»   » ಚೆನ್ನೈನಲ್ಲಿ 'ಕನ್ನಡಿಗ' ರಜನಿಕಾಂತ್ ವಿರುದ್ಧ ರೊಚ್ಚಿಗೆದ್ದ ತಮಿಳರು.!

ಚೆನ್ನೈನಲ್ಲಿ 'ಕನ್ನಡಿಗ' ರಜನಿಕಾಂತ್ ವಿರುದ್ಧ ರೊಚ್ಚಿಗೆದ್ದ ತಮಿಳರು.!

Posted By:
Subscribe to Filmibeat Kannada

'ನಾನು ಅಪ್ಪಟ ತಮಿಳಿಗ' ಎಂದು ಸೂಪರ್ ಸ್ಟಾರ್ ರಜನಿಕಾಂತ್ ಎಷ್ಟೇ ಕೂಗಿ ಹೇಳಿದರೂ, ಅದನ್ನ ತಮಿಳರು ಮನಸಾರೆ ಒಪ್ಪಿಕೊಳ್ಳುವ ಹಾಗೆ ಕಾಣುತ್ತಿಲ್ಲ.!

ರಾಜಕೀಯಕ್ಕೆ ನಟ ರಜನಿಕಾಂತ್ ಎಂಟ್ರಿಕೊಡುತ್ತಾರೆ ಎಂಬ ಸುದ್ದಿ ದಟ್ಟವಾಗಿರುವ ಬೆನ್ನಲ್ಲೇ ತಮಿಳು ಪರ ಹೋರಾಟಗಾರರು ರೊಚ್ಚಿಗೆದ್ದಿದ್ದಾರೆ.

'ಕನ್ನಡಿಗ' ರಜನಿಕಾಂತ್ ತಮಿಳುನಾಡು ರಾಜಕೀಯಕ್ಕೆ ಬರಬಾರದು ಎಂದು ವಿವಿಧ ತಮಿಳು ಸಂಘಟನೆಗಳು, ತಮಿಳು ಪರ ಹೋರಾಟಗಾರರು ಇಂದು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಹೋರಾಟಗಾರರ ಕೋಪಕ್ಕೆ ರಜನಿಕಾಂತ್ ಪ್ರತಿಕೃತಿ ದಹನವಾಗಿದೆ. ಮುಂದೆ ಓದಿರಿ....

ರಜನಿಕಾಂತ್ ಮನೆ ಮುಂದೆ ಉದ್ರಿಕ್ತ ವಾತಾವರಣ

'ತಮಿಳುನಾಡು ರಾಜಕೀಯಕ್ಕೆ ರಜನಿಕಾಂತ್ ಎಂಟ್ರಿ' ವಿರೋಧಿಸಿ ವಿವಿಧ ತಮಿಳು ಸಂಘಟನೆಗಳು ಇಂದು ಚೆನ್ನೈನಲ್ಲಿ ಇರುವ ರಜನಿಕಾಂತ್ ನಿವಾಸದ ಎದುರು ಬೃಹತ್ ಪ್ರತಿಭಟನೆ ನಡೆಸಿದರು. ಜೊತೆಗೆ ರಜನಿ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು. (ಫೋಟೋ ಕೃಪೆ - ANI)

ರಜನಿಕಾಂತ್ ಪ್ರತಿಕೃತಿ ದಹನ

'ಕನ್ನಡಿಗ' ರಜನಿಕಾಂತ್ 'ತಮಿಳುನಾಡು' ರಾಜಕೀಯ ಪ್ರವೇಶ ಮಾಡುತ್ತಿರುವುದನ್ನು ಖಂಡಿಸಿ, ರಜನಿಕಾಂತ್ ರವರ ಪ್ರತಿಕೃತಿಯನ್ನ ಪ್ರತಿಭಟನಾಕಾರರು ದಹನ ಮಾಡಿದರು. (ಫೋಟೋ ಕೃಪೆ - ANI)

ರಜನಿಕಾಂತ್ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ

ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ, ರಜನಿಕಾಂತ್ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಯ್ತು. (ಫೋಟೋ ಕೃಪೆ - ANI)

ವಿರೋಧ ಯಾಕೆ.?

