For Quick Alerts
  ALLOW NOTIFICATIONS  
  For Daily Alerts

  ಬಾರ್ ನಲ್ಲಿ ಗಲಾಟೆ: ಸಂಜನಾ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ ವಂದನಾ ಜೈನ್

  |
  ವೀಡಿಯೋ ಮೂಲಕ ಸ್ಪಷ್ಟನೆ ಕೊಟ್ಟ ವಂದನಾ ಜೈನ್ | FILMIBEAT KANNADA

  ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಮತ್ತು ನಿರ್ಮಾಪಕಿ ವಂದನಾ ಜೈನ್ ಗಲಾಟೆ ಪ್ರಕರಣ ಮತ್ತೆ ಸದ್ದು ಮಾಡುತ್ತಿದೆ. ನಿರ್ಮಾಪಕಿ ವಂದನಾ ಜೈನ್, ನಟಿ ಸಂಜನಾ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಕ್ರಿಸ್ ಮಸ್ ಹಿಂದಿನ ರಾತ್ರಿ ಡಿಸೆಂಬರ್ 24 ರಾತ್ರಿ ನಡೆದ ಘಟನೆ ಬಗ್ಗೆ ವಂದನಾ ಜೈನ್ ತಡವಾಗಿ ಸ್ಪಷ್ಟನೆ ನೀಡಿದ್ದಾರೆ.

  ಈ ಬಗ್ಗೆ ವಿಡಿಯೋ ಮಾಡಿ ಶೇರ್ ಮಾಡಿರುವ ವಂದನಾ, ನಟಿ ಸಂಜನಾ ಮಾಡಿರುವ ಅರೋಪಗಳೆಲ್ಲವನ್ನು ತಳ್ಳಿಹಾಕಿದ್ದಾರೆ. ಸಂಜನಾ ಆರೋಪದಿಂದ ಬೇಸರವಾಗಿದೆ ಎಂದು ಹೇಳಿದ್ದಾರೆ. ಜೊತೆಗೆ ಸಂಜನಾ ವಿರುದ್ಧ 4 ಕೋಟಿ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. "ನಾನು ಏನು ಮಾಡುತ್ತೀನಿ ಎನ್ನುವುದು ಎಲ್ಲರಿಗೂ ಗೊತ್ತು. ಹಾಗೆ ಸಂಜನಾ ಏನು ಮಾಡುತ್ತಿದ್ದಾರೆ ಎನ್ನುವುದು ಸಹ ಎಲ್ಲರಿಗೂ ಗೊತ್ತಿದೆ. ಸಾರ್ವಜನಿಕ ಸ್ಥಳದಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಸಂಜನಾ ಮೊದಲು ತಿಳಿದುಕೊಳ್ಳಬೇಕು" ಎಂದು ವಂದನಾ ಹೇಳಿದ್ದಾರೆ.

  ನಿರ್ಮಾಪಕಿ ವಂದನಾ ವಿರುದ್ಧ ಜೀವ ಬೆದರಿಕೆ ದೂರು ನೀಡಿದ ನಟಿ ಸಂಜನಾ

  ಇನ್ನು ರಾತ್ರಿ ಏನಾಯಿತು ಎನ್ನುವ ಬಗ್ಗೆಯು ವಂದನಾ ವಿವರಿಸಿದ್ದಾರೆ. "ಫ್ರೆಂಡ್ಸ್ ಜೊತೆ ಊಟಕ್ಕೆ ಹೋಗಿದ್ದೆ. ಅಲ್ಲಿ ಒಬ್ಬರು ಸಂಜನಾ ಮತ್ತು ನನಗೆ ಕಾಮನ್ ಫ್ರೆಂಡ್ ಇದ್ದರು. ಅವರು ನೀನು ಮತ್ತು ಸಂಜನಾ ಯಾಕೆ ಮಾತನಾಡಲ್ಲ ಎಂದು ಕೇಳಿದರು. ಆಗ ಸಂಜನಾ ಕೆಟ್ಟ ಪದಗಳಿಂದ ಮಾತನಾಡಲು ಶುರು ಮಾಡಿದರು. ನಂತರ ನಾನು ಮೈಂಡ್ ಯುವರ್ ಲಾಂಗ್ವೇಜ್ ಎಂದು ಹೇಳಿದೆ ಅಷ್ಟೆ" ಎಂದು ವಿಡಿಯೋದಲ್ಲಿ ವಿವರಿಸಿದ್ದಾರೆ.

  "ಅಷ್ಟರಲ್ಲೆ ಸಂಜನಾ ಗ್ಲಾಸ್ ನಲ್ಲಿದ್ದ ವಿಸ್ಕಿಯನ್ನು ಮುಖದ ಮೇಲೆ ಹಾಕಿದರು. ಆಗ ನನ್ನ ಕಣ್ಣಿನ ಮೇಲೆ ಬಿತ್ತು, 15 ನಿಮಿಷ ಕಣ್ಣು ಬಿಡಲು ಸಾಧ್ಯವಾಗಿಲ್ಲ. ಮತ್ತೆ ಸಂಜನಾ ಕೆಟ್ಟ ಪದಗಳಿಂದ ಬೈಯಲು ಪ್ರಾರಂಭಿಸಿದರು. ಏನು ಮಾಡಬೇಕಂದು ಗೊತ್ತಾಗಲಿಲ್ಲ. ಹಾಗಾಗಿ ಪೊಲೀಸರಿಗೆ ಫೋನ್ ಮಾಡಿದೆ" ಎಂದು ಹೇಳಿದ್ದಾರೆ.

  ಘಟನೆ ನಡೆದು ವಾರದ ಬಳಿಕ ವಂದನಾ ಮಾಧ್ಯಮಕ್ಕೆ ವಿಡಿಯೋ ಬೈಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಈ ಮೊದಲು ಅಂದರೆ ಡಿಸೆಂಬರ್ 28ಕ್ಕೆ ಸಂಜನಾ ತಾಯಿಯ ಜೊತೆಗೆ ಬಂದು ವಂದನಾ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರು ನೀಡಿದ್ದರು. ಮೆಡಿಕಲ್ ರೆಕಾರ್ಡ್ ಸಮೇತ ಬಂದು ಸಂಜನಾ ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್ ನಲ್ಲಿ ದೂರು ನೀಡಿದ್ದರು. ಈಗ ಮತ್ತೆ ವಂದನಾ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

  Read more about: sanjana ಸಂಜನಾ
  English summary
  Producer Vandana Jain filed a defamation case against Sanjjana Galrani. Sanjana and vandana jain fight in bar on December 24th night.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X