D55 ಚಿತ್ರದ ಗೊಂದಲಕ್ಕೆ ಬ್ರೇಕ್: ದರ್ಶನ್ 55 ಅವರಿಗೆ, 56 ಇವರಿಗೆ.!
Recommended Video

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ ಕೆಲವು ಹೊಸ ಸಿನಿಮಾಗಳು ಘೋಷಣೆಯಾದವು. ಸದ್ಯ 50ನೇ ಯಜಮಾನ ಮಾರ್ಚ್ 1ಕ್ಕೆ ಬಿಡುಗಡೆಯಾಗುತ್ತಿದೆ. 51ನೇ ಸಿನಿಮಾ ಕುರುಕ್ಷೇತ್ರ ರಿಲೀಸ್ ಗೆ ಸಜ್ಜಾಗುತ್ತಿದೆ. 52ನೇ ಚಿತ್ರ ಒಡೆಯ ಶೂಟಿಂಗ್ ನಡೆಯುತ್ತಿದೆ. 53ನೇ ಚಿತ್ರದ ರಾಬರ್ಟ್ ಅನೌನ್ಸ್ ಆಗಿದೆ. 54ನೇ ಚಿತ್ರ ಗಂಡುಗಲಿ ಮದಕರಿ ನಾಯಕ ಘೋಷಣೆಯಾಗಿದೆ. ಅಲ್ಲಿಗೆ ಎಲ್ಲವೂ ಪಕ್ಕಾ ಆಗಿದೆ.
ಆದ್ರೆ, ದಾಸ ಬರ್ತಡೇ ದಿನ 55ನೇ ಚಿತ್ರಕ್ಕೆ ಸಂಬಂಧ ಪಟ್ಟಂತೆ ಇಬ್ಬರು ನಿರ್ಮಾಪಕರು ಜಾಹೀರಾತು ನೀಡಿ ಗೊಂದಲ ಉಂಟು ಮಾಡಿದ್ದರು. ತಾರಕ್ ಸಿನಿಮಾ ಮಾಡಿದ್ದ ಪ್ರಕಾಶ್ ಮತ್ತು ಮೆಜಿಸ್ಟಿಕ್ ನಿರ್ಮಾಪಕ ಎಂ ಜೆ ರಾಮಮೂರ್ತಿ ಇಬ್ಬರು 55ನೇ ಚಿತ್ರ ನಮ್ಮದು ಎಂದು ಪ್ರಕಟಣೆ ಕೊಟ್ಟಿದ್ದರು.
ಇದು ಸಹಜವಾಗಿ ಅಭಿಮಾನಿಗಳಲ್ಲಿ ಕುತೂಹಲ ಮತ್ತು ಗೊಂದಲ ಮೂಡಿಸಿತ್ತು. ಇದೀಗ, ಡಿ55ನೇ ಚಿತ್ರಕ್ಕೆ ಸಂಬಂಧಪಟ್ಟಂತೆ ಒಂದು ಹಂತದ ಸ್ಪಷ್ಟನೆ ಸಿಕ್ಕಿದೆ. ಹಾಗಿದ್ರೆ, 55 ಯಾರಿಗೆ? 56 ಯಾರಿಗೆ? ಮುಂದೆ ಓದಿ.....

'D55' ನನ್ನದು ಅಂತಾರೆ ಮೆಜಿಸ್ಟಿಕ್ ನಿರ್ಮಾಪಕ
55ನೇ ಸಿನಿಮಾ ನನ್ನದು ಎಂದು ಎಂ ಜೆ ರಾಮಮೂರ್ತಿ ಸ್ಪಷ್ಟನೆ ನೀಡಿದ್ದಾರೆ. ದರ್ಶನ್ ಅವರು ನನಗೆ ಕಾಲ್ ಶೀಟ್ ಕೊಟ್ಟಿದ್ದಾರೆ. ರಾಬರ್ಟ್, ಮದಕರಿ ನಾಯಕ ಆದ್ಮೇಲೆ ನನ್ನ ಸಿನಿಮಾ ಆರಂಭವಾಗುತ್ತೆ. ಇದರಲ್ಲಿ ನನಗೆ ಯಾವುದೇ ಗೊಂದಲ ಇಲ್ಲ ಎಂದು ಮೆಜೆಸ್ಟಿಕ್ ನಿರ್ಮಾಪಕ ಖಚಿತಪಡಿಸಿದ್ದಾರೆ.

