ಒಂದೇ ದಿನ 'ಸಲಗ', 'ಕೋಟಿಗೊಬ್ಬ 3' ಬಿಡುಗಡೆ: ಸಲಹೆ ನೀಡಿದ ಶಿವರಾಜ್‌ ಕುಮಾರ್

ಅಕ್ಟೋಬರ್ 1 ರಿಂದ ಚಿತ್ರಮಂದಿರಗಳು ತಮ್ಮ ಪೂರ್ಣ ಸೀಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಬಹುದು ಎಂದು ರಾಜ್ಯ ಸರ್ಕಾರ ಆದೇಶ ನೀಡುತ್ತಿದ್ದಂತೆ ಸಿನಿಮಾಗಳು ಒಂದರ ಹಿಂದೊಂದರಂತೆ ತೆರೆಗೆ ಬರಲು ದಿನಾಂಕ ಘೋಷಿಸುತ್ತಿವೆ.

Recommended Video

ದುನಿಯಾ ವಿಜಯ್ ಸಲಗಕ್ಕೆ ಡೋಂಟ್ ಕೇರ್ ಎಂದ ಕೋಟಿಗೊಬ್ಬ ನಿರ್ಮಾಪಕ

ಇದರಿಂದಾಗಿ ಚಿತ್ರಮಂದಿರಗಳ ಮೇಲೆ ಒತ್ತಡ ಹೆಚ್ಚಾಗಲಿದ್ದು, ಸಿನಿಮಾಗಳು ಸಹ ಸೂಕ್ತವಾಗಿ ಪ್ರೇಕ್ಷಕನಿಗೆ ತಲುಪದೆ, ನಿರ್ಮಾಪಕರು ನಷ್ಟ ಅನುಭವಿಸುವ ಸಾಧ್ಯತೆ ಇದೆ. ಜೊತೆಗೆ ನಟರ ನಡುವೆ ಅನಾರೋಗ್ಯಕರ ಸ್ಪರ್ಧೆಗೂ ಇದು ಕಾರಣವಾಗಬಹುದು.

ನಟ ದುನಿಯಾ ವಿಜಯ್ ನಟಿಸಿರುವ 'ಸಲಗ' ಹಾಗೂ ಸುದೀಪ್ ನಟನೆಯ 'ಕೋಟಿಗೊಬ್ಬ 3' ಸಿನಿಮಾ ಒಂದೇ ದಿನ ತೆರೆಗೆ ಬರುತ್ತಿದ್ದು, ಇಬ್ಬರು ಸ್ಟಾರ್ ನಟರ ಸಿನಿಮಾಗಳ ನಡುವೆ ಸ್ಪರ್ಧೆ ಏರ್ಪಡುತ್ತಿದೆ. ಎರಡೂ ಸಿನಿಮಾಗಳು ಅಕ್ಟೋಬರ್ 14 ರಂದೇ ತೆರೆಗೆ ಬರಲು ಸಜ್ಜಾಗಿವೆ. ಇದರಿಂದ ಚಿತ್ರಮಂದಿರಗಳ ಮೇಲೆ ಒತ್ತಡ ಹೆಚ್ಚಲಿದ್ದು, ಯಾವುದಾದರೂ ಒಂದು ಸಿನಿಮಾ ನೆಲಕಚ್ಚುವ ಸಾಧ್ಯತೆಯೂ ಇದೆ. ಈ ಬೆಳವಣಿಗೆ ಗಾಂಧಿ ನಗರದಲ್ಲಿ ಚರ್ಚೆ ಹುಟ್ಟುಹಾಕಿದ್ದು, ನಟ ಶಿವರಾಜ್ ಕುಮಾರ್ ಈ ಕುರಿತು ಸಲಹೆಯೊಂದನ್ನು ನೀಡಿದ್ದಾರೆ.

