'ರಾಬರ್ಟ್' ಬಿಡುಗಡೆ ಬಗ್ಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ನಿರ್ಧಾರವೇನು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ರಾಬರ್ಟ್' ಸಿನಿಮಾ ಕ್ರಿಸ್‌ಮಸ್‌ ಹಬ್ಬದ ವಿಶೇಷವಾಗಿ ತೆರೆಕಾಣಲಿದೆ ಎಂದು ಗಾಂಧಿನಗರದ ಒಂದಿಷ್ಟು ಮಂದಿ ಹೇಳುತ್ತಿದ್ದಾರೆ. ರಾಬರ್ಟ್ ಹೆಸರಿಗೆ ತಕ್ಕಂತೆ ಕ್ರಿಸ್‌ಮಸ್‌ಗೆ ರಿಲೀಸ್ ಮಾಡುವುದು ಉತ್ತಮ ಎಂಬ ಅಭಿಪ್ರಾಯವೂ ಇದೆ.

Recommended Video

ಉಪಾಧ್ಯಕ್ಷನ ಬೆಂಬಲಕ್ಕೆ ನಿಂತ ರಾಬರ್ಟ್ ನಿರ್ಮಾಪಕ | Upadyaksha | Chikkanna | Umapathy Srinivas

ಈ ಕುರಿತು ನಿರ್ದೇಶಕ ತರುಣ್ ಸುಧೀರ್ ಸಹ ಮಾತನಾಡಿದ್ದರು. ಚಿತ್ರದ ನಿರ್ಮಾಪಕರು, ದರ್ಶನ್ ಅವರು ಎಲ್ಲರೂ ಒಟ್ಟಿಗೆ ಕೂತು ಈ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದ್ದರು. ಈ ಕುರಿತು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರು ಮಾಹಿತಿ ನೀಡಿದ್ದು, ''ರಾಬರ್ಟ್ ರಿಲೀಸ್ ಗೆ ದಿನಾಂಕ ಇನ್ನೂ ಫಿಕ್ಸ್ ಆಗಿಲ್ಲ'' ಎಂದು ತಿಳಿಸಿದ್ದಾರೆ.

ದರ್ಶನ್ ಸರ್ ಹೇಳಿದಾಗ ರಿಲೀಸ್

ದರ್ಶನ್ ಸರ್ ಹೇಳಿದಾಗ ರಿಲೀಸ್

ರಾಬರ್ಟ್ ಸಿನಿಮಾ ಕ್ರಿಸ್‌ಮಸ್‌ ಹಬ್ಬಕ್ಕೆ ರಿಲೀಸ್ ಆಗುತ್ತಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉಮಾಪತಿ ಶ್ರೀನಿವಾಸ್ ''ದರ್ಶನ್ ಸರ್ ಯಾವಾಗ ಬಿಡುಗಡೆ ಮಾಡೋಣ ಅಂತಾರೋ ನಾವು ಆಗ ರೆಡಿ. ನಮಗೆ ನೀಡಿದ ಜವಾಬ್ದಾರಿಯನ್ನು ನಾವು ಚೆನ್ನಾಗಿ ನಿಭಾಯಿಸಿದ್ದೇವೆ. ನಮ್ಮ ಬಳಿ ಕಂಟೆಂಟ್ ರೆಡಿ ಇದೆ. ಈ ತಿಂಗಳು ಅಂದ್ರು ಓಕೆ, ಇನ್ನೊಂದು ವರ್ಷ ಬಿಟ್ಟು ರಿಲೀಸ್ ಮಾಡೋಣ ಅಂದ್ರು ಓಕೆ'' ಎಂದು ಉಮಾಪತಿ ಹೇಳಿದ್ದಾರೆ.

