"ಅವ್ರ್ ಪರ್ಸನಲ್ ಆಗಿ ಮಾತಾಡಿದ್ರೆ ನಾನು ಮಾತಾಡೋಕೆ 2 ನಿಮಿಷ, ಆದ್ರೆ ಬೇಡ": ಉಮಾಪತಿ
ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಗೌಡ ನಡುವಿನ ವಾಗ್ಯುದ್ಧ ಮುಂದುವರೆದಿದೆ. ಇತ್ತೀಚೆಗೆ ಉಮಾಪತಿ ಹೇಳಿಕೆಗೆ ಬಗ್ಗೆ ದರ್ಶನ್ ತಿರುಗೇಟು ನೀಡಿದ್ದರು. ನಿರ್ಮಾಪಕರು ಇದ್ರೆ ಸ್ಟಾರ್‌ಗಳು ಅನ್ನುವುದು ತಪ್ಪು, ನಿರ್ಮಾಪಕರು ಸುಮ್ಮನೆ ಕಲಾವಿದರಿಗೆ ಹಣ ಕೊಡಲ್ಲ, ಕೆಲಸಕ್ಕೆ ಕೂಲಿ ಕೊಡ್ತಾರೆ ಎಂದಿದ್ದರು. ಇದೀಗ ದರ್ಶನ್ ಹೇಳಿಕೆಗೆ ಮತ್ತೆ ನಿರ್ಮಾಪಕ ಉಮಾಪತಿ ಪ್ರತಿಕ್ರಿಯೆ ನೀಡಿದ್ದಾರೆ.
ಒಂದ್ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿದ್ದ ದರ್ಶನ್- ಉಮಾಪತಿ 25 ಕೋಟಿ ಫೇಕ್ ಲೋನ್ ವಿಚಾರದಲ್ಲಿ ದೂರಾಗಿದ್ದರು. ಸ್ನೇಹಿತರಾಗಿದ್ದವರು ಈಗ ಎದುರಾಳಿಗಳು ಎನ್ನುವಂತಾಗಿದ್ದಾರೆ. ಇಬ್ಬರ ನಡುವೆ ಪದೇ ಪದೇ ಮಾತಿನ ಸಮಯ ನಡೆಯುತ್ತಿದೆ. ಉಮಾಪತಿ ಮಾತಿಗೆ ದರ್ಶನ್ ಅದೇ ರೀತಿ ದರ್ಶನ್ ಹೇಳಿಕೆಗೆ ಉಮಾಪತಿ ತಿರುಗೇಟು ನೀಡುತ್ತಾ ಬರುತ್ತಿದ್ದಾರೆ.

ಇತ್ತೀಚೆಗೆ ದರ್ಶನ್ ಅವರ ಹೇಳಿಕೆಗೆ ಮತ್ತೆ ಉಮಾಪತಿ ಉತ್ತರಿಸಿದ್ದಾರೆ. ಯೂಟ್ಯೂಬ್ ಸಂದರ್ಶನವೊಂದರಲ್ಲಿ ನಿರ್ಮಾಪಕರು ಮಾತನಾಡಿದ್ದಾರೆ. "ನೋಡಿ ಅದು ಅವರಿಗೆ ಬಿಟ್ಟಿರುವುದು. ನಾನು ಹೇಳುವುದು ಇಷ್ಟೇ. ವ್ಯವಹಾರ ವ್ಯವಹಾರವಾಗಿ ಮಾಡಿದ್ದೇವೆ. ಈಗ ಅವ್ರ್ ಪರ್ಸನಲ್ ಆಗಿ ಮಾತಾಡಿದ್ರೆ ನಾನು ಮಾತಾಡೋಕೆ 2 ನಿಮಿಷ, ಆದ್ರೆ ಬೇಡ. ಯಾಕಂದ್ರೆ ನನ್ನ ಗುರಿನೇ ಬೇರೆ. ಟ್ರೈನ್‌ನಲ್ಲಿ ಒಂದು ಡೆಸ್ಟಿನೇಷನ್ ತಲುಪೋಕೆ ಹೋಗ್ತಿದ್ದೀನಿ. ಅಕ್ಕಪಕ್ಕ ಕಿಟಕಿಯಲ್ಲಿ ಏನೋ ನೋಡಿ ಇಳಿದು ಸಮಯ ವ್ಯರ್ಥ ಮಾಡಲ್ಲ"
"ಅವರು ತುಂಬಾ ಪುರುಸೊತ್ತಾಗಿ ಇದ್ದಾರೆ. ಮಾತನಾಡಲಿ. ತೊಂದರೆ ಇಲ್ಲ. ಎಲ್ಲದಕ್ಕು ಉತ್ತರ ಕೊಡುವ ಸಮಯ ಬರುತ್ತದೆ. ಉತ್ತರ ಕೊಡ್ತೀನಿ. ನಾವು ಸಿನಿಮಾ ಮಾಡಿದ್ದು ನಿರ್ಮಾಪಕರಾಗಿ ಅಲ್ಲ. ಅಭಿಮಾನಿ ಆಗಿ. ಆದರೆ ಒಬ್ಬ ಅಭಿಮಾನಿಯನ್ನು ಹೆಂಗೆ ನಡೆಸಿಕೊಳ್ಳಬೇಕು, ಆದ್ರೆ ಅವ್ರು ಹೆಂಗೆ ನಡೆಸಿಕೊಂಡಿದ್ದಾರೆ ನಿಮ್ಗೆ ಗೊತ್ತು. ದೇವರು ಅವರನ್ನು ಚೆನ್ನಾಗಿ ಇಟ್ಟಿರಲಿ. ತುಂಬಾ ಚೆನ್ನಾಗಿ ಇಟ್ಟಿರಲಿ. ಇನ್ನು 50 ವರ್ಷ ಇಂಡಸ್ಟ್ರಿ ಆಳಲಿ. ಇನ್ನು 500 ಸಿನಿಮಾಗಳನ್ನು ಮಾಡಲಿ" ಎಂದಿದ್ದಾರೆ.

ದರ್ಶನ್ ಹೇಳಿದ್ದು ಏನು?
ಉಮಾಪತಿ ಈ ಹಿಂದೆ ಸ್ಟಾರ್‌ಗಳ ಬಗ್ಗೆ ಮಾತನಾಡಿದ್ದ ಮಾತುಗಳಿಗೆ ದರ್ಶನ್ ತಿರುಗೇಟು ನೀಡಿದ್ದರು. "ಸ್ಟಾರ್‌ಗಳು ಏನು ಮೇಲಿಂದ ಉದುರುತ್ತಾರಾ? ನಿರ್ಮಾಪಕರು ಇದ್ದರೇನೇ ಸಿನಿಮಾ, ಸ್ಟಾರ್‌ಗಳು 500 ರೂಪಾಯಿ ದಾನ ಮಾಡಿದರೂ ಅದು ನಿರ್ಮಾಪಕರ ದುಡ್ಡು ಎಂದು ಹೇಳಿದ್ದಾರೆ. ಈ ಕ್ಷೇತ್ರದ ನಿರ್ಮಾಪಕರು. ಕಲಾವಿದರು ನಾವೆಲ್ಲಾ ಒಂದೇ. ನಮ್ಮ ತಾಯಿ ಕುಂತಿ ಅಲ್ಲ ಪೂಜೆ ಮಾಡಿದ ತಕ್ಷಣ ಬರೋಕೆ. ಪ್ರಕೃತಿ ನಿಯಮವಾಗಿ ಹೆಂಗ್ ಹುಟ್ಟ್‌ಬೇಕೊ ಹಂಗೆ ಹುಟ್ಟಿರೋದು"
