'ದ್ವಿತ್ವ' ಫಸ್ಟ್ ಲುಕ್: ಅಪ್ಪು ಅಭಿಮಾನಿಗಳ ಥ್ರಿಲ್ ಹೆಚ್ಚಿಸಿದ ವಿಜಯ್ ಕಿರಗಂದೂರ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು 'ಲೂಸಿಯಾ' ಖ್ಯಾತಿಯ ಪವನ್ ಕುಮಾರ್ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಪ್ರಕಟವಾಗಿತ್ತು. ಈ ಚಿತ್ರಕ್ಕೆ 'ದ್ವಿತ್ವ' ಎಂದು ಹೆಸರಿಡಲಾಗಿದೆ.

Recommended Video

ಅಪ್ಪು ಅಭಿಮಾನಿಗಳ ಖುಷಿ ಹೆಚ್ಚಿಸಿದ ವಿಜಯ್ ಕಿರಗಂದೂರ್ | Filmibeat Kannada

'ದ್ವಿತ್ವ' ಚಿತ್ರದ ಟೈಟಲ್ ಪೋಸ್ಟರ್ ಇಂದು (ಜುಲೈ 1) ಬಿಡುಗಡೆಯಾಗಿದ್ದು, ಅಪ್ಪು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಸಿನಿಮಾ ಹೆಸರೇ ಬಹಳ ವಿಶೇಷವಾಗಿದೆ, ಇನ್ನು ಸಿನಿಮಾ ಎಷ್ಟು ವಿಭಿನ್ನವಾಗಿ ಬರಬಹುದು ಎಂದು ಅಭಿಮಾನಿಗಳು ನಿರೀಕ್ಷೆ ಹೆಚ್ಚಿಸಿಕೊಂಡಿದ್ದಾರೆ.

ಈಗಾಗಲೇ ತಿಳಿದಿರುವಂತೆ 'ದ್ವಿತ್ವ' ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡುತ್ತಿದೆ. ಪುನೀತ್ ಜೊತೆ ನಿನ್ನಿಂದಲೇ, ರಾಜಕುಮಾರ, ಯುವರತ್ನ ಅಂತಹ ಸಿನಿಮಾಗಳನ್ನು ಮಾಡಿರುವ ವಿಜಯ್ ಕಿರಗಂದೂರ್ ಮತ್ತೊಮ್ಮೆ ಅಪ್ಪು ಜೊತೆ ಕೆಲಸ ಮಾಡ್ತಿದ್ದಾರೆ.

Producer Vijay Kirangandur Says Delighted to Work with Puneeth Sir Again in Dvitva

ದ್ವಿತ್ವ ಚಿತ್ರದ ಬಗ್ಗೆ ಸಂತಸ ಹಂಚಿಕೊಂಡಿರುವ ವಿಜಯ್ ಕಿರಗಂದೂರ್, ''ವಿಭಿನ್ನವಾದ ಚಿತ್ರದೊಂದಿಗೆ ಅಪ್ಪು ಸರ್ ಜೊತೆ ಕೆಲಸ ಮಾಡುವುದು ಬಹಳ ಸಂತಸ ತಂದಿದೆ'' ಎಂದು ಟ್ವೀಟ್ ಮಾಡಿದ್ದಾರೆ.

''ಲೂಸಿಯಾ, ಯೂಟರ್ನ್ ಖ್ಯಾತಿಯ ಪವನ್ ಕುಮಾರ್ ಅತ್ಯುತ್ತಮ ಸೈಕಲಾಜಿಕಲ್ ಥ್ರಿಲ್ಲರ್ ಕೊಡ್ತಾರೆ ಎಂಬ ಭರವಸೆ ಇದೆ. ಅಪ್ಪು ಅಭಿಮಾನಿಗಳು ಈ ಚಿತ್ರದಲ್ಲಿ ಅವರನ್ನು ಬಹಳ ವಿಶೇಷವಾದ ಪಾತ್ರದಲ್ಲಿ ನೋಡಬಹುದು. ಬಹುಶಃ ಸೆಪ್ಟೆಂಬರ್‌ ತಿಂಗಳಲ್ಲಿ ಶೂಟಿಂಗ್ ಶುರು ಮಾಡಲಿದ್ದೇವೆ'' ಎಂದು ವಿಜಯ್ ಕಿರಗಂದೂರ್ ಹೇಳಿದ್ದಾರೆ.

Producer Vijay Kirangandur Says Delighted to Work with Puneeth Sir Again in Dvitva

ದ್ವಿತ್ವ ಎಂದರೇನು?

'ದ್ವಿತ್ವ' ಎಂದರೆ ಎರಡು ರೀತಿಯ ವ್ಯಕ್ತಿತ್ವ ಎಂದು ಈ ಸಿನಿಮಾದ ಸಂದರ್ಭದಲ್ಲಿ ಅರ್ಥ ಮಾಡಿಕೊಳ್ಳಬಹುದಾಗಿದೆ. ಒಬ್ಬನೇ ವ್ಯಕ್ತಿಯ ಎರಡು ಮುಖ ಅಥವಾ ಒಂದೇ ರೀತಿ ಕಾಣುವ ಇಬ್ಬರು ವ್ಯಕ್ತಿ ಹೀಗೆ ಭಿನ್ನ ಅರ್ಥಗಳನ್ನು ಸೂಸುತ್ತಿದೆ ಈ ಹೆಸರು.

ಇನ್ನುಳಿದಂತೆ ಪೂರ್ಣಚಂದ್ರ ತೇಜಸ್ವಿ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಸುರೇಶ್ ಸಂಕಲನವಿದೆ. ಪ್ರೀತಾ ಛಾಯಾಗ್ರಹಣವಿದೆ.

More from Filmibeat

English summary
Producer Vijay Kirangandur says Delighted to work with Puneeth Sir again in Dvitva Movie; production starts this Sept.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X