ನಿರ್ಮಾಪಕನಿಂದ ಗಂಭೀರ ಆರೋಪ; ಬಿಗ್‌ಬಾಸ್ ವಿನ್ನರ್ ಗಿಲ್ಲಿ ನಟ ವಿರುದ್ಧ ದೂರು

ಬಿಗ್‌ಬಾಸ್ ವಿನ್ನರ್ ಗಿಲ್ಲಿ ಕ್ರೇಜ್ ಇನ್ನು ಕಮ್ಮಿ ಆಗಿಲ್ಲ. ಟ್ರೋಫಿ ಗೆದ್ದು ಬಂದ ದಿನದಿಂದ ಗಿಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿಬಿಟ್ಟಿದ್ದಾರೆ. ಸಭೆ ಸಮಾರಂಭಗಳಿಗೆ ಅತಿಥಿಗಳಾಗಿ ಹೋಗುತ್ತಿದ್ದಾರೆ. ಸಂದರ್ಶನಗಳಲ್ಲಿ ಭಾಗವಹಿಸುತ್ತಿದ್ದಾರೆ. ಒಂದು ಕ್ಷಣ ಕೂಡ ಪುರಸೊತ್ತು ಎನ್ನುವ ಎನ್ನುವಂತಾಗಿದೆ. ಗಿಲ್ಲಿ ನಮ್ಮನ್ನು ಭೇಟಿ ಮಾಡ್ತಿಲ್ಲ ಎಂದು ಅಭಿಮಾನಿಗಳು ಹೇಳಿದ್ದು ಆಯ್ತು. ಈಗ ನಮ್ಮ ಸಿನಿಮಾ ಪ್ರಚಾರಕ್ಕೆ ಗಿಲ್ಲಿ ಬಂದಿಲ್ಲ ಎಂದು ನಿರ್ಮಾಪಕರು ಫಿಲ್ಮ್ ಚೇಂಬರ್ ಮೆಟ್ಟಿಲೇರಿದ್ದಾರೆ.

ಸಿನಿಮಾಗಳಲ್ಲಿ ನಟಿಸುವುದು ಮಾತ್ರವಲ್ಲ, ಆ ಚಿತ್ರವನ್ನು ಪ್ರಚಾರ ಮಾಡಿ ಪ್ರೇಕ್ಷಕರ ಬಳಿಗೆ ತೆಗೆದುಕೊಂಡು ಹೋಗುವುದು ಕೂಡ ಕಲಾವಿದರ ಜವಾಬ್ದಾರಿ. ಸಿನಿಮಾ ಒಪ್ಪಿಕೊಳ್ಳುವಾಗ ಈ ಬಗ್ಗೆ ಚರ್ಚೆ ನಡೆದಿರುತ್ತದೆ. ಆದರೆ ಗಿಲ್ಲಿ ತಮ್ಮದೇ ಸಿನಿಮಾ ಪ್ರಚಾರಕ್ಕೆ ಬರ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಗಿಲ್ಲಿ ನಟನೆಯ 'ಸರ್ಕಾರಿ ಶಾಲೆ ಎಚ್​​8' ಎಂಬ ಸಿನಿಮಾ ಈ ವಾರ ತೆರೆಗೆ ಬಂದಿದೆ. ಆದರೆ ಇದು ಸಾಕಷ್ಟು ಜನರಿಗೆ ಗೊತ್ತೇಯಿಲ್ಲ.

Promotion Controversy Surrounds bigg boss winner Gilli During SarkariShaale H8 Release

ಗುಣ ಹರಿಯಬ್ಬೆ ಎಂಬುವವರು 'ಸರ್ಕಾರಿ ಶಾಲೆ ಎಚ್​​8' ಚಿತ್ರ ನಿರ್ದೇಶನ ಮಾಡಿದ್ದಾರೆ. ಗಿಲ್ಲಿ ಬಿಗ್‌ಬಾಸ್ ಮನೆಗೆ ಹೋಗುವ ಮುನ್ನ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. ಅದರಲ್ಲಿ ಇದು ಕೂಡ ಒಂದು. ಸರ್ಕಾರಿ ಶಾಲೆಯ ಸುತ್ತಾ ಚಿತ್ರದ ಕಥೆ ಸಾಗುತ್ತದೆ. ರಾಘವೇಂದ್ರ ರಾಜ್‌ಕುಮಾರ್ ಕೂಡ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರದಲ್ಲಿ ಕೂಡ ಗಿಲ್ಲಿ ಕಾಮಿಡಿ ಪಂಚ್‌ಗಳಿವೆ.

ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ಫೇಮಸ್ ಆಗುತ್ತಿದ್ದಂತೆ ಅದೇ ಕ್ರೇಜ್ ಬಳಸಿಕೊಂಡು ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿತ್ತು. ಗಿಲ್ಲಿಯನ್ನು ಹೈಲೆಟ್ ಮಾಡಿ ಟ್ರೈಲರ್ ಸಹ ಬಿಡುಗಡೆ ಮಾಡಿದ್ದರು. ಆದರೆ ಚಿತ್ರದ ಪ್ರಚಾರಕ್ಕೆ ಗಿಲ್ಲಿ ಬಂದಿಲ್ಲ ಎಂದು ನಿರ್ಮಾಪಕ ತೇಜಸ್ವಿ ಆರೋಪಿಸಿದ್ದಾರೆ. ಸಂಭಾವನೆ ಪಡೆದು ಚಿತ್ರದಲ್ಲಿ ನಟಿಸಿರುವ ಗಿಲ್ಲಿ ಪ್ರಚಾರಕ್ಕೆ ಮಾತ್ರ ಬಂದಿಲ್ಲ. ಕೇಳಿದಷ್ಟು ಸಂಭಾವನೆ ಕೊಟ್ಟಿದ್ದೀವಿ. ಈಗ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಚಾರಕ್ಕೆ ಬರುವುದು ಇರಲಿ, 'ಸರ್ಕಾರಿ ಶಾಲೆ ಎಚ್​​8' ಚಿತ್ರದ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ಪೋಸ್ಟ್ ಕೂಡ ಗಿಲ್ಲಿ ಮಾಡಲಿಲ್ಲ ಎಂದು ನಿರ್ಮಾಪಕರು ಅಲವತ್ತುಕೊಂಡಿದ್ದಾರೆ. ದೂರು ಸ್ವೀಕರಿಸಿರುವ ಫಿಲ್ಮ್ ಚೇಂಬರ್ ಗಿಲ್ಲಿ ಅವರನ್ನು ಕರೆಸಿ ವಿಚಾರಣೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಗುಣ ಹರಿಯಬ್ಬೆ ಚಿತ್ರದ ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ.

ಮೊದಲೇ ಹೇಳಿದಂತೆ ಬಿಗ್‌ಬಾಸ್ ಮನೆಯಿಂದ ಹೊರ ಬಂದ ದಿನದಿಂದ ಗಿಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಕಲರ್ಸ್ ಕನ್ನಡ ವಾಹಿನಿಯ ಹೊಸ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಬಿಗ್‌ಬಾಸ್ ಸೀಸನ್-12 ಸ್ಪರ್ಧಿಗಳೆಲ್ಲಾ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದಾರೆ. ದೊಡ್ಮನೆ ಹಬ್ಬ ಹೆಸರಿನಲ್ಲಿ ಕಾರ್ಯಕ್ರಮ ಚಿತ್ರೀಕರಣವಾಗಿದೆ. ಶಿವರಾತ್ರಿ ಸಂಭ್ರಮದಲ್ಲಿ ಕಾರ್ಯಕ್ರಮ ಪ್ರಸಾರವಾಗುವ ಸಾಧ್ಯತೆಯಿದೆ. ಕಲರ್‌ಫುಲ್ ಕಾಸ್ಟ್ಯೂಮ್‌ಗಳಲ್ಲಿ ಸ್ಪರ್ಧಿಗಳು ಕಾಣಿಸಿಕೊಂಡಿರುವ ಫೋಟೊ, ವಿಡಿಯೋ ವೈರಲ್ ಆಗ್ತಿದೆ.

