'ಮತ್ಸ್ಯಗಂಧ' ಟ್ರೇಲರ್ ಹೊರ ಬಂತು ; ಹೇಗಿದೆ 'ಕ್ಲಾಸ್' ನಾಯಕನ 'ಮಾಸ್' ಅವತಾರ..?

ಉತ್ತರ ಕನ್ನಡ, ಅಲ್ಲಿನ ಪರಿಸರ, ಸಂಸ್ಕ್ರತಿ ಹಾಗೂ ಬದುಕಿಗೆ ಕೈ ಗನ್ನಡಿ ಹಿಡಿಯುವ ಪ್ರಯತ್ನವೇ ಮತ್ಸ್ಯಗಂಧ. ಈಗಾಗಲೇ ಭಾಗಿರಥಿ, ಕುವಾ ಕುವಾ ಕುವಾಲೆ ಹಾಗೂ ಕಡಲ ಒಡಲ ಮೇಲೆ ಹಾಡುಗಳ ಮೂಲಕ ಭರವಸೆಯನ್ನ ಹುಟ್ಟು ಹಾಕಿರುವ ಈ ಚಿತ್ರದ ಟ್ರೇಲರ್ ಸದ್ಯಕ್ಕೆ ಬಿಡುಗಡೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಚಿತ್ತವನ್ನ ಕದಿಯುತ್ತಿದೆ. ಯುಟ್ಯೂಬ್ ಪ್ಲ್ಯಾಟ್ ಫಾರ್ಮ್ ನಲ್ಲಿ 16ನೇ ಸ್ಥಾನದಲ್ಲಿ ಟ್ರೆಂಡಿಂಗ್ ನಲ್ಲಿಯೂ ಇದೆ.

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಮೀನುಗಾರರ ಭಾಷೆ,ಬದುಕು, ಸಂಪ್ರದಾಯ ,ಹೋರಾಟ, ,ಮೀನುಗಾರರ ಸ್ವಾಭಿಮಾನ , ಬವಣೆಗಳನ್ನೊತ್ತು ಬರ್ತಿರುವ ಮತ್ಸ್ಯಗಂಧದಲ್ಲಿ ಸ್ಯಾಂಡಲ್ವುಡ್ ನ ಲವ್ಲೀ ಹುಡುಗ ಪೃಥ್ವಿ ಅಂಬಾರ್, ಖಾಕಿ ತೊಟ್ಟಿದ್ದಾರೆ. ಈ ಮೂಲಕ ಅಪರಾಧಿಗಳಿಗೆ ಹಡೆಮುರಿ ಕಟ್ಟಲು ಟೊಂಕ ಕಟ್ಟಿದ್ದಾರೆ.

Pruthvi Ambaars Matsyagandha Trailer Launched

ಇನ್ನೂ.. ಮತ್ಸ್ಯಗಂಧ ಚಿತ್ರದ ಟ್ರೇಲರ್ ನ ಮೀನುಗಾರಿಕೆ ಸಚಿವ ಮಾಂಕಾಳ ಎಸ್ ವೈದ್ಯ ಅವರು ಬಿಡುಗಡೆ ಮಾಡಿದ್ದು ವಿಶೇಷ. ತಮ್ಮದೇ ಜಿಲ್ಲೆಯ ಕಥೆಯ ಒಂದು ಸ್ಯಾಂಪಲ್ ಕಣ್ತುಂಬಿಕೊಂಡ ಸಚಿವರ ಕಣ್ಣಾಲಿ ಗಳು, ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ತುಂಬಿ ಬಂದವು. ಹೀಗಾಗಿಯೇ ಮಾಂಕಾಳ ಎಸ್ ವೈದ್ಯ ಮೊದಲ ದಿನದ ಮೊದಲ ಶೋನಲ್ಲಿ ಚಿತ್ರವನ್ನ ನೋಡುವುದಾಗಿ ಚಿತ್ರತಂಡಕ್ಕೆ ಪ್ರಾಮಿಸ್ ಮಾಡಿದರು

ದೇವರಾಜ್ ಪೂಜಾರಿ ಅವರ ನಿರ್ದೇಶನ ಈ ಚಿತ್ರಕ್ಕಿದೆ. ಹಿಂದೆ ಕಿನಾರೆ ಅಂತಯ ಸದಭಿರುಚಿ ಸಿನಿಮಾ ಮಾಡಿದ್ದ ನಿರ್ದೇಶಕರು ಇಲ್ಲಿ ಕ್ಲಾಸ್ ನಾಯಕನ ಜೊತೆ ಮಾಸ್ ಪ್ರೇಕ್ಷಕರ ಮನಸನ್ನ ಗೆಲ್ಲುವ ಪ್ರಯತ್ನ ಮಾಡಿದ್ದಾರೆ. ಈ ಪ್ರಯತ್ನದ ಫಲಿತಾಂಶ ಇದೇ ಫೆಬ್ರವರಿ 23ಕ್ಕೆ ಸಿಗಲಿದೆ.

ಮತ್ಸ್ಯಗಂಧದಲ್ಲಿ ತಾರೆಯರ ಬಹುದೊಡ್ಡ ದಂಡಿದೆ. ಪೃಥ್ವಿ ಅಂಬಾರ್ ಜೊತೆ ಇಲ್ಲಿ ಹಿರಿಯ ನಟ ಶರತ್ ಲೋಹಿತಾಶ್ವ, ಭಜರಂಗಿ ಲೋಕಿ, ಪ್ರಶಾಂತ್ ಸಿದ್ದಿ, ನಾಗರಾಜ್ ಬೈಂದೂರ್, ಮೈಮ್ ರಾಮದಾಸ್ , ಪಿ.ಡಿ. ಸತೀಶ್ ಚಂದ್ರ, ದಿಶಾ ಶೆಟ್ಟಿ, ಅಂಜಲಿ ಪಾಂಡೆ, ದಿವ್ಯಾ ಶೆಟ್ಟಿ, ಕಾಂತ್ ರಾಜ್ ಕಡ್ಡಿಪುಡಿ ಹೀಗೆ ಅನೇಕರು ಚಿತ್ರದಲ್ಲಿದ್ದಾರೆ. ಇನ್ನೂ ಇಲ್ಲಿಯವರೆಗೆ ಕಲಾವಿದನಾಗಿ ನಿಮ್ಮೆಲ್ಲರನ್ನ ಮನರಂಜಿಸಿರುವ ಪ್ರಶಾಂತ್ ಸಿದ್ದಿ, ಮತ್ಯ್ಯಗಂಧ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಇದು ಈ ಚಿತ್ರದ ವಿಶೇಷತೆಯಲ್ಲೊಂದು. ಮಿಕ್ಕಂತೆ ಕನ್ನಡ ಪಿಚ್ಚರ್ ಅರ್ಪಿಸುವ ಚಿತ್ರವನ್ನ ಬಿ.ಎಸ್. ವಿಶ್ವನಾಥ್ ನಿರ್ಮಾಣ ಮಾಡಿದ್ದಾರೆ.

Pruthvi Ambaars Matsyagandha Trailer Launched

ಸದ್ಯಕ್ಕೆ ಮತ್ಸ್ಯಗಂಧ ಟ್ರೇಲರ್ ಟಾಕ್ ಆಫ್ ದಿ ಟೌನ್ ಆಗ್ತಿದೆ. ಪೃಥ್ವಿ ಅಂಬರ್ ವೃತ್ತಿ ಬದುಕಿಗೆ ತಿರುವು ನೀಡುವಂತಹ ಸಿನಿಮಾ ಮತ್ಸ್ಯಗಂಧ ಆಗಲಿದೆ ಎಂಬ ಮಾತು ವ್ಯಾಪಕವಾಗಿ ಕೇಳಿ ಬರುತ್ತಿದೆ. ಚಿತ್ರ ಇದೇ ಫೆಬ್ರವರಿ 23ರಂದು ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ

More from Filmibeat

English summary
Pruthvi Ambaar Plays A Rough And Tough Cop In The Film Directed By Devaraj Poojary, Which Will Release On Fev 23
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X