ಪೃಥ್ವಿ ಅಂಬಾರ್ VS ಪೃಥ್ವಿ ಅಂಬಾರ್ ; ದಿಯಾ ನಾಯಕನ ಎರಡು ಚಿತ್ರಗಳು ಒಂದೇ ದಿನ ಬಿಡುಗಡೆ

ಇಬ್ಬರು ನಾಯಕರ ಸಿನಿಮಾಗಳು ಒಂದೇ ದಿನ ರಿಲೀಸ್ ಆಗುವುದು ಸಾಮಾನ್ಯ. ಆದರೆ ಒಬ್ಬನೇ ಕಲಾವಿದ ಅಭಿನಯಿಸಿರುವ ಎರಡು ಸಿನಿಮಾಗಳು ಒಂದೇ ದಿನ ತೆರೆಗೆ ಬರುವುದು ವಿಶೇಷ. ವಿಶಿಷ್ಟ. ಇಂಥಹ ಅಪರೂಪದ ದಾಖಲೆಯನ್ನ ದಿಯಾ ಸಿನಿಮಾ ಮೂಲಕ ಕನ್ನಡಿಗರ ಹೃದಯ ಕದ್ದ ಕರಾವಳಿ ಕುವರ ಪೃಥ್ವಿ ಅಂಬಾರ್ ಬರೆಯಲು ಹೊರಟಿದ್ದಾರೆ.

ಹೌದು, ಪೃಥ್ವಿ ಅಂಬಾರ್ ಅಭಿನಯದ ಮತ್ಸ್ಯಗಂಧ ಹಾಗೂ ಫಾರ್ ರಿಜಿಸ್ಟ್ರೇಷನ್ ಇವೆರಡು ಸಿನಿಮಾ ಒಂದೇ ದಿನ ತೆರೆಗೆ ಬರುತ್ತಿವೆ. ಫೆಬ್ರುವರಿ 23ರಂದು ಬಿಡುಗಡೆಯಾಗ್ತಿವೆ. ಈ ಕುರಿತು ಎರಡು ಚಿತ್ರತಂಡಗಳು ಅಧಿಕೃತವಾದ ಘೋಷಣೆಯನ್ನೂ ಕೂಡ ಮಾಡಿವೆ. ಆದರೆ ಇದಕ್ಕೆ ಪೃಥ್ವಿ ಅಂಬಾರ್ ಅವರ ಸಮ್ಮತಿ ಇದೆಯಾ ಅನ್ನುವುದು ಖುದ್ದು ಪೃಥ್ವಿ ಅಂಬಾರ್ ಅವರೇ ಹೇಳಬೇಕು.

Pruthvi Ambaars Two Films To Hit Theatres On Same Day

ಮತ್ಸ್ಯಗಂಧ ಚಿತ್ರದ ಕಥೆ ಏನು ?

ಮತ್ಸ್ಯಗಂಧ ಚಿತ್ರದಲ್ಲಿ ಪೃಥ್ವಿ ಅಂಬಾರ್ ಇದೇ ಮೊದಲ ಬಾರಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಿಂದೆ ಕಿನಾರೆ' ಎಂಬ ಸಿನಿಮಾ ನಿರ್ದೇಶನ ಮಾಡಿದ್ದ ದೇವರಾಜ್‌ ಈ ಸಿನಿಮಾದ ನಿರ್ದೇಶಕರು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಕುಮಟಾ ಭಾಗದಲ್ಲಿ ನಡೆಯುವ ಕಥೆ ಈ ಚಿತ್ರದಲ್ಲಿದೆ. ಬಹಳ ರಿಯಲಿಸ್ಟಿಕ್‌ ಕಥೆಯಿರುವ ಸಿನಿಮಾ ಇದು ಎಂದು ಚಿತ್ರತಂಡ ಮೊದಲಿಂದ ಹೇಳಿಕೊಂಡು ಬಂದಿದೆ. ಪೃಥ್ವಿ ಅಂಬಾರ್ ಜೊತೆ ಗೋಪಾಲಕೃಷ್ಣ ದೇಶಪಾಂಡೆ ಕೂಡ ಚಿತ್ರದಲ್ಲಿದ್ದಾರೆ. ಇನ್ನೂ ಮತ್ಸ್ಯಗಂಧ' ಚಿತ್ರದ ಮೂಲಕ ನಟ ಪ್ರಶಾಂತ್‌ ಸಿದ್ಧಿ ಸಂಗೀತ ನಿರ್ದೇಶಕನಾಗಿ ಬಡ್ತಿ ಪಡೆದಿರೋದು ವಿಶೇಷ.

ಫಾರ್ ರಿಜಿಸ್ಟ್ರೇಷನ್ ನಲ್ಲಿ ಪೃಥ್ವಿ ಜೊತೆ ಮಿಲನಾ ನಾಗರಾಜ್

ಪ್ಯಾಕೇಜ್ ಆಫ್ ಎಮೋಷನ್ ಹಾಗೂ ಡ್ರಾಮಾವನ್ನೊಂದಿರುವ ಚಿತ್ರ ಫಾರ್ ರಿಜಿಸ್ಟ್ರೇಷನ್. ನವೀನ್ ದ್ವಾರಕನಾಥ್ ನಿರ್ದೇಶನದ ಚೊಚ್ಚಲ ಚಿತ್ರದಲ್ಲಿ ಪೃಥ್ವಿ ಅಂಬಾರ್ ಎದುರು ಮಿಲನಾ ನಾಗರಾಜ್ ನಾಯಕಿಯ ಪಾತ್ರವನ್ನ ನಿರ್ವಹಿಸಿದ್ದಾರೆ. ರಿಜಿಸ್ಟ್ರೇಷನ್ ