ನನ್ನ ತಮ್ಮನ ಹೆಂಡ್ತಿಗೆ 13 ವರ್ಷದ ಮಗಳಿದ್ದಾಳೆ- ಬಿಗ್ ಬಾಸ್ ರಂಜಿತ ವಿರುದ್ಧ ಹೊಸ ಬಾಂಬ್ ಸಿಡಿಸಿದ ಅಕ್ಕ

ಮನಿ ಕಂಡರೆ ಮನುಷ್ಯತ್ವಾನೂ ಮರೆಯೋರು ಇರುವ ಕಾಲ ಇದು. ಇಂತಹ ಕಾಲದಲ್ಲಿ ಅನೇಕರು ತತ್ವ ಸಿದ್ಧಾಂತಗಳನ್ನೆಲ್ಲ ಗಂಟು ಮೂಟೆ ಕಟ್ಟಿ ಬಾವಿಗೆ ಎಸೆದಿದ್ದಾರೆ. ಇಂತಹ ಕಾಲದಲ್ಲಿ ಹಣಕ್ಕೋಸ್ಕರ.. ಆಸ್ತಿಗೋಸ್ಕರ.. ಒಂದು ಅರ್ಧ ಸೈಟ್ ಗೋಸ್ಕರ.. ಮನೆಯಲ್ಲಿಯೇ ಬಿರುಕು ಮೂಡುತ್ತೆ. ವೈರತ್ವ ಬೆಳೆಯುತ್ತೆ. ತಂದೆ -ಮಗ ಇರಬಹುದು.. ಅತ್ತೆ-ಸೊಸೆ ಇರಬಹುದು.. ಗಂಡ-ಹೆಂಡತಿ ಇರಬಹುದು.. ಅಕ್ಕ-ತಮ್ಮ ಅಥವಾ ಅಣ್ಣ ತಂಗಿಯೇ ಆಗಿರಬಹುದು.

ಹಣದ ಮುಂದೆ ಸಂಬಂಧಗಳು ಕಳಚಿ ಬೀಳುತ್ತವೆ. ಹಣ ಮತ್ತು ಆಸ್ತಿಯ ಮೇಲಿನ ವ್ಯಾಮೋಹದಿಂದ ಸಂಬಂಧಗಳು ಮಣ್ಣು ಪಾಲಾಗುತ್ತವೆ. ಇದಕ್ಕೆ ಬಿಗ್ ಬಾಸ್ ಸ್ಫರ್ಧಿ ರಂಜಿತ್ ಮತ್ತು ಅವರ ಅಕ್ಕ ರಶ್ಮಿ ನಡುವೆ ಹಾದಿ ಬೀದಿ ರಂಪ ಸದ್ಯದ ಉದಾಹರಣೆ.

property-dispute-twist-bigg-boss-ranjiths-sister-rashmi-claims-his-wife-has-a-13-year-old-daughter

ಹೌದು, ಎಲ್ಲರಿಗೆ ಗೊತ್ತಿರುವಂತೆ ಬಿಗ್ ಬಾಸ್ ರಂಜಿತ್ ಮತ್ತು ಅವರ ಅಕ್ಕ ರಶ್ಮಿ ಅವರ ನಡುವಿನ ಆಸ್ತಿ ಕಲಹ ಭುಗಿಲೆದ್ದಿದೆ. ಪರಸ್ಪರ ಇಬ್ಬರು ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿದ್ಧಾರೆ. ನನ್ನ ಫ್ಲಾಟ್‌, ನಾನ್ಯಾಕೆ ಬಿಟ್ಟುಕೊಡಬೇಕು ಎಂದು ʻಬಿಗ್‌ ಬಾಸ್‌ʼ ರಂಜಿತ್‌ ಗುಡುಗಿದರೆ ಅವರ ಅಕ್ಕ ರಶ್ಮಿ, ಇದು ನನಗೆ ಸೇರಿದ ಫ್ಲಾಟ್‌ ಎಂದು ಕೆಂಡ ಕಾರುತ್ತಿದ್ದಾರೆ. ಇವರ ಈ ಮನೆಯ ಗಲಾಟೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಲವರು ಕಣ್ತುಂಬಿಕೊಂಡಿದ್ದಾರೆ. ಹೀಗಿರುವಾಗ ಇದೀಗ ರಂಜಿತ್ ಅವರ ಅಕ್ಕ ರಶ್ಮಿ ಸದ್ಯ ಹೊಸದೊಂದು ಟ್ವಿಸ್ಟ್‌ನ್ನು ನೀಡಿದ್ದಾರೆ. ರಂಜಿತ ಅವರ ಪತ್ನಿ ಮಾನಸಾಗೆ ಹದಿಮೂರು ವರ್ಷದ ಮಗಳಿದ್ದಾಳೆ ಎಂದು ಹೇಳಿದ್ಧಾರೆ.

