For Quick Alerts
ALLOW NOTIFICATIONS  
For Daily Alerts

ಅಮೇರಿಕಾ ವೇಶ್ಯಾವಾಟಿಕೆಯಲ್ಲಿ ಸಿಕ್ಕಿಬಿದ್ದ ಭಾರತೀಯ ನಟಿಯರು.!

By Bharath Kumar
|

ಸಿನಿಲೋಕದಲ್ಲಿ ಸದ್ಯ ಕಾಸ್ಟಿಂಗ್ ಕೌಚ್ ಸಮಸ್ಯೆಯೇ ದೊಡ್ಡ ಚರ್ಚೆಯಾಗುತ್ತಿದೆ. ನಟಿಯರನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಹಲವು ಕಲಾವಿದೆಯರು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಮಧ್ಯೆ ಮತ್ತೊಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ.

ಅಮೇರಿಕಾದಲ್ಲಿ ಭಾರತೀಯ ನಟಿಯರನ್ನ ಬಳಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಆರೋಪದಲ್ಲಿ ದಂಪತಿಯನ್ನ ಬಂಧಿಸಲಾಗಿದೆಯಂತೆ. ಈ ಪ್ರಕರಣವನ್ನ ತನಿಖೆ ನಡೆಸಿದಾಗ ಭಯಾನಕ ಸಂಗತಿಗಳು ಹೊರಬಿದ್ದಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ತೆಲುಗು ಚಿತ್ರರಂಗದಲ್ಲಿ ಸಹನಿರ್ಮಾಪಕನಾಗಿ ಕೆಲಸ ಮಾಡಿದ್ದ ವ್ಯಕ್ತಿ ಮತ್ತು ಆತನ ಪತ್ನಿ ಇಲ್ಲಿಯ ಕೆಲವು ನಟಿಯರನ್ನ ಕರೆಸಿಕೊಂಡು ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ. ಹಾಗಿದ್ರೆ, ಆ ದಂಪತಿ ಯಾರು.? ಆ ಜಾಲದಲ್ಲಿ ಭಾಗಿಯಾಗಿದ್ದ ನಟಿಯರು ಯಾರು.? ಎಂಬುದನ್ನ ತಿಳಿಯಲು ಮುಂದೆ ಓದಿ.....

ತೆಲುಗು ನಿರ್ಮಾಪಕನಿಂದ ದಂಧೆ.!

ತೆಲುಗು ನಿರ್ಮಾಪಕನಿಂದ ದಂಧೆ.!

ಸುಮಾರು ವರ್ಷಗಳ ಹಿಂದೆ ತೆಲುಗು ಚಿತ್ರರಂಗದಲ್ಲಿ ಕೆಲವು ಸಿನಿಮಾಗಳಿಗೆ ಸಹ ನಿರ್ಮಾಪಕನಾಗಿದ್ದ ಕೃಷ್ಣ ಮುಡುಗುಮುಡಿ ಎಂಬುವವರು ಆತನ ಪತ್ನಿ ಜೊತೆ ಸೇರಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎನ್ನಲಾಗಿದೆ. ಆತನ ಜೊತೆ ಪರಿಚಯ ಹೊಂದಿರುವ ಕೆಲವು ನಟಿಯರನ್ನ ಯುಎಸ್ ಗೆ ಕರೆಸಿ ಈ ದಂಧೆಯಲ್ಲಿ ಭಾಗಿಯಾಗಿಸುತ್ತಿದ್ದರಂತೆ.

