ಕನ್ನಡಿಗರ ಮೇಲೆ ಹಲ್ಲೆ: 'ಮೆರ್ಸಲ್' ಚಿತ್ರಕ್ಕೆ ಬಿಸಿ ಮುಟ್ಟಿಸಿದ ಹೋರಾಟಗಾರರು.!

By Bharath Kumar

ಬೆಂಗಳೂರಿನ ಸಂಪಿಗೆ ಚಿತ್ರಮಂದಿರದ ಬಳಿ ಕನ್ನಡಿಗರ ಮೇಲೆ ತಮಿಳು ಅಭಿಮಾನಿಗಳು ಹಲ್ಲೆ ಮಾಡಿರುವ ಘಟನೆ ಈಗ ಹೋರಾಟದ ರೂಪ ಪಡೆದುಕೊಂಡಿದೆ.

ಘಟನೆ ನಡೆದ ಸ್ಥಳದಲ್ಲಿ ಕನ್ನಡ ಪರ ಹೋರಾಟಗಾರಾದ ಶಿವರಾಮೆಗೌಡ, ಸಾರಾ ಗೋವಿಂದು, ಪ್ರವೀಣ್ ಶೆಟ್ಟಿ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಚಿತ್ರಮಂದಿರದ ಎದುರು ಹಾಕಲಾಗಿದ್ದ ಕಟೌಟ್ ಗಳನ್ನ ತೆರೆವುಗೊಳಿಸಿದರು. ಹಲ್ಲೆಯ ಬಳಿಕ ನಡೆದ ಬೆಳವಣಿಗೆಗಳ ಬಗ್ಗೆ ಸಂಪೂರ್ಣ ಮಾಹಿತಿ ಮುಂದೆ ನೀಡಲಾಗಿದೆ.

ಚಿತ್ರಮಂದಿರಕ್ಕೆ ಪೊಲೀಸ್ ಬಂದೋಬಸ್ತ್

ಚಿತ್ರಮಂದಿರಕ್ಕೆ ಪೊಲೀಸ್ ಬಂದೋಬಸ್ತ್

ಸಂಪಿಗೆ ಚಿತ್ರಮಂದಿರದ ಎದುರು ಕನ್ನಡ ಪರ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ಹಿನ್ನೆಲೆ ಥಿಯೇಟರ್ ಗೆ ಪೊಲೀಸ್ ಬಿಗಿ ಬಂದೋಬಸ್ತ್ ನೀಡಲಾಗಿದೆ.

ಕಟೌಟ್ ಗಳು ತೆರವು

ಕಟೌಟ್ ಗಳು ತೆರವು

ತಮಿಳು ನಟ ವಿಜಯ್ ಅಭಿನಯದ 'ಮೆರ್ಸಲ್' ಸಿನಿಮಾ ಸಂಪಿಗೆ ಚಿತ್ರಮಂದಿರದಲ್ಲಿ ರಿಲೀಸ್ ಆಗಿತ್ತು. ಆದ್ರೆ, ಕನ್ನಡಿಗರ ಮೇಲೆ ಹಲ್ಲೆ ಖಂಡಿಸಿ, ಚಿತ್ರಮಂದಿರದ ಎದುರು ಹಾಕಲಾಗಿದ್ದ ದೊಡ್ಡ ದೊಡ್ಡ ಹೂವಿನ ಹಾರ ಹಾಗೂ ಕಟೌಟ್ ಗಳನ್ನ ಕಿತ್ತಾಕಲಾಗಿದೆ.

ಘಟನೆ ಬಗ್ಗೆ ಚಿತ್ರಮಂದಿರ ಮಾಲೀಕರು ಹೇಳಿದ್ದೇನು?

ಘಟನೆ ಬಗ್ಗೆ ಚಿತ್ರಮಂದಿರ ಮಾಲೀಕರು ಹೇಳಿದ್ದೇನು?

ಸಂಪಿಗೆ ಚಿತ್ರಮಂದಿರದ ಮಾಲೀಕರು ಹೇಳುವ ಪ್ರಕಾರ, ''ಅವರು ಯಾರು ಎಂದು ಗೊತ್ತಿಲ್ಲ. ಕಟೌಟ್ ಹಾಕುತ್ತಿದ್ದವರು ಬೇರೆ. ಅವರು ಯಾರು ಈ ಗಲಾಟೆಯಲ್ಲಿ ಭಾಗವಹಿಸಿಲ್ಲ. ಅವರು ಇಲ್ಲೇ ಇದ್ದಾರೆ. ರಸ್ತೆಯಲ್ಲಿ ಜಗಳವಾಡಿದರು. ಬಿಡಿಸಲು ಇಲ್ಲಿಯವರು ಹೋದರು ಅಷ್ಟೇ. ಇದಕ್ಕು ನಮಗೂ ಯಾವುದೇ ಸಂಬಂಧವಿಲ್ಲ''

ಸಾರಾ ಗೋವಿಂದು ಏನಂದ್ರು?

ಸಾರಾ ಗೋವಿಂದು ಏನಂದ್ರು?

ಇನ್ನು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು '' ಇದು ನಮ್ಮ ರ್ದೌಭಾಗ್ಯ. ಕನ್ನಡ ಸಿನಿಮಾಗಳಿಗೆ ಆಧ್ಯತೆ ಕೊಡ್ಬೇಕು. ಕನ್ನಡಿಗರ ಮೇಲೆ ಆದ ಹಲ್ಲೆಯನ್ನ ಖಂಡಿಸುತ್ತೇವೆ'' ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಚಿತ್ರಮಂದಿರದಲ್ಲಿ ಮಾತ್ರ ಹೌಸ್ ಪುಲ್

ಚಿತ್ರಮಂದಿರದಲ್ಲಿ ಮಾತ್ರ ಹೌಸ್ ಪುಲ್

ಇಷ್ಟೆಲ್ಲಾ ಪ್ರತಿಭಟನೆ, ಹೋರಾಟ ಚಿತ್ರಮಂದಿರದ ಎದುರು ನಡೆಯುತ್ತಿದ್ದರೂ, ಸಿನಿಮಾ ಶೋ ಮಾತ್ರ ಹೌಸ್ ಫುಲ್ ಆಗಿ ಪ್ರದರ್ಶನವಾಗುತ್ತಿತ್ತು. ಪ್ರದರ್ಶನಕ್ಕೆ ಯಾವುದೇ ಅಡ್ಡಿಯಾಗಿಲ್ಲ.

More from Filmibeat

English summary
Protest against Tamil Movie Mersal at Sampige Theater in Banglore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X