ಈ ಕುರಿತು ''ಪಬ್ಲಿಕ್ ಟಿವಿ'' ಜೊತೆ ಮಾತನಾಡಿರುವ ರಶ್ಮಿ,2017ರಲ್ಲಿ ತಗೊಂಡು 2018ರಲ್ಲಿ ಮನೆ ನಾನು ನನ್ನ ಹ್ಯಾಂಡೋವರ್‌ಗೆ ಮಾಡಿಕೊಂಡೆ. ಮನೆ ತೆಗೆದುಕೊಂಡ ಕ್ಷಣದಿಂದ ಇಲ್ಲಿಯವರೆಗೆ ಇಎಂಐ ನಾನು ಕಟ್ಟಿಕೊಂಡು ಸತ್ತಿದೀನಿ ಎಂದು ಹೇಳಿದ್ದಾರೆ.

ನನಗೆ ಮನೆ ಬಾಡಿಗೆ ಕೊಡು ನಾನು ಬಾಡಿಗೆ ಕಟ್ಟಿಕೊಂಡು ಹೋಗುತ್ತೇನೆ ಎಂದು ಹೇಳಿದ. ನಾನು ನಂಬಿ ಮನೆ ಕೊಟ್ಟೆ. ಅದಾದ ನಂತರ ಒಂದು ತಿಂಗಳು ಬಾಡಿಗೆ ನೀಡಿದ ಅಷ್ಟೇ ಎಂದು ಹೇಳಿರುವ ರಶ್ಮಿ ಎರಡನೇ ತಿಂಗಳು ಕೇಳಿದರೆ ನನ್ನ ಹೆಂಡತಿಗೆ ಹೆಸರಿಗೆ ಫ್ಲ್ಯಾಟ್ ಬರೆದುಕೊಡು ಅಂತಾನೆ. ನಾನು ಕಷ್ಟ ಪಟ್ಟು ತಗೊಂಡಿದ್ದು ಅವನ ಹೆಂಡತಿ ಹೆಸರಿಗೆ ಬರೆಯೋದಕ್ಕಾ..? ಎಂದು ಪ್ರಶ್ನೆ ಕೇಳಿದ್ದಾರೆ.

2018ರಲ್ಲಿ ಒಂದು 2019ರಲ್ಲಿ ಒಂದು ಎರಡು ಫ್ಲ್ಯಾಟ್‌ಗಳನ್ನು ನಾನು ಒಂದೇ ಕಡೆ ತಗೊಂಡಿದ್ದು ಎಂದು ಹೇಳಿರುವ ರಂಜಿತ್ ಅಕ್ಕ ರಶ್ಮಿ ನಾನು ಕೆಲಸಕ್ಕೆ ಹೋಗುವ ಮಹಿಳೆ, ಗೃಹಿಣಿ ಅಲ್ಲ.. ಒಂದು ಫ್ಲ್ಯಾಟ್‌ನ ಬಾಡಿಗೆಗೆ ಕೊಟ್ಟು ಅಲ್ಲಿಂದ ಬಂದ ಹಣವನ್ನು ಕಟ್ಟಿಕೊಂಡು ಹೇಗೂ ತೂಗಿಸಿಕೊಂಡು ಹೋಗ್ತಿದ್ದೇ ಎಂದು ಹೇಳಿದ್ದಾರೆ. ಇಲ್ಲಿಯವರೆಗೆ ನಾನು ಕಟ್ಟಿಕೊಂಡು ಬಂದು ಸಂಭಾಳಿಸಿಕೊಂಡು ಬಂದಿದ್ದೇ ಎಂದು ಹೇಳಿದ್ದಾರೆ.