ದೊಡ್ಡ ಸಮಾರಂಭಗಳೇ ಇವರ ಟಾರ್ಗೆಟ್

ದೊಡ್ಡ ಸಮಾರಂಭಗಳೇ ಇವರ ಟಾರ್ಗೆಟ್

ಅಮೇರಿಕಾದಲ್ಲಿ ನಡೆಯುವ ದೊಡ್ಡ ದೊಡ್ಡ ಸಮಾರಂಭಗಳನ್ನ ಟಾರ್ಗೆಟ್ ಮಾಡುವ ಇವರು, ತಾತ್ಕಾಲಿಕ ವೀಸಾ ಪಡೆದು ಅಮೇರಿಕಾಗೆ ಬರುತ್ತಿದ್ದರಂತೆ. ನಂತರ ಇಲ್ಲಿನ ಅಪಾರ್ಟ್ ಮೆಂಟ್ ಗಳಲ್ಲಿ ನೆಲಸಿ, ವ್ಯವಾಹಾರ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ದಂಧೆಯಲ್ಲಿ ಭಾಗಿಯಾಗುವ ನಟಿಯರಿಗೆ ಸುಮಾರು 3000 ಡಾಲರ್ ಹಣ ಸಿಗುತ್ತೆ ಎಂಬ ಮಾಹಿತಿ ಬಹಿರಂಗವಾಗಿದ್ದು, ಇದರಲ್ಲಿ ಕೃಷ್ಣ ದಂಪತಿಗೂ ಪಾಲು ಇದೆಯಂತೆ.

ನಟಿಯೊಬ್ಬಳ ಮೇಲೆ ಅನುಮಾನ

ನಟಿಯೊಬ್ಬಳ ಮೇಲೆ ಅನುಮಾನ

ಕಾರ್ಯಕ್ರಮವೊಂದರಲ್ಲಿ ತಾತ್ಕಾಲಿಕ ವೀಸಾ ಹೊಂದಿದ್ದ ನಟಿಯೊಬ್ಬಳು ಮತ್ತು ಆ ನಟಿಯ ಜೊತೆಯಲ್ಲಿ ಒಬ್ಬ ವ್ಯಕ್ತಿ ಕೂಡ ಇದ್ದಿದ್ದನ್ನ ಫೆಡರಲ್ ಅಧಿಕಾರಿಯೊಬ್ಬರು ಗಮನಿಸಿದ್ದರು. ವಿಚಾರಿಸಿದಾಗ, ಅವರು ನನ್ನ ಮ್ಯಾನೇಜರ್ ಎಂದು ಹೇಳಿದ್ದರಂತೆ. ಆದ್ರೆ, ಅವರ ಮೇಲಿನ ಅನುಮಾನದಿಂದ ಅವರನ್ನ ಬೆನ್ನಟ್ಟಿ ಬಂಧಿಸಿದ್ದಾರೆ ಎನ್ನಲಾಗಿದೆ.

ಕಾರ್ಯಕ್ರಮದಲ್ಲಿ ಅವರು ಮಾಡುತ್ತಿದ್ದೇನು.?

ಕಾರ್ಯಕ್ರಮದಲ್ಲಿ ಅವರು ಮಾಡುತ್ತಿದ್ದೇನು.?

ಆ ನಟಿಯ ಜೊತೆಯಲ್ಲಿದ್ದಿದ್ದು ಗ್ರಾಹಕರನ್ನ ಸಂಪರ್ಕಿಸುವ ಮಧ್ಯವರ್ತಿಯೆಂದು ವಿಚಾರಣೆ ವೇಳೆ ಬಹಿರಂಗವಾಗಿದೆ. ಇವರನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿದ ನಂತರ ''ಹುಡುಗಿಯರ ಮೇಲೆ ದೌರ್ಜನ್ಯ ಮಾಡಿ ಈ ದಂಧೆ ನಡೆಸುತ್ತಿದ್ದಾರೆಂದು ಆ ನಟಿ ಹೇಳಿದ್ದಾರೆ'' ಎಂದು ಮಾಧ್ಯಮಗಳು ವರದಿ ಮಾಡಿವೆ.

ಅಪ್ರಾಪ್ತೆಯರಿದ್ದರಂತೆ.!

ಅಪ್ರಾಪ್ತೆಯರಿದ್ದರಂತೆ.!

ಈ ವೇಶ್ಯಾವಾಟಿಕೆ ಜಾಲದಲ್ಲಿ ಭಾಗಿಯಾಗಿದ್ದ ಇಬ್ಬರು ಅಪ್ರಾಪ್ತೆ ಹುಡುಗಿಯರು ಕೂಡ ಸಿಕ್ಕಿಬಿದ್ದಿದ್ದಾರೆ. ನಂತರ ಅವರನ್ನ ಶಿಶು ಸಂರಕ್ಷಣ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ ಎಂದು ಅಮೇರಿಕಾ ಮಾಧ್ಯಮಗಳು ಪ್ರಕಟ ಮಾಡಿವೆ.

English summary
Chicago-based couple of Indian descent have been accused of running a high-end racket that was luring female actors from Tollywood.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more