For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್-2 ರಿಲೀಸ್ ದಿನಾಂಕ ಘೋಷಿಸಿದ ವಿಜಯ್ ಕಿರಗಂದೂರ್

  |

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಯಶಸ್ವಿ ಮೂರನೇ ವಾರ ಪ್ರದರ್ಶನ ಕಾಣುತ್ತಿದೆ. ಕಲೆಕ್ಷನ್ ನಲ್ಲಿ ದಾಖಲೆ ಬರೆದಿರುವ ಕೆಜಿಎಫ್ ಸಿನಿಮಾ ಈಗ ಚಾಪ್ಟರ್-2ಗೆ ಸಜ್ಜಾಗುತ್ತಿದೆ.

  ಮೊದಲ ಭಾಗದಲ್ಲೇ ಇಷ್ಟು ದೊಡ್ಡ ಯಶಸ್ಸು ಕಂಡಿರುವ ಸಿನಿಮಾ ಎರಡನೇ ಭಾಗದಲ್ಲಿ ಹೇಗೆ ಬರಲಿದೆ ಎಂಬ ಕುತೂಹಲ ಈಗ ಹೆಚ್ಚಾಗ್ತಿದೆ. ಚಾಪ್ಟರ್ 2 ಯಾವಾಗ ಶುರುವಾಗುತ್ತೆ, ಯಾವಾಗ ರಿಲೀಸ್ ಆಗುತ್ತೆ ಎಂಬ ಚರ್ಚೆಯೂ ಕಾಡ್ತಿದೆ.

  'ಕೆಜಿಎಫ್-2'ಗೆ ಸಂಜಯ್ ದತ್ ಎಂಟ್ರಿ: ನಿರ್ಮಾಪಕ ವಿಜಯ್ ಹೇಳಿದ್ದೇನು?

  ಈ ಎಲ್ಲಾ ಅಂತೆ-ಕಂತೆಗಳಿಗೂ ಸ್ವತಃ ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರ್ ಅವರೇ ಸ್ಪಷ್ಟನೆ ನೀಡಿದ್ದಾರೆ. ಕೆಜಿಎಫ್ ಚಾಪ್ಟರ್ 2 ಬಗ್ಗೆ ಕೆಲವು ಕುತೂಹಲಕಾರಿ ವಿಷ್ಯಗಳನ್ನ ಬಿಚ್ಚಿಟ್ಟಿದ್ದಾರೆ. ಮುಂದೆ ಓದಿ......

  ಕೆಜಿಎಫ್ ಭಾಗ 2 ಯಾವಾಗ?

  ಕೆಜಿಎಫ್ ಭಾಗ 2 ಯಾವಾಗ?

  'ಕೆಜಿಎಫ್' ಚಾಪ್ಟರ್ 2 ಚಿತ್ರದ ಅಂತಿಮ ಸುತ್ತಿನ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದ್ದು, ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ಶೂಟಿಂಗ್ ಆರಂಭವಾಗುತ್ತೆ'' ಎಂದು ನಿರ್ಮಾಪಕ ವಿಜಯ್ ಕಿರಗಂದೂರ್ ತಿಳಿಸಿದರು.

  ಕಬಾಲಿ, ರೋಬೋ ದಾಖಲೆ ಅಳಿಸಿ ಹೊಸ ದಾಖಲೆ ಬರೆದ ಕೆಜಿಎಫ್

  2020ಗೆ ರಿಲೀಸ್ ಆಗುತ್ತೆ?

  2020ಗೆ ರಿಲೀಸ್ ಆಗುತ್ತೆ?

  ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ಶೂಟಿಂಗ್ ಆರಂಭವಾದರೂ, 2020ರ ಜನವರಿಯಲ್ಲಿ ಚಿತ್ರದ ಶೂಟಿಂಗ್ ಮುಗಿಯಬಹುದು. ಬಹುಶಃ ಸಮ್ಮರ್ ಹಾಲಿಡೇಗೆ ಸಿನಿಮಾ ತೆರೆ ಮೇಲೆ ಬರಬಹುದು'' ಎಂದು ವಿಜಯ್ ಖಚಿತಪಡಿಸಿದರು. 2020ರ ಮಧ್ಯದಲ್ಲಿ ಬರುತ್ತಾ ಅಥವಾ ಅಂತ್ಯದಲ್ಲಿ ಬರುತ್ತಾ ಕಾದುನೋಡಬೇಕಿದೆ.

  ಡಿಜಿಟಲ್ ಮತ್ತು ಸ್ಯಾಟೆಲೈಟ್ ಹಕ್ಕು ಮಾರಾಟದಲ್ಲಿ 'ಕೆ.ಜಿ.ಎಫ್' ಹೊಸ ಮೈಲಿಗಲ್ಲು.!

  ಹೊಸ ವಿಲನ್ಸ್ ಎಂಟ್ರಿ

  ಹೊಸ ವಿಲನ್ಸ್ ಎಂಟ್ರಿ

  ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ಹೊಸ ಖಳನಾಯಕರು ಪ್ರವೇಶವಾಗಲಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಬಾಲಿವುಡ್ ನಟ ಸಂಜಯ್ ದತ್ ಪ್ರಮುಖ ಪಾತ್ರವೊಂದಕ್ಕಾಗಿ ಬರಬಹುದು ಎಂದು ಸ್ವತಃ ನಿರ್ಮಾಪಕರೇ ಸುಳಿವು ನೀಡಿದ್ದಾರೆ.

  'ಕೆಜಿಎಫ್' ಕಂಡು ಕ್ಲೀನ್ ಬೋಲ್ಡ್ ಆದ ತೆಲುಗು ನಟ ನಿತೀನ್

  ಎಲ್ಲರೂ ಅವರೇ ಉಳಿಯಲಿದ್ದಾರೆ

  ಎಲ್ಲರೂ ಅವರೇ ಉಳಿಯಲಿದ್ದಾರೆ

  ಇನ್ನುಳಿದಂತೆ ಕೆಜಿಎಫ್ ಚಿತ್ರದ ಚಾಪ್ಟರ್ 1ರಲ್ಲಿ ಇದ್ದವರೇ ಬಹುತೇಕರು ಚಾಪ್ಟರ್ 2ನಲ್ಲೂ ಮುಂದುವರಿಯಲಿದ್ದಾರೆ. ರವಿಬಸ್ರೂರ್ ಸಂಗೀತ, ಭುವನ್ ಗೌಡ ಕ್ಯಾಮೆರಾ, ಶ್ರೀನಿಧಿ ಶೆಟ್ಟಿ ನಾಯಕಿ, ವಸಿಷ್ಠ ಸಿಂಹ, ಅನಂತ್ ನಾಗ್, ಮಾಳವಿಕಾ ಎಲ್ಲರೂ ಮುಂದುವರೆಯಲಿದ್ದಾರಂತೆ.

  English summary
  KGF chapter 2, shooting starts in April 2019. Same cast and Crew that worked for KGF chapter 1 will continue for KGF chapter 2 and main villain who lives in Dubai will be revealed in KGF chapter 2.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X