property-dispute-twist-bigg-boss-ranjiths-sister-rashmi-claims-his-wife-has-a-13-year-old-daughter

ಇನ್ನು ನನ್ನ ತಂದೆ ಅಲ್ಲಿದ್ದಾರೆ, ತಾಯಿ ತೀರಿಕೊಂಡ ಜಾಗ ಅದು ಅಂತ ಅವರು ಅಲ್ಲಿಯೇ ಇರುತ್ತಾರೆ ಎಂದು ಹೇಳಿರುವ ರಶ್ಮಿ ಒಂದೂವರೆ ತಿಂಗಳಾಯ್ತು ಅಪ್ಪನಿಗೆ ಊಟ ತಿಂಡಿ ಏನೂ ನೀಡಿಲ್ಲ. ಅಪ್ಪ ನಮ್ಮ ಮನೆಯಲ್ಲಿ ಊಟ ಮಾಡುತ್ತಾರೆ, ಕೆಳಗೆ ಫ್ಲಾಟ್‌ಗೆ ಹೋಗುತ್ತಾರೆ. ಮೊನ್ನೆ ಅಪ್ಪ ಅವನ ಮನೆಗೆ ಹೋದಾಗ, ಬಾಗಿಲು ತೆಗೆಯದೇ ಅಪ್ಪ ಬೇಸ್‌ಮೆಂಟ್‌ನಲ್ಲಿ ಮಲಗಿದ್ದರು. 75 ವರ್ಷದ ಅಪ್ಪನಿಗೆ ಬಾಗಿಲು ತೆಗೆಯದೇ ಹೊರಗೆ ಹಾಕಿದಾಗ, ಮಗಳಾದವಳಿಗೆ ಹೊಟ್ಟೆ ಉರಿಯಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಪೊಲೀಸರು ಮನೆಗೆ ಬಂದರೂ ಕೂಡ ಬಾಗಿಲು ತೆಗೆಯಲಿಲ್ಲ ಎಂದು ಕಿಡಿ ಕಾರಿದ್ದಾರೆ.

ಮುಂದುವರೆದು ಮದುವೆ ನಂತರ ನನಗೆ 3 ಬಿಎಚ್‌ಕೆ ಬಿಟ್ಟುಕೊಡು, ನನ್ನ ಹೆಂಡತಿಯ ವಸ್ತುಗಳು ತುಂಬಾ ಇವೆ ಎಂದು ಹೇಳಿದ ಅದಲ್ಲದೇ ಅವಳಿಗೊಂದು ಮಗಳಿದ್ದಾಳೆ, ಮಗಳಿಗೊಂದು ರೂಮ್‌ ಬೇಕು. ನಮಗೊಂದು ರೂಮ್‌ ಬೇಕು, ಅಪ್ಪ ಒಂದು ರೂಮ್‌ನಲ್ಲಿರುತ್ತಾರೆ ಎಂದು ಹೇಳಿದ ಎಂದಿರುವ ರಶ್ಮಿ ಅವನ ಹೆಂಡತಿಗೆ 13 ವರ್ಷದ ಮಗಳಿದ್ದಾಳೆ. ಮಾನವೀಯತೆ ದೃಷ್ಟಿಯಿಂದ ನಾನು ಅವಳಿಗೆ ರೂಮ್‌ ಬಿಟ್ಟುಕೊಟ್ಟಿದ್ದೇನೆ ಎಂದು ಹೇಳಿದ್ದಾರೆ. ಮಗು ಇರುವುದು ಅದಲ್ಲವೂ ಅವರ ವ್ಯೆಯಕ್ತಿಕ ವಿಷಯ ಅದು ನನಗೆ ಬೇಕಿಲ್ಲ ಬಾಡಿಗೆ ಕೊಡುತ್ತೇನೆ ಎಂದು ಅವನು ಹೇಳಿದ್ದಕ್ಕೆ ನಾನು ಮನೆ ಬಿಟ್ಟು ಕೊಟ್ಟೆ ಎಂದು ಹೇಳಿದ್ದಾರೆ.

More from Filmibeat

English summary
A property dispute between Bigg Boss's Ranjith and his sister Rashmi goes public. Rashmi makes a shocking claim, alleging that Ranjith's wife has a 13-year-old daughter. Get the full story on the family feud.
Read more about: bigg boss money filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X