾತ್ರ ರವಿ ಶಂಕರ್ ಅವರು ಆಯ್ಕೆ ಮಾಡಿದ್ದು ಸಹ ದರ್ಶನ್ ಅವರೇ ಎಂದು ಉಮಾಪತಿ ಹೇಳಿದ್ದಾರೆ. ಚಿತ್ರದಲ್ಲಿ ಆದಷ್ಟು ಕನ್ನಡದ ಕಲಾವಿದರೇ ಇರಬೇಕೆಂದು ಸಿನಿಮಾ ಪ್ರಾರಂಭದಲ್ಲೇ ದರ್ಶನ್ ಹೇಳಿದ್ದರಂತೆ. ಅದರಂತೆ ರಾಬರ್ಟ್ ಸಿನಿಮಾದಲ್ಲಿ ಬಹುತೇಕರು ಕನ್ನಡಿಗರೇ ಇದ್ದಾರೆ ಎಂದು ಉಮಾಪತಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

  English summary
  Producer Umapathy reveals Actress Rashi Khanna was first selection to Roberrt.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X