twitter
    For Quick Alerts
    ALLOW NOTIFICATIONS  
    For Daily Alerts

    ಹಂಸಲೇಖ ಅವರ ಪರವಾಗಿ ಮುಂದುವರೆದ ಪ್ರತಿಭಟನೆ!

    |

    ನಾದ ಬ್ರಹ್ಮ ಸಂಗೀತ ನಿರ್ದೇಶಕ ಹಂಸಲೇಖ ಇತ್ತೀಚೆಗೆ ಮೈಸೂರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಸಮಾನತೆ ಹಾಗೂ ಅಸ್ಪ್ರಶ್ಯತೆ ಬಗ್ಗೆ ಸಂದೇಶ ಸಾರುವ ವೇಳೆ ಪೇಜಾವರ ಶ್ರೀಗಳ ವಿಷಯವನ್ನು ಪ್ರಸ್ತಾಪಿಸಿದ್ದರು.

    ಹಂಸಲೇಖ ಅವರು ಪೇಜಾವರ ಶ್ರೀಗಳ ಬಗ್ಗೆ ನೀಡಿದ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಪರ ಹಾಗೂ ವಿರೋಧ ಚರ್ಚೆಗಳು ಕೂಡ ಹುಟ್ಟಿವು. ಹಾಗಾಗಿ ಈ ವಿಚಾರವಾಗಿ ನಾದಬ್ರಹ್ಮ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

    ಸದ್ಯ ನಾದಬ್ರಹ್ಮ ಹಂಸಲೇಖ ಬೆಂಬಲಿಸಿ ಪ್ರತಿಭಟನೆಯನ್ನು ಮಾಡಲಾಗುತ್ತಿದೆ.

    ರಾಮನಗರದ ಬಿಡದಿ ಬಳಿ ಪ್ರತಿಭಟನೆ!

    ರಾಮನಗರದ ಬಿಡದಿ ಬಳಿ ಪ್ರತಿಭಟನೆ!

    ನಾದಬ್ರಹ್ಮ ಹಂಸಲೇಖ ಬೆಂಬಲಿಸಿ ರಾಮನಗರದ ಬಿಡದಿ ಬಳಿಯ ಬೈರಮಂಗಲ ಕ್ರಾಸ್ ಬಳಿ ಪ್ರತಿಭಟನೆ ಮಾಡಲಾಗಿದೆ. ದಲಿತಪರ-ಪ್ರಗತಿಪರ ಚಿಂತಕರ ಒಕ್ಕೂಟದಿಂದ ಈ ಪ್ರತಿಭಟನೆ ಮಾಡಲಾಗಿದೆ. ಬೈಕ್ ರ್ಯಾಲಿ ನಡೆಸಿದ ಸಂಘಟನಕಾರರು ಪ್ರತಿಭಟನೆ ನಡೆಸಿದ್ದಾರೆ. ಮನುವಾದಿಗಳಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದ್ದಾರೆ.

    ಹೆದರಬೇಡಿ ಹಂಸಲೇಖ: ಸಂಘಟನಾಕಾರರ ಬೆಂಬಲ!

    ಹೆದರಬೇಡಿ ಹಂಸಲೇಖ: ಸಂಘಟನಾಕಾರರ ಬೆಂಬಲ!

    ಪ್ರತಿಭಟನೆಯ ವೇಳೆ ಹಂಸಲೇಖ ಅವರ ಪರವಾಗಿ ಘೋಷಣೆಗಳನ್ನು ಕೂಗಲಾಗಿದೆ. 'ಹೆದರಬೇಡಿ ಹಂಸಲೇಖ, ನಿಮ್ಮ ಪರ ನಾವಿದ್ದೇವೆಂದು' ಎನ್ನುವ ಘೋಷಣೆಗಳನ್ನು ಕೂಗಲಾಗಿದೆ. ಜಿಲ್ಲೆಯ ವಿವಿಧ ದಲಿತ ಹಾಗೂ ಇತರೆ ಸಂಘಟನೆಯ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಭಾಗಿ ಆಗದ್ದರು. ನಂತರ ಬಿಡದಿ ಪೊಲೀಸ್ ಠಾಣಾಧಿಕಾರಿಗೆ ಕಾರ್ಯಕರ್ತರು ಮನವಿ ಸಲ್ಲಿಸಿದ.