''ರಜನಿಕಾಂತ್ ತಮಿಳಿಗ ಅಲ್ಲ. ಕರ್ನಾಟಕದಲ್ಲಿ ಹುಟ್ಟಿ ಬೆಳೆದವರು. ಕನ್ನಡಿಗರು ತಮಿಳುನಾಡನ್ನ ಆಳ್ವಿಕೆ ಮಾಡಬಾರದು'' ಎಂಬುದು ತಮಿಳು ಪರ ಹೋರಾಟಗಾರರ ಆಗ್ರಹ.

'ನಾನು ಅಪ್ಪಟ ತಮಿಳಿಗ' ಎಂದಿದ್ದ ರಜನಿ

ಬರೋಬ್ಬರಿ 8 ವರ್ಷಗಳ ನಂತರ ಅಭಿಮಾನಿಗಳನ್ನ ಭೇಟಿ ಮಾಡಿದ ರಜನಿ, ಅಲ್ಲೇ...''ನಾನು ಅಪ್ಪಟ ತಮಿಳಿಗ' ಎಂದು ಎದೆ ತಟ್ಟಿಕೊಂಡು ಹೆಮ್ಮೆಯಿಂದ ಹೇಳಿದ್ದರು.

ಕನ್ನಡಿಗನೋ.. ತಮಿಳಿಗನೋ..?

''ನಾನು ನಿಮಗೊಂದು ವಿಷಯವನ್ನ ಕ್ಲಿಯರ್ ಮಾಡಬೇಕು. ನಾನು ತಮಿಳಿಗನಾ ಇಲ್ಲ ಕನ್ನಡಿಗನಾ ಅನ್ನೋದನ್ನ ಇವತ್ತು ಹೇಳ್ತೀನಿ. ನನಗೀಗ 67 ವರ್ಷ ವಯಸ್ಸು. 23 ವರ್ಷ ಕರ್ನಾಟಕದಲ್ಲಿದ್ದೆ. 44 ವರ್ಷದಿಂದ ತಮಿಳುನಾಡಿನಲ್ಲಿದ್ದೇನೆ. ನಿಮ್ಮ ಜೊತೆಯೇ ಬೆಳೆದಿದ್ದೇನೆ. ಕರ್ನಾಟಕದಲ್ಲಿ ಮರಾಠಿಗನಾಗಿಯೋ ಕನ್ನಡಿಗನಾಗಿಯೋ ನಾನು ಇಲ್ಲಿಗೆ ಬಂದಿದ್ರೂ ಸಹ ನೀವು ನನ್ನನ್ನ ಬೆಂಬಲಿಸಿದ್ರಿ. ನನ್ನನ್ನ ನೀವೇ ತಮಿಳಿಗನನ್ನಾಗಿಸಿದ್ದು'' ಎಂದು ಒತ್ತಿ ಒತ್ತಿ ರಜನಿ ಹೇಳಿದ್ದರು.

ರಜನಿ ಪೂರ್ವಿಕರು ಎಲ್ಲಯವರು.?

ಸ್ವತಃ ರಜನಿ ಹೇಳಿಕೊಂಡಿರುವಂತೆ, ಅವರ ಪೂರ್ವಿಕರೆಲ್ಲ ಹುಟ್ಟಿದ್ದು ಕೃಷ್ಣಗಿರಿಯಲ್ಲಿ.

ತಮಿಳರು ಒಪ್ಪಲು ರೆಡಿಯಿಲ್ಲ

'ತಮಿಳಿನ' ಬಗ್ಗೆ ರಜನಿಕಾಂತ್ ಎಷ್ಟೇ ಭಾಷಾಭಿಮಾನ ಮೆರೆದರೂ, ಅದನ್ನ ಒಪ್ಪಿಕೊಳ್ಳಲು ತಮಿಳರು ರೆಡಿಯಿದ್ದ ಹಾಗೆ ಕಾಣುತ್ತಿಲ್ಲ. ಈ ವಿವಾದ ಎಲ್ಲಿಗೆ ಹೋಗಿ ತಲುಪುತ್ತೋ... ದೇವರೇ ಬಲ್ಲ.!

English summary
Protest against 'Kannadiga' Rajinikanth in Chennai

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada