For Quick Alerts
  ALLOW NOTIFICATIONS  
  For Daily Alerts

  'ದಿಯಾ' ಪೃಥ್ವಿ ಜೊತೆ ಮಿಲನಾ ನಾಗರಾಜ್ ರೊಮ್ಯಾಂಟಿಕ್ ಫೋಟೋಶೂಟ್

  By ಫಿಲ್ಮ್ ಡೆಸ್ಕ್
  |

  ನಟಿ ಮಿಲನಾ ನಾಗರಾಜ್ ಮದುವೆ ಬಳಿಕ ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಮಾಲ್ಡೀವ್ಸ್ ಹನಿಮೂನ್ ಪ್ರವಾಸದಿಂದ ವಾಪಸ್ ಆಗುತ್ತಿದ್ದಂತೆ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಸಿನಿಮಾ ಕೆಲಸಗಳಲ್ಲಿ ನಿರತರಾಗಿದ್ದಾರೆ. ಮಿಲನಾ ನಾಗರಾಜ್ ಸದ್ಯ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ನಾಯಕನಾಗಿ ನಟಿಸುತ್ತಿರುವ 'ಫಾರ್ Regn' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

  ಸದ್ಯ 'ಫಾರ್ Regn' ಚಿತ್ರೀಕರಣದ ಒಂದಿಷ್ಟು ಫೋಟೋಗಳು ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಡಲ ಕಿನಾರೆಯಲ್ಲಿ ಪೃಥ್ವಿ ಮತ್ತು ಮಿಲನಾ ಇಬ್ಬರು ಫೋಟೋಶೂಟ್ ಮಾಡುತ್ತಿರುವ ಫೋಟೋಗಳು ಎಲ್ಲರ ಗಮನ ಸೆಳೆಯುತ್ತಿವೆ.

  ಹನಿಮೂನ್ ಪ್ರವಾಸಕ್ಕೆ ತೆರಳಿದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ದಂಪತಿಹನಿಮೂನ್ ಪ್ರವಾಸಕ್ಕೆ ತೆರಳಿದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ದಂಪತಿ

  ಅಂದಹಾಗೆ ಇದು 'ಫಾರ್ Regn' ಸಿನಿಮಾದ ಹಾಡಿನ ಚಿತ್ರೀಕರಣದ ಫೋಟೋಗಳು. ರೊಮ್ಯಾಂಟಿಕ್ ಹಾಡು ಇದಾಗಿದ್ದು, ಮಿಲನಾ ಮತ್ತು ಪೃಥ್ವಿ ರೊಮ್ಯಾಂಟಿಕ್ ಮೂಡ್ ನಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಉಡುಪಿ, ಮಂಗಳೂರು ಮತ್ತು ಸಕಲೇಶಪುರದಲ್ಲಿ ಚಿತ್ರೀಕರಣ ನಡೆಯುತ್ತಿದೆ.

  'ಫಾರ್ Regn' ಚಿತ್ರಕ್ಕೆ ನವೀನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶ್ಯಾಡೋ, ಹರಿವಿನ ಹಾದಿ, ಎಲ್ಲೋ ಬೋರ್ಡ್ ಮುಂತಾದ ಕಿರುಚಿತ್ರಗಳನ್ನು ನಿರ್ದೇಶನ ಮಾಡಿರುವ ನವೀನ್ ಮೊದಲ ಬಾರಿಗೆ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದಾರೆ. ಚಿತ್ರಕ್ಕೆ ಹರಿಷ್ ಆರ್ ಸಂಗೀತ ನೀಡುತ್ತಿದ್ದಾರೆ.

  ದೇವರಾಣೆ ನಾನು ಇದನ್ನೆಲ್ಲ ಮಾಡಿಲ್ಲ ಎಂದ ವಿವಾದಿತ ನಿರ್ಮಾಪಕ | Filmibeat Kannada

  ದಿಯಾ ಸಿನಿಮಾ ಬಳಿಕ ನಟ ಪೃಥ್ವಿ ಅಂಬರ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಲೈಫ್ ಈಸ್ ಬ್ಯೂಟಿಫುಲ್, ಶುಗರ್ ಲೆಸ್, ಶಿವಪ್ಪ ಮತ್ತು ದಿಯಾ ಹಿಂದಿ ರಿಮೇಕ್ ನಲ್ಲೂ ನಟಿಸುತ್ತಿದ್ದಾರೆ. ಇನ್ನು ನಟಿ ಮಿಲನಾ ನಾಗರಾಜ್ ಲವ್ ಮಾಕ್ ಟೇಲ್-2 ಸಿನಿಮಾದಲ್ಲಿ ನಿರತರಾಗಿದ್ದಾರೆ.

  English summary
  Actor Pruthvi Ambaar and Milana Nagaraj starrer For Regn movie song shoot potos viral on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X