ಅವರ ಸಿನಿಮಾ ಬಗ್ಗೆ ನನಗೆ ಗೊತ್ತಿಲ್ಲ
ನಾನು ದರ್ಶನ್ ಅವರ ಬಳಿ ಮಾತನಾಡಿದ್ದೆ. ಸಿನಿಮಾ ಅನೌನ್ಸ್ ಮಾಡ್ತೀನಿ ಎಂದು ಕೇಳಿ ಪ್ರಕಟಣೆ ಮಾಡಿದೆ. ಆದ್ರೆ, ಇನ್ನೊಂದು ಚಿತ್ರತಂಡವೂ ಅದೇ ಹೆಸರಿನಲ್ಲಿ ಅನೌನ್ಸ್ ಮಾಡ್ತಾರೆ ಎಂಬುದು ನನಗೆ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.

ಮೊದಲು ಅವರೇ ಮಾಡಲಿ
ನಮಗೂ ಎಂಜೆ ರಾಮಮೂರ್ತಿ ಅವರ ಚಿತ್ರದ ಬಗ್ಗೆ ಗೊತ್ತಿಲ್ಲ. ದರ್ಶನ್ ಅವರ ಬಳಿ ಕಾಲ್ ಶೀಟ್ ಬಗ್ಗೆ ಮಾತನಾಡಿದ್ವಿ. ಓಕೆ ಎಂದಿದ್ದಾರೆ. ಅದಕ್ಕೆ ಅನೌನ್ಸ್ ಮಾಡಿದ್ವಿ. ಆದ್ರೆ, 55ನೇ ಸಿನಿಮಾ ನಮ್ಮದು ಎಂದು ನಾವು ಅಂದುಕೊಂಡಿದ್ದೇವೆ. ಒಂದು ವೇಳೆ ಅವರೇ ಮಾಡ್ತಾರೆ ಅಂದ್ರೆ, ಪರವಾಗಿಲ್ಲ ನಾವು ಕಾಯುತ್ತೇವೆ ಎಂದು ತಾರಕ್ ನಿರ್ಮಾಪಕ ದುಷ್ಯಂತ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

ಅಲ್ಲಿಗೆ ಗೊಂದಲ ಬಗೆಹರಿಯಿತು
ದರ್ಶನ್ ಅವರು ಒಂದು ಸಿನಿಮಾ ಮಾಡುವಾಗ ಇನ್ನೊಂದು ಚಿತ್ರದ ಬಗ್ಗೆ ಮಾತನಾಡಲ್ಲ. ಸದ್ಯಕ್ಕೆ ಯಜಮಾನ ಅಂತಾರೆ ಡಿ ಬಾಸ್. ಎಂಜೆ ರಾಮಮೂರ್ತಿ ಅವರೇ 55ನೇ ಮಾಡಲಿ ಅಂತ ಇನ್ನೊಬ್ಬ ನಿರ್ಮಾಪಕ ದುಷ್ಯಂತ್ ಕೂಲ್ ಆದರು. ಅಲ್ಲಿಗೆ ಮೆಜಿಸ್ಟಿಕ್ ನಿರ್ಮಾಪಕನ ಪಾಲಿಗೆ 55 ಹೋಗಬಹುದು. 56ನೇ ಸಿನಿಮಾವನ್ನ ತಾರಕ್ ಜೋಡಿ ಮಾಡಬಹುದು.

ಎರಡು ಚಿತ್ರಗಳಿಗೆ ಟೈಟಲ್, ಕತೆ ಫಿಕ್ಸ್ ಆಗಿಲ್ಲ
ಹಾಗ್ನೋಡಿದ್ರೆ, ದರ್ಶನ್ ಅವರ 55 ಮತ್ತು 56ನೇ ಚಿತ್ರಗಳಿಗೆ ಸಂಬಂಧಿಸಿದಂತೆ ಟೈಟಲ್, ಕಥೆ, ನಾಯಕಿ ಏನೂ ಫೈನಲ್ ಆಗಿಲ್ಲ. ಸದ್ಯಕ್ಕೆ ಕಾಲ್ ಶೀಟ್ ಮಾತ್ರ ಕೊಟ್ಟಿದ್ದಾರೆ. ಹಾಗಾಗಿ, ನಿರ್ಮಾಪಕರು ಅನೌನ್ಸ್ ಮಾಡಿದ್ದಾರೆ. ಈ ವರ್ಷ ದರ್ಶನ್ ಬ್ಯುಸಿಯಾಗಿದ್ದು, ಬಹುಶಃ ಮುಂದಿನ ವರ್ಷಕ್ಕೆ ಈ ಸಿನಿಮಾಗಳು ಆರಂಭವಾಗಲಿದೆ.


Click it and Unblock the Notifications











