ಹಳೆ‌ ಗರ್ಲ್ ಫ್ರೆಂಡ್‌ಗೆ ಪೃಥ್ವಿ ಅಂಬರ್ 'ಶುಭಾಶಯ'; ಆಲ್ಬಮ್ ಸಾಂಗ್ ವೈರಲ್

ಕನ್ನಡದಲ್ಲಿ ಆಲ್ಬಮ್ ಸಾಂಗ್‌ಗಳ ಸಂಖ್ಯೆ ಕಮ್ಮಿ. ಆಗೊಮ್ಮೆ ಈಗೊಮ್ಮೆ ಇಂತಹ ಪ್ರಯತ್ನಗಳು ನಡೆಯುತ್ತದೆ. ಸದ್ಯ ಗೀತ ಸಾಹಿತಿ‌ ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳಿರುವ ಹೊಸ ಆಲ್ಬಮ್ ಸಾಂಗ್ ಹೊರ ಬಂದಿದೆ. ಇತ್ತೀಚೆಗೆ ನಿರ್ದೇಶಕ ತರುಣ್ ಸುಧೀರ್ ಹಾಗೂ ಪತ್ನಿ ಸೋನಲ್ 'ಶುಭಾಶಯ' ಎಂಬ ಆಲ್ಬಮ್ ಸಾಂಗ್ ರಿಲೀಸ್ ಮಾಡಿ ತಂಡಕ್ಕೆ ಶುಭ ಕೋರಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್ 'ಶುಭಾಶಯ' ಆಲ್ಬಮ್ ಸಾಂಗ್ ರಿಲೀಸ್ ಕಾರ್ಯಕ್ರಮ ನೆರವೇರಿತು. ಈ ಆಲ್ಬಮ್ ಸಾಂಗ್‌ನಲ್ಲಿ ಪೇಂಟರ್ ಒಬ್ಬನ ಪ್ರೇಮ್‌ ಕಹಾನಿಯನ್ನು ನಾಗಾರ್ಜುನ್ ಶರ್ಮಾ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ನಟ ಪೃಥ್ವಿ ಅಂಬಾರ್ ಪೇಂಟರ್ ಆಗಿ ಹಾಗೂ ಆತನ ಪ್ರೇಯಸಿಯಾಗಿ ಅಂಜಲಿ ಅನೀಶ್ ಮಿಂಚಿದ್ದಾರೆ. ಇವರಿಬ್ಬರ ಕೆಮಿಸ್ಟ್ರಿ ಹಾಡಿನಲ್ಲಿ ಹೈಲೆಟ್ ಆಗಿದೆ. ಬಹಳ ಅದ್ಧೂರಿಯಾಗಿ ಸಾಂಗ್ ಸೆರೆ ಹಿಡಿಯಲಾಗಿದೆ.

Pruthvi Ambaar and Anjali Anish Shine in New Kannada Album Song Shubhashaya

'ಪ್ಯಾಥೋ' ಮೂಡ್‌ನಲ್ಲಿ ಶುರುವಾಗುವ ಹಾಡು ಫ್ಲ್ಯಾಶ್‌ಬ್ಯಾಕ್ ರೀತಿ ಜೋಡಿಯ ಪ್ರೇಮಕಥೆಯನ್ನು ಬಿಚ್ಚಿಡುತ್ತಾ ಹೋಗುತ್ತದೆ. ಕಲರ್‌ಫುಲ್ ಲೋಕೇಶನ್‌ಗಳಲ್ಲಿ ಸಾಂಗ್ ಚಿತ್ರಿಸಲಾಗಿದೆ. ಅವಳು ಹೋಗು ಅಂದಾಗಲೇ ಸತ್ತಿದ್ದೆ. ಈಗ ಪೂರ್ತಿ ಮಣ್ಣಾಗಿದ್ದೇನೆ. ಆದರೂ ಅವಳಿಗೆ ಕೋರಲು ಹೊರಟಿರುವೆ ಶುಭಾಶಯ‌ ಎಂದು ಶುರುವಾಗುವ ಹಾಡು ಇಷ್ಟವಾಗುತ್ತದೆ. ಜಸ್ಕರಣ್ ಸಿಂಗ್ ಶುಭಾಶಯ ಗೀತೆಗೆ ಧ್ವನಿಯಾಗಿದ್ದು, ಜೋ ಕೋಸ್ಟಾ ಸಂಗೀತ ಸೊಗಸಾಗಿದೆ.

ವೈಷ್ಣವಿ ಫಿಲ್ಮಂಸ್ ಬ್ಯಾನರ್ ಈ ಆಲ್ಬಮ್ ಸಾಂಗ್ ನಿರ್ಮಾಣ ಮಾಡಿದೆ. ಸುಪ್ರಿಯಾ ಬೋರೇಗೌಡ ಸಹ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ವೈಷ್ಣವಿ ಫಿಲ್ಮಂಸ್ ಯೂಟ್ಯೂಬ್‌ ಚಾನಲ್‌ನಲ್ಲಿ ಸಾಂಗ್ ವೀಕ್ಷಿಸಬಹುದು. ಸಾಂಗ್ ರಿಲೀಸ್ ಮಾಡಿದ ನಿರ್ದೇಶಕ "ತುಂಬಾ ಚೆನ್ನಾಗಿದೆ. ಸಿನಿಮಾ, ವೆಬ್ ಸಿರೀಸ್ ಹಾಗೂ ಆಲ್ಬಮ್ ಸಾಂಗ್ ಯಾವುದನ್ನು ಜನ ವಿಭಾಗ ಮಾಡಲ್ಲ ಎಲ್ಲವನ್ನೂ ಸ್ವೀಕರಿಸುತ್ತಾರೆ. ನಾರ್ತ್‌ನಲ್ಲಿ ಆಲ್ಬಮ್‌ ಸಾಂಗ್‌ನಲ್ಲಿ ಖ್ಯಾತ ಕಲಾವಿದರು ನಟಿಸುತ್ತಾರೆ. ಪೃಥ್ವಿ ಹಾಗೂ ಅಂಜಲಿ ಆ ಟ್ರೆಂಡ್ ಇಲ್ಲಿ ಶುರು ಮಾಡಿದ್ದಾರೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ" ಎಂದಿದ್ದಾರೆ.

Pruthvi Ambaar and Anjali Anish Shine in New Kannada Album Song Shubhashaya

ಸೋನಲ್ ಮಾತನಾಡಿ "ಪ್ರತಿ ಶಾರ್ಟ್ ಪೇಂಟಿಂಗ್ ರೀತಿ ಇದೆ. ಕ್ಯಾಮೆರಾ ವರ್ಕ್, ಮುರುಗ ಮಾಸ್ಟರ್ ವಂಡರ್‌ಫುಲ್ ಕೊರಿಯೋಗ್ರಫರ್. ಪೃಥ್ವಿ ಅಂಬರ್ ಮೊದಲ ಸಿನಿಮಾಗೆ ನಾನೇ ನಾಯಕಿ. ನಾವು ಒಳ್ಳೆ ಸ್ನೇಹಿತರು. ಒಟ್ಟಿಗೆ ಇಂಡಸ್ಟ್ರಿಯಲ್ಲಿ ಬೆಳೆದವು. ಅಂಜಲಿ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದಾರೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ" ಎಂದು ಶುಭ ಹಾರೈಸಿದ್ದಾರೆ.

More from Filmibeat

English summary
Director Tarun Sudhir and wife Sonal release the Kannada album song Shubhasaya, featuring Prithvi Ambar and Anjali Anish.
Read more about: tarun sudhir song
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X