'ವಿಸ್ಮಯ' ಚಿತ್ರಕ್ಕೆ ವಿತರಕರಿಂದ ಬೇಡಿಕೆ: ರೀ-ರಿಲೀಸ್ ಮಾಡುವ ಸಾಧ್ಯತೆ
'ಆಕ್ಷನ್ ಕಿಂಗ್' ಅರ್ಜುನ್ ಸರ್ಜಾ ಹಾಗೂ ಶ್ರುತಿ ಹರಿಹರನ್ ಅಭಿನಯದ 'ವಿಸ್ಮಯ' ಚಿತ್ರ ಬಿಡುಗಡೆ ಆಗಿದ್ದು ಕಳೆದ ವರ್ಷದ ಜುಲೈ ತಿಂಗಳಲ್ಲಿ. ನಿಜ ಹೇಳ್ಬೇಕಂದ್ರೆ, ಅಂದು ಸ್ಯಾಂಡಲ್ ವುಡ್ ನಲ್ಲಿ 'ವಿಸ್ಮಯ' ಚಿತ್ರ ಅಷ್ಟಾಗಿ ಸೌಂಡ್ ಮಾಡಲಿಲ್ಲ.
ಆದ್ರೀಗ, ಯಾರ ಬಾಯಲ್ಲಿ ಕೇಳಿದರೂ 'ವಿಸ್ಮಯ' ಚಿತ್ರದ್ದೇ ಮಾತು. ಅದಕ್ಕೆ ಕಾರಣ ನಟಿ ಶ್ರುತಿ ಹರಿಹರನ್ ಸಿಡಿಸಿರುವ ಬಾಂಬ್. 'ವಿಸ್ಮಯ' ಚಿತ್ರದ ಶೂಟಿಂಗ್ ರಿಹರ್ಸಲ್ ವೇಳೆ ಅರ್ಜುನ್ ಸರ್ಜಾ ತಮ್ಮ ಜೊತೆ ಅಸಭ್ಯವಾಗಿ ವರ್ತಿಸಿದ್ದರು ಎಂದು ಶ್ರುತಿ ಹರಿಹರನ್ ಆರೋಪಿಸಿದ್ದಾರೆ. ಹೀಗಾಗಿ, ಕಳೆದ ಕೆಲ ದಿನಗಳಿಂದ ಎಲ್ಲಾ ಸುದ್ದಿ ವಾಹಿನಿಗಳಲ್ಲಿ 'ವಿಸ್ಮಯ' ಚಿತ್ರದ ಕ್ಲಿಪ್ಪಿಂಗ್ಸ್ ಪ್ಲೇ ಆಗುತ್ತಿದೆ.
'ವಿಸ್ಮಯ' ಚಿತ್ರದಲ್ಲಿ ಅಂಥದ್ದೇನಿದೆ ಎಂಬ ಕುತೂಹಲ ಕೂಡ ಹಲವರಲ್ಲಿ ಕಾಡುತ್ತಿದೆ. ಇದರಿಂದ, 'ವಿಸ್ಮಯ' ಚಿತ್ರಕ್ಕೆ ವಿತರಕರಿಂದ ಬೇಡಿಕೆ ಹೆಚ್ಚಾಗಿದೆ. ವಿತರಕರ ಒತ್ತಾಯದ ಮೇರೆಗೆ 'ವಿಸ್ಮಯ' ಚಿತ್ರವನ್ನ ರೀ-ರಿಲೀಸ್ ಮಾಡಲು ನಿರ್ಮಾಪಕರು ಯೋಚಿಸುತ್ತಿದ್ದಾರೆ.

ರಾಜ್ಯೋತ್ಸವ ಮುಗಿದ ಮೇಲೆ ನಿರ್ದೇಶಕರ ಜೊತೆಗೆ ಚರ್ಚೆ ಮಾಡಿ 'ವಿಸ್ಮಯ' ಚಿತ್ರ ರೀ-ರಿಲೀಸ್ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ನಿರ್ಮಾಪಕ ಉಮೇಶ್ ಕುಮಾರ್ ತಿಳಿಸಿದ್ದಾರೆ.


Click it and Unblock the Notifications