ಪ್ರಚಾರಕ್ಕೆ ಹೋಗಲು ಸಾಧ್ಯವಿಲ್ಲದಿದ್ದರೂ ಗಿಲ್ಲಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ಪೋಸ್ಟ್ ಮಾಡಬಹುದಿತ್ತು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಬಿಗ್‌ಬಾಸ್ ಶೋ ಗೆದ್ದ ಮಾತ್ರಕ್ಕೆ ಬೇರೆ ವಿಚಾರಗಳನ್ನು ಮರೆಯಬಾರದು ಎಂದು ಕಿವಿಮಾತು ಹೇಳುತ್ತಿದ್ದಾರೆ. ಗಿಲ್ಲಿ ಬಿಗ್‌ಬಾಸ್ ಮನೆಯಲ್ಲಿ ಇದ್ದಾಗ ಅವರ ಭಾವಚಿತ್ರವನ್ನು ಕುಮಾರ್ ಎಂಬುವವರು ಕೈಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದರು. ಆದರೆ ಬಿಗ್‌ಬಾಸ್ ಶೋ ಮುಗಿದ ಬಳಿಕ ಭೇಟಿ ಮಾಡುವುದಾಗಿ ಹೇಳಿ ಭೇಟಿ ಮಾಡಲಿಲ್ಲ ಎಂದು ಕುಮಾರ್ ಆರೋಪಿಸಿ ಬೇಸರ ವ್ಯಕ್ತಪಡಿಸಿದ್ದರು.

ಇನ್ನು ಗಿಲ್ಲಿ ಬಿಗ್‌ಬಾಸ್ ಮನೆ ಒಳಗೆ ಇದ್ದಾಗಲೇ 'ಡೆವಿಲ್' ಚಿತ್ರ ಬಿಡುಗಡೆ ಆಗಿತ್ತು. ಆ ಚಿತ್ರದ ಸಣ್ಣ ಪಾತ್ರದಲ್ಲಿ ಗಿಲ್ಲಿ ಮಿಂಚಿದ್ದರು. ಗಿಲ್ಲಿ ನಟನೆಯ 'ಲಂಗೋಟಿ ಮ್ಯಾನ್' ಎಂಬ ಸಿನಿಮಾ 2024ರಲ್ಲಿ ತೆರೆಗೆ ಬಂದಿತ್ತು. ಕಳೆದ ವರ್ಷ 'ಸೂಪರ್ ಹಿಟ್', 'ಫಸ್ಟ್ ಡೇ ಫಸ್ಟ್ ಶೋ' ಹಾಗೂ 'ಡೆವಿಲ್' ಚಿತ್ರಗಳು ಬಿಡುಗಡೆ ಆಗಿದ್ದವು.

ಕಳೆದ ವಾರ ತೆರೆಕಂಡ 'ಚೌಕಿದಾರ್' ಎಂಬ ಚಿತ್ರದಲ್ಲಿ ಕೂಡ ಗಿಲ್ಲಿ ಮಿಂಚಿದ್ದರು. ಇದೀಗ 'ಸರ್ಕಾರಿ ಶಾಲೆ ಎಚ್​​8' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದೆ ಗಿಲ್ಲಿ ಸಿನಿಮಾ ನಿರ್ದೇಶಕ ಆಗುತ್ತಾರೆ ಎನ್ನುವ ಚರ್ಚೆ ಕೂಡ ನಡೀತಿದೆ.

More from Filmibeat

Read more about: gilli bigg boss sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X