    ಬಸವನಗುಡಿ ಪೊಲೀಸ್‌ ಠಾಣೆಗೆ ಹಾಜರಾಗಿದ್ದ ಹಂಸಲೇಖ!

    ಬಸವನಗುಡಿ ಪೊಲೀಸ್‌ ಠಾಣೆಗೆ ಹಾಜರಾಗಿದ್ದ ಹಂಸಲೇಖ!

    ಪೇಜಾವರ ಶ್ರೀಗಳ ವಿರುದ್ಧ ಹೇಳಿಕೆ ನೀಡಿದ್ದರಿಂದ ಪೇಜಾವರ ಶ್ರೀಗಳ ಭಕ್ತಗಳ ಹಂಸಲೇಖ ಹೇಳಿಕೆಯನ್ನು ಖಂಡಿಸಿ, ಬಸವನಗುಡಿ ಪೊಲೀಸ್ ಠಾಣೆಗೆ ದೂರನ್ನೂ ಸಲ್ಲಿಸಿತ್ತು. ಈ ಸಂಬಂಧ ನವೆಂಬರ್ 25 ಬಸವನಗುಡಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಯನ್ನು ಎದುರಿಸಿದ್ದರು ಹಂಸಲೇಖ. ಈ ವೇಳೆ ಪೊಲೀಸ್ ಠಾಣೆಯ ಮುಂದೆಯೇ ಹಂಸಲೇಖ ಪರ ಹಾಗೂ ವಿರುದ್ಧ ಪ್ರತಿಭಟನೆ ಕೂಡ ನಡೆದಿತ್ತು.

    ಹಂಸಲೇಖ ಅವರ ಪರ ಧ್ವನಿ ಎತ್ತಿವೆ ಸಾಕಷ್ಟು ಸಂಘನೆಗಳು!

    ಹಂಸಲೇಖ ಅವರ ಪರ ಧ್ವನಿ ಎತ್ತಿವೆ ಸಾಕಷ್ಟು ಸಂಘನೆಗಳು!

    ನವೆಂಬರ್ 25 ಸಂಗೀತ ನಿರ್ದೇಶಕ, ನಾದ ಬ್ರಹ್ಮ ಹಂಸಲೇಖ ಅವರನ್ನು ಬೆಂಬಲಿಸಿ, ಅವರ ಮೇಲಾಗುತ್ತಿರುವ ವಾಗ್ದಾಳಿಯನ್ನು ಖಂಡಿಸಿ ಬೆಂಗಳೂರಿನಲ್ಲಿ ಬೃಹತ್ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಈ ಮೂಲಕ ಹಂಸಲೇಖ ಬೆಂಬಲಕ್ಕೆ ಸಂಘಟನೆಗಳು ಬೆಂಬಲ ಸೂಚಿಸಿದ್ದವು. ಅಭಿವ್ಯಕ್ತಿ ಸ್ವಾತಂತ್ರ್ಯ ಉಳಿವಿನ ಕರೆ ಕೂಡನೀಡಲಾಗಿತ್ತು. ಬೃಹತ್ ಜಾಥಾಕ್ಕೆ ಕರೆ ಕೊಡಲಾಗಿತ್ತು.

    ಹೀಗೆ ಸಾಲು ಸಾಲು ಪ್ರತಿ ಭಟನೆಗಳು ಹಂಸಲೇಖ ಅವರ ಪರ ನಡೆಯುತ್ತಿವೆ. ಎಲ್ಲರಿಗೂ ಅಭಿವ್ಯಕ್ತಿ ಸ್ವತಂತ್ಯ ಇರುತ್ತದೆ. ಅದನ್ನು ಕಿತ್ತು ಕೊಳ್ಳಬಾರದು ಎನ್ನುವ ನಿಟ್ಟಿನಲ್ಲಿ ಹಲವು ಸಂಘಟನೆಗಳು ಹಂಸಲೇಖ ಅವರ ಪರನಿಂತಿದೆ.

    English summary
    Protests In Ramanagara To support Hamsalekha know more,
    Sunday, November 28, 2021, 19:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X