»   » ವಿತರಣೆ ಕಡೆ ಮುಖ ಮಾಡಿದ 'ರಾಜಕುಮಾರ' ನಿರ್ಮಾಪಕ ವಿಜಯ್

ವಿತರಣೆ ಕಡೆ ಮುಖ ಮಾಡಿದ 'ರಾಜಕುಮಾರ' ನಿರ್ಮಾಪಕ ವಿಜಯ್

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ನಿನ್ನಿಂದಲೇ' ಹಾಗೂ 'ರಾಜಕುಮಾರ', ರಾಕಿಂಗ್ ಸ್ಟಾರ್ ಯಶ್ ರವರ 'ಮಾಸ್ಟರ್ ಪೀಸ್' ಹಾಗೂ 'ಕೆ.ಜಿ.ಎಫ್' ಚಿತ್ರಗಳಿಗೆ 'ಹೊಂಬಾಳೆ ಫಿಲ್ಮ್ಸ್' ಬ್ಯಾನರ್ ಅಡಿಯಲ್ಲಿ ಬಂಡವಾಳ ಹಾಕಿರುವ ನಿರ್ಮಾಪಕ ವಿಜಯ್ ಕಿರಗಂದೂರು ಇದೀಗ ಕನ್ನಡ ಚಿತ್ರಗಳ ವಿತರಣೆ ಮಾಡಲು ಮುಂದಾಗಿದ್ದಾರೆ.

ಸಾಲು ಸಾಲು ಸದಭಿರುಚಿಯ ಚಿತ್ರಗಳನ್ನು ನಿರ್ಮಾಣ ಮಾಡಿ, ಯಶಸ್ಸು ಗಳಿಸುತ್ತಾ ಬಂದಿರುವ ವಿಜಯ್ ಕಿರಗಂದೂರು ಇದೀಗ ಉತ್ತಮ ಕನ್ನಡ ಚಿತ್ರಗಳಿಗೆ ಪ್ರೋತ್ಸಾಹ ನೀಡಲು 'ಡಿಸ್ಟ್ರಿಬ್ಯೂಷನ್ ಆಫೀಸ್' ತೆರೆದಿದ್ದಾರೆ. ಮುಂದೆ ಓದಿರಿ...

ವರಮಹಾಲಕ್ಷ್ಮಿ ಹಬ್ಬದಂದು ಹೊಸ ಆಫೀಸ್ ಉದ್ಗಾಟನೆ

ವರಮಹಾಲಕ್ಷ್ಮಿ ಹಬ್ಬದ ಶುಭ ಸಂದರ್ಭದಂದು ನಿರ್ಮಾಪಕ ವಿಜಯ್ ಕಿರಗಂದೂರು 'ಕೆ.ಆರ್.ಜಿ ಸ್ಟುಡಿಯೋಸ್' ಎಂಬ ತಮ್ಮ 'ಡಿಸ್ಟ್ರಿಬ್ಯೂಷನ್ ಆಫೀಸ್' ಉದ್ಗಾಟನೆ ಸಮಾರಂಭವನ್ನ ನೆರವೇರಿಸಿದ್ದಾರೆ.

ಪ್ರತಿಭಾವಂತರಿಗೆ ಪ್ರೋತ್ಸಾಹ

'ಕೆ.ಆರ್.ಜಿ ಸ್ಟುಡಿಯೋಸ್' ಮೂಲಕ ಪ್ರತಿಭಾವಂತ ನಿರ್ದೇಶಕರ ಉತ್ತಮ ಕನ್ನಡ ಚಿತ್ರಗಳಿಗೆ ಪ್ರೋತ್ಸಾಹ ನೀಡಲು ವಿಜಯ್ ಕಿರಗಂದೂರು ಮನಸ್ಸು ಮಾಡಿದ್ದಾರೆ.

ಬಂದ ಲಾಭವನ್ನ ಹಂಚಿದ ಮಹಾನುಭಾವ ಇವರೇ.!

ಶತದಿನೋತ್ಸವ ಆಚರಿಸಿದ 'ರಾಜಕುಮಾರ' ಚಿತ್ರದಿಂದ ಬಂದ ಲಾಭವನ್ನ ತಾವೊಬ್ಬರೇ ಪಡೆದುಕೊಳ್ಳದೇ, ಬಂದ ಲಾಭವನ್ನ 'ರಾಜಕುಮಾರ' ಚಿತ್ರಕ್ಕಾಗಿ ಕೆಲಸ ಮಾಡಿದ ಪ್ರತಿಯೊಬ್ಬರೂ ಹಂಚಿದ ನಿರ್ಮಾಪಕ ಇದೇ ವಿಜಯ್ ಕಿರಗಂದೂರು. ಇಂತಹ ನಿರ್ಮಾಪಕ ಇದೀಗ ವಿತರಣೆ ಕ್ಷೇತ್ರಕ್ಕೂ ಕಾಲಿಟ್ಟಿರುವುದರಿಂದ, ಯುವ ನಿರ್ಮಾಪಕರು ಹಾಗೂ ನಿರ್ದೇಶಕರಿಗೆ ಸಹಾಯ ಆಗುವುದು ಖಂಡಿತ.

ಸುದೀಪ್ ಹೊಸ ಸಿನಿಮಾ ಬಗ್ಗೆ ಗಾಂಧಿನಗರದಿಂದ ಬಂದ ಬ್ರೇಕಿಂಗ್ ನ್ಯೂಸ್

ಸುರಕ್ಷತೆಗೆ ಮೊದಲ ಆದ್ಯತೆ ಕೊಟ್ಟವರು ಇವರೇ.!

ಚಿತ್ರೀಕರಣದ ಸಂದರ್ಭದಲ್ಲಿ ಯಾವುದೇ ದುರ್ಘಟನೆ ಸಂಭವಿಸದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ತಮ್ಮ ಚಿತ್ರ 'ಕೆ.ಜಿ.ಎಫ್'ನಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರಿಗೂ ಇನ್ಶೂರೆನ್ಸ್ ಮಾಡಿಸಿದವರು ಇದೇ ನಿರ್ಮಾಪಕ ವಿಜಯ್ ಕಿರಗಂದೂರು.

ಕನ್ನಡ ಚಿತ್ರರಂಗಕ್ಕೆ ಇಂಥ ಪ್ರೊಡ್ಯೂಸರ್ ಬೇಕು! ಯಶ್ ನಡೆಗೆ ಮೆಚ್ಚಲೇಬೇಕು!

ಕಾರ್ಮಿಕರ ಸ್ನೇಹಿ

ಕಾರ್ಮಿಕರು ಹಾಗೂ ಪ್ರತಿಭಾವಂತರ ಸ್ನೇಹಿ ಆಗಿರುವ ನಿರ್ಮಾಪಕ ವಿಜಯ್ ಕಿರಗಂದೂರು ಇದೀಗ ವಿತರಣೆ ಕ್ಷೇತ್ರಕ್ಕೂ ಕಾಲಿಟ್ಟಿರುವುದರಿಂದ ಕನ್ನಡ ಚಿತ್ರರಂಗದ ಹಲವು ನಿರ್ದೇಶಕರು ಹಾಗೂ ನಿರ್ಮಾಪಕರು ಸಂತಸ ವ್ಯಕ್ತಪಡಿಸಿದ್ದಾರೆ.

English summary
Producer Vijay Kiragandoor to Distribute Kannada Films through 'KRG Studios'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada