'ಕೆ.ಜಿ.ಎಫ್' ಚಿತ್ರ ಬಿಡುಗಡೆಗೆ ಮಧ್ಯಂತರ ತಡೆ: ಅರ್ಜಿ ವಾಪಸ್ ಪಡೆದ ವೆಂಕಟೇಶ್.!
Recommended Video

ನಿನ್ನೆ ಸಂಜೆ ಏಕಾಏಕಿ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಲ್ಲಿ ಆತಂಕ ಕಿಡಿ ಹೊತ್ತಿಸಿದ ನಿರ್ಮಾಪಕ ವೆಂಕಟೇಶ್ ಇಂದು ಯೂ ಟರ್ನ್ ಹೊಡೆದಿದ್ದಾರೆ.
ಯಶ್ ಅಭಿನಯದ 'ಕೆ.ಜಿ.ಎಫ್' ರೌಡಿ ತಂಗಂ ಜೀವನಾಧಾರಿತ ಚಿತ್ರ. 'ಕೆ.ಜಿ.ಎಫ್' ಚಿತ್ರದ ಟ್ರೈಲರ್ ನಲ್ಲಿರುವ ಕೆಲವು ದೃಶ್ಯಗಳು ರೌಡಿ ತಂಗಂ ಕಥೆಯನ್ನೇ ಹೋಲುತ್ತದೆ. ರೌಡಿ ತಂಗಂ ಜೀವನಚರಿತ್ರೆಯ ಹಕ್ಕು ನನ್ನ ಬಳಿ ಇದೆ. ಹೀಗಾಗಿ, 'ಕೆ.ಜಿ.ಎಫ್' ಬಿಡುಗಡೆಗೆ ತಡೆ ಕೋರಿ ನಿರ್ಮಾಪಕ ವೆಂಕಟೇಶ್ ಕೋರ್ಟ್ ಮೆಟ್ಟಿಲೇರಿದ್ದರು.
ನಿರ್ಮಾಪಕ ವೆಂಕಟೇಶ್ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ 'ಕೆ.ಜಿ.ಎಫ್' ಬಿಡುಗಡೆಗೆ ಮಧ್ಯಂತರ ತಡೆ ನೀಡಿತ್ತು. ನಿನ್ನೆ ಸಂಜೆ ದಿಢೀರ್ ಅಂತ ಬ್ರೇಕ್ ಆದ ಈ ಸುದ್ದಿ ಸಿನಿಪ್ರಿಯರಲ್ಲಿ ಗೊಂದಲ ಸೃಷ್ಟಿ ಮಾಡಿತ್ತು. 'ಕೆ.ಜಿ.ಎಫ್' ಬಿಡುಗಡೆ ಆಗುತ್ತೋ, ಇಲ್ವೋ ಎಂಬ ಕನ್ ಫ್ಯೂಶನ್ ಎಲ್ಲರಲ್ಲೂ ಕಾಡಿತ್ತು.

ಆದ್ರೆ, ನಿಗದಿಯಂತೆ 'ಕೆ.ಜಿ.ಎಫ್' ಇಂದು ಪ್ರದರ್ಶನ ಆರಂಭ ಆಯ್ತು. 'ಕೆ.ಜಿ.ಎಫ್'ಗೆ ನಿರೀಕ್ಷೆಯಂತೆ ಭರ್ಜರಿ ಓಪನಿಂಗ್ ಸಿಕ್ತು. ಇತ್ತ 'ಕೆ.ಜಿ.ಎಫ್' ಬಗ್ಗೆ ಎಲ್ಲೆಡೆ ಪಾಸಿಟೀವ್ ಮಾತುಗಳು ಕೇಳಿಬರುತ್ತಿರುವಾಗಲೇ, ಚಿತ್ರದ ಬಿಡುಗಡೆಗೆ ತಡೆ ಕೋರಿ ದಾವೆ ಹೂಡಿದ್ದ ನಿರ್ಮಾಪಕ ವೆಂಕಟೇಶ್ ತಮ್ಮ ಅರ್ಜಿಯನ್ನು ವಾಪಸ್ ಪಡೆದಿದ್ದಾರೆ.
ಅಲ್ಲಿಗೆ, 'ಕೆ.ಜಿ.ಎಫ್' ಚಿತ್ರಕ್ಕೆ ಉಂಟಾಗಿದ್ದ ದೊಡ್ಡ ತೊಡುಕು ನಿವಾರಣೆ ಆಗಿದೆ. 'ಕೆ.ಜಿ.ಎಫ್' ಚಿತ್ರತಂಡಕ್ಕಿದ್ದ ದೊಡ್ಡ ತಲೆನೋವು ಮಾಯವಾಗಿದೆ.


Click it and Unblock the Notifications