ನಮ್ಮ ನಮ್ಮಲ್ಲಿ ಫೈಟ್ ಬೇಡ

ನಮ್ಮ ನಮ್ಮಲ್ಲಿ ಫೈಟ್ ಬೇಡ

''ಬೇರೆ ಭಾಷೆಯ ನೂರು ಚಿತ್ರಗಳು ರಿಲೀಸ್ ಆಗಲಿ. ನಮ್ಮ ಚಿತ್ರ ಬಿಡುಗಡೆ ಮಾಡೋಕೆ ನಾವು ರೆಡಿ ಇದ್ದೇವೆ. ಆದರೆ, ನಮ್ಮ ನಮ್ಮಲ್ಲಿ ಫೈಟ್ ಬೇಡ. ನಮಗಿಂತ ಮುಂಚೆ ಬರಬೇಕೆಂದುಕೊಂಡಿದ್ದ ಚಿತ್ರಗಳು ಇವೆ. ಅವರು ರಿಲೀಸ್ ಮಾಡುವುದಾದರೇ ನಾವು ಬೆಂಬಲ ನೀಡುತ್ತೇವೆ. ನಾವು ನಿಧಾನವಾಗಿ ಬರುವುದಕ್ಕೆ ರೆಡಿ ಇದ್ದೇವೆ. ಅಥವಾ ನಮ್ಮನ್ನು ರಿಲೀಸ್ ಮಾಡಿ ಅಂದರೂ ನಾವು ಬರ್ತೇವೆ'' ಎಂದು ರಾಬರ್ಟ್ ನಿರ್ಮಾಪಕ ಸ್ಪಷ್ಟನೆ ನೀಡಿದ್ದಾರೆ.

ರಾಬರ್ಟ್ ಬಿಡುಗಡೆ ಬಗ್ಗೆ ದರ್ಶನ್ ಏನಂದ್ರು?

ರಾಬರ್ಟ್ ಬಿಡುಗಡೆ ಬಗ್ಗೆ ದರ್ಶನ್ ಏನಂದ್ರು?

''ಈಗಿರುವ ಪರಿಸ್ಥಿತಿ ಚೆನ್ನಾಗಿ ಆಗಲಿ. ಎಲ್ಲ ಓಕೆ ಆದ್ಮೇಲೆ ನೋಡ್ಕೋಂಡು ಬರೋಣ. ನಮ್ಮಿಂದ ಇನ್ನೊಬ್ಬರಿಗೆ ತೊಂದರೆ ಆಗುವುದು ಬೇಡ. ಅದೇ ರೀತಿ ಬೇರೆಯವರಿಂದು ನಮಗೂ ತೊಂದರೆಯಾಗುವುದು ಬೇಡ'' ಎಂದು ನಟ ದರ್ಶನ್ ಅವರು ನಿರ್ಮಾಪಕರ ಬಳಿ ಚರ್ಚಿಸಿದ್ದಾರಂತೆ.

ಸಿಂಗಲ್ ಸ್ಕ್ರೀನ್ ಥಿಯೇಟರ್ ಮುಖ್ಯ

ಸಿಂಗಲ್ ಸ್ಕ್ರೀನ್ ಥಿಯೇಟರ್ ಮುಖ್ಯ

''ದರ್ಶನ್ ಅಂತವರ ಚಿತ್ರಗಳಿಗೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಬಹಳ ಮುಖ್ಯ. ಮಲ್ಟಿಪ್ಲೆಕ್ಸ್ ಅವರಂತೆ ಚಿತ್ರಮಂದಿರಗಳು ಜನರು ಬಂದು ಸಿನಿಮಾ ನೋಡುವಂತಹ ಆತ್ಮವಿಶ್ವಾಸ ಬರಬೇಕು. ಜನರು ಧೈರ್ಯದಿಂದ ಥಿಯೇಟರ್‌ಗೆ ಬರಬೇಕು. ಆಗ ಬಿಡುಗಡೆ ಮಾಡಿದ್ರೆ ಉತ್ತಮ'' ಎಂದು ರಾಬರ್ಟ್ ನಿರ್ಮಾಪಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

More from Filmibeat

English summary
Challening Star Darshan starrer 'Roberrt' Movie Likely to release on December 25. now, Producer Umapathy Srinivas React about Roberrt release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X