'ಎರಡೂ ಸಿನಿಮಾಕ್ಕೂ ಒಳ್ಳೆಯದಾಗಬೇಕು: ಶಿವಣ್ಣ

'ಎರಡೂ ಸಿನಿಮಾಕ್ಕೂ ಒಳ್ಳೆಯದಾಗಬೇಕು: ಶಿವಣ್ಣ

ಮಾಧ್ಯಮದೊಟ್ಟಿಗೆ ಮಾತನಾಡಿರುವ ಶಿವರಾಜ್ ಕುಮಾರ್, ''ಯಾವುದೇ ಸಿನಿಮಾ ರಿಲೀಸ್ ಆಗಬೇಕೆಂದರೂ ಹೊಂದಾಣಿಕೆ ಇರಬೇಕು. ಸಲಗ ಮತ್ತು 'ಕೋಟಿಗೊಬ್ಬ 3' ಎರಡೂ ಚಿತ್ರಕ್ಕೂ ಒಳ್ಳೆಯದಾಗಬೇಕು. ಒಂದೇ ದಿನ ಬಂದರೆ ತೊಂದರೆಯೇ. ನಿರ್ಮಾಪಕರು ಮಾತಾಡಿಕೊಂಡು, ಬಗೆಹರಿಸಿಕೊಳ್ಳಬೇಕು'' ಎಂದಿದ್ದಾರೆ ಶಿವರಾಜ್ ಕುಮಾರ್.

ಚಿತ್ರರಂಗದಲ್ಲಿ ಹೊಂದಾಣಿಕೆ ಮುಖ್ಯ: ಶಿವಣ್ಣ

ಚಿತ್ರರಂಗದಲ್ಲಿ ಹೊಂದಾಣಿಕೆ ಮುಖ್ಯ: ಶಿವಣ್ಣ

ಮುಂದುವರೆದು ಮಾತನಾಡಿ, ''ಬಹುಶಃ ಎರಡೂ ಸಿನಿಮಾ ಒಂದೇ ದಿನ ತೆರೆಗೆ ಬರಲಿದೆ. ನನ್ನ ಪ್ರಕಾರ ಒಂದು ಸಿನಿಮಾ ಮಾತ್ರ ತೆರೆಗೆ ಬಂದರೆ ಒಳ್ಳೆಯದು. ಸಾಕಷ್ಟು ಸಿನಿಮಾಗಳು ರಿಲೀಸ್​​ಗೆ ರೆಡಿ ಇವೆ. ಯಾರೇ ಬರುವುದಾದರೂ ಮಾತನಾಡಿಕೊಂಡು ಬರಲಿ. ಈಗ ಚಿತ್ರರಂಗದಲ್ಲಿ ಹೊಂದಾಣಿ ಮುಖ್ಯ'' ಎಂದು ಎಲ್ಲರಿಗೂ ಅನ್ವಯವಾಗುವಂತೆ ಸಲಹೆ ನೀಡಿದ್ದಾರೆ ಶಿವರಾಜ್ ಕುಮಾರ್.

ಸಂಧಾನ ನಡೆಸುತ್ತಾರಾ ಶಿವಣ್ಣ?

ಸಂಧಾನ ನಡೆಸುತ್ತಾರಾ ಶಿವಣ್ಣ?

ಚಿತ್ರರಂಗದ ಮುಂದಾಳು ಶಿವರಾಜ್ ಕುಮಾರ್ ಆಗಿದ್ದು, ಅವರ ಮಾತಿನಂತೆ 'ಸಲಗ' ಹಾಗೂ 'ಕೋಟಿಗೊಬ್ಬ 3' ನಿರ್ಮಾಪಕರು ಕೂತು ಚರ್ಚೆ ಮಾಡಿ ಯಾರಾದರೂ ಒಬ್ಬರು ಹಿಂದೆ ಸರಿಯುತ್ತಾರಾ ಅಥವಾ ಶಿವರಾಜ್ ಕುಮಾರ್ ಅವರೇ ಎರಡೂ ಚಿತ್ರತಂಡಗಳನ್ನು ವಿಶ್ವಾಸಕ್ಕೆ ಪಡೆದು ಚರ್ಚೆ ನಡೆಸಿ ತಾವೇ ಸಮಂಜಸವಾದ ಆದೇಶವೊಂದನ್ನು ನೀಡುತ್ತಾರಾ ನೋಡಬೇಕಾಗಿದೆ.

'ಭಜರಂಗಿ 2' ಬಿಡುಗಡೆ ದಿನವೇ 'ಪ್ರೇಮಂ ಪೂಜ್ಯಂ' ಬಿಡುಗಡೆ

'ಭಜರಂಗಿ 2' ಬಿಡುಗಡೆ ದಿನವೇ 'ಪ್ರೇಮಂ ಪೂಜ್ಯಂ' ಬಿಡುಗಡೆ

ಶಿವರಾಜ್ ಕುಮಾರ್ ನಟನೆಯ 'ಭಜರಂಗಿ 2' ಸಿನಿಮಾ ಸಹ ಅಕ್ಟೋಬರ್ 29 ಕ್ಕೆ ಬಿಡುಗಡೆಗೆ ಸಜ್ಜಾಗಿದೆ. ಅದೇ ದಿನ ನಟ ಲವ್ಲಿ ಪ್ರೇಮ್ ನಟನೆಯ 'ಪ್ರೇಮಂ ಪೂಜ್ಯಂ' ಸಿನಿಮಾ ಸಹ ಬಿಡುಗಡೆ ಆಗುತ್ತಿದೆ. ಇದನ್ನು ಶಿವಣ್ಣ ಹೇಗೆ ತಪ್ಪಿಸುತ್ತಾರೆ ಎಂಬುದು ಸಹ ಕುತೂಹಲ ಮೂಡಿಸಿದೆ. ಕಳೆದ ಒಂದೂವರೆ ವರ್ಷದಿಂದ ಕೇವಲ ಬೆರಳೆಣಿಕೆಯ ಸಿನಿಮಾಗಳಷ್ಟೆ ಬಿಡುಗಡೆ ಆಗಿವೆ. ಹಾಗಾಗಿ ಬಿಡುಗಡೆಗೆ ತಯಾರಾಗಿರುವ ಸಿನಿಮಾಗಳು ನಾ ಮುಂದು-ತಾ ಮುಂದು ಎನ್ನುತ್ತಾ ಬಿಡುಗಡೆ ದಿನಾಂಕವನ್ನು ಘೋಷಿಸುತ್ತಿವೆ.

ಬಿಡುಗಡೆ ಮಾಡಿಯೇ ಸಿದ್ಧ ಎಂದ ಸೂರಪ್ಪ ಬಾಬು

ಬಿಡುಗಡೆ ಮಾಡಿಯೇ ಸಿದ್ಧ ಎಂದ ಸೂರಪ್ಪ ಬಾಬು

'ಕೋಟಿಗೊಬ್ಬ 3' ಸಿನಿಮಾ ನಿರ್ಮಾಪಕ ಸೂರಪ್ಪ ಬಾಬು ಮಾಧ್ಯಮಗಳ ಬಳಿ ಈಗಾಗಲೇ ಸ್ಪಷ್ಟಪಡಿಸಿದ್ದು, ತಾವು ಸಿನಿಮಾ ಬಿಡುಗಡೆಯನ್ನು ಮುಂದಕ್ಕೆ ಹಾಕುವುದಿಲ್ಲ, 'ಸಲಗ' ಅಕ್ಟೋಬರ್ 14ಕ್ಕೆ ಬಿಡುಗಡೆ ಆದರೂ ಪರವಾಗಿಲ್ಲ, ನಾನೂ ಸಹ ಅದೇ ದಿನವೇ ಸಿನಿಮಾ ಬಿಡುಗಡೆ ಮಾಡಿಯೇ ಸಿದ್ಧ ಎಂದಿದ್ದಾರೆ. 'ಸಲಗ' ಸಿನಿಮಾದ ನಿರ್ಮಾಪಕ ಕೆಪಿ ಶ್ರೀಕಾಂತ್ ಸಹ 'ಸಲಗ' ಬಿಡುಗಡೆ ದಿನಾಂಕ ಮುಂದೂಡುವ ಯಾವ ಲಕ್ಷ್ಣಗಳು ಈವರೆಗೆ ಗೋಚರಿಸಿಲ್ಲ. ಆ ಮೂಲಕ ದಸರಾ ಹಬ್ಬಕ್ಕೆ ಕನ್ನಡದಲ್ಲೂ ಸ್ಟಾರ್ ವಾರ್‌ಗೆ ವೇದಿಕೆ ಸಜ್ಜಾಗಿದೆ ಎಂಬುದು ಬಹುತೇಕ ಖಾತ್ರಿಯಾಗಿದೆ.

More from Filmibeat

English summary
Actor Shiva Rajkumar suggested that releasing two big stars movies on the same day is not good for movies and the industry. Producers should talk to each other before releasing their movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X