"ನಿರ್ಮಾಪಕರು ಇದ್ದರೇನೆ ಸ್ಟಾರ್‌ಗಳು ಅಂತೆ. ಅದು ತಪ್ಪು ಸ್ವಾಮಿ. ಹೌದು ನಿರ್ಮಾಪಕರು ಇದ್ರೆ ಒಂದು ಸಿನಿಮಾ ಆಗುತ್ತೆ. ಆದರೆ ಸೆಲೆಬ್ರೆಟಿಗಳು, ಅಭಿಮಾನಿಗಳು, ಸಿನಿಪ್ರೇಮಿಗಳು ಇದ್ದರೆ ಮಾತ್ರ ಒಬ್ಬ ಕಲಾವಿದ, ಸ್ಟಾರ್ ಆಗೋಕೆ ಸಾಧ್ಯ. ಒಬ್ಬ ಸ್ಟಾರ್ 500 ರೂಪಾಯಿ ದಾನ ಮಾಡಿದರೂ ನಿರ್ಮಾಪಕರ ದುಡ್ಡು ಎನ್ನುವುದು ತಪ್ಪು. ಏನು ಧರ್ಮಕ್ಕೆ ಕೊಡ್ತಾರಾ ಹಣ ನಮಗೆ. ಬೆಳಗ್ಗೆಯಿಂದ ಸಂಜೆವರೆಗೂ ಕತ್ತೆ ರೀತಿ ದುಡಿಯುತ್ತೇವೆ.

"ಮನೆಯಲ್ಲಿ ಕೂರಿಸಿ ನಮಗೆ ಹಣ ಕೊಡಲ್ಲ. ಕೆಲಸ ಮಾಡಿದರೆ ಕೂಲಿ ಕೊಡ್ತಾರೆ. ಕೂಲಿ ಕೇಳಿದ್ರೆ ತಪ್ಪಾ, ಸಿನಿಮಾ ದುಡ್ಡು ಮಾಡಿದ್ರೆ ನಮಗೆ ತಂದು ಕೊಡ್ತೀರಾ ಸ್ವಾಮಿ?" ಒಬ್ಬ ಹೀರೊ ಬಗ್ಗೆ ಮಾತನಾಡುವ ಮುಂಚೆ ಯೋಚನೆ ಮಾಡಿ. ಅವರಿಗೆ ಒಂದು ಕಿವಿಮಾತು. ನಾನು ದರ್ಶನ್‌ನ ಕರ್ಕೊಂಡು ಬಂದೆ. ದರ್ಶನ್‌ನ ಸ್ಟಾರ್ ಮಾಡ್ದೆ ಎಂದು ಹೇಳುವ ಅಧಿಕಾರ, ಅರ್ಹತೆ, ಯೋಗ್ಯತೆ ಇರುವುದು ಮೆಜೆಸ್ಟಿಕ್ ಸಿನಿಮಾ ನಿರ್ಮಾಪಕ ಎಂ. ಜಿ ರಾಮಮೂರ್ತಿ ಅವರಿಗೆ ಮಾತ್ರ ಇರೋದು. ಇನ್ಯಾರಿಗೂ ನಾನು ಆ ಯೋಗ್ಯತೆ ಕೊಟ್ಟಿಲ್ಲ.
"ನಾನೇನು ನಿಮ್ಮ ಮನೆ ಬಾಗಿಲ ಬಳಿ ಬಂದು ದಯವಿಟ್ಟು ಸಿನಿಮಾ ಮಾಡಿ ಎಂದು ಕೇಳಿಲ್ಲ. ನೀವು ಸ್ಟಾರ್ ಮನೆಗೆ ಸಿನಿಮಾ ಮಾಡೋಣ ಅಂತ ಬಂದಿದ್ದು" ಎಂದು ಉಮಾಪತಿಗೆ ಟಾಂಗ್ ಕೊಟ್ಟಿದ್ದರು.


Click it and Unblock the Notifications











