ಸಪ್ತಪದಿ ತುಳಿದ 'ಪುಷ್ಪಕ ವಿಮಾನ' ನಿರ್ಮಾಪಕ ವಿಖ್ಯಾತ್
2018ನೇ ವರ್ಷ ಮದುವೆ ವರ್ಷ ಎನ್ನಬಹುದು. ನಟ, ನಟಿ, ನಿರ್ದೇಶಕ, ನಿರ್ಮಾಪಕರು ಹೀಗೆ ಸಾಲು ಸಾಲು ಮಂದಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬಾಲಿವುಡ್ ನಲ್ಲಿ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಮದುವೆ ಹಾಗೂ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಮದುವೆ ಈ ವರ್ಷ ಪ್ರಮುಖ ಆಕರ್ಷಣೆ.
ಈ ಕಡೆ ಸ್ಯಾಂಡಲ್ ವುಡ್ ನಲ್ಲಿ ದಿಗಂತ್-ಐಂದ್ರಿತಾ ಹಾಗೂ ನಟ ಸುಮಂತ್ ಶೈಲೇಂದ್ರ ಮದುವೆ ನಂತರ ಈಗ ಕನ್ನಡ ಚಿತ್ರರಂಗದ ಯುವ ನಿರ್ಮಾಪಕ ವಿಖ್ಯಾತ್ ವೈವಾಹಿಕ ಜೀವನ ಆರಂಭಿಸಿದ್ದಾರೆ.
ಕನಕಪುರ ರಸ್ತೆಯಲ್ಲಿರುವ ಶಿಬ್ರಾವಿ ರೆಸಾರ್ಟ್ ನಲ್ಲಿ ಇಂದು (ಡಿಸೆಂಬರ್ 14) ಮಧ್ಯಾಹ್ನ ನಡೆದ ಶುಭ ಲಗ್ನದಲ್ಲಿ ಸ್ವಾತಿ ಎಂಬುವರನ್ನ ವಿಖ್ಯಾತ್ ವರಿಸಿದ್ದಾರೆ.

ಅಂದ್ಹಾಗೆ ವಿಖ್ಯಾತ್, ರಮೇಶ್ ಅರವಿಂದ್ ಅಭಿನಯಿಸಿದ್ದ 'ಪುಷ್ಪಕ ವಿಮಾನ' ಚಿತ್ರವನ್ನ ಗೆಳೆಯರ ಜೊತೆ ಸೇರಿ ನಿರ್ಮಾಣ ಮಾಡಿದ್ದರು. ಈಗ ಪ್ರಜ್ವಲ್ ದೇವರಾಜ್ ಅಭಿನಯಿಸುತ್ತಿರುವ 'ಇನ್ಸ್ ಪೆಕ್ಟರ್ ವಿಕ್ರಂ' ಚಿತ್ರವನ್ನ ನಿರ್ಮಾಣ ಮಾಡ್ತಿದ್ದಾರೆ.
More from Filmibeat
English summary
Pushpak vimana, Inspector vikram movie producer vikhyath got married with swathi on today at shibravyi courtyard.


Click it and Unblock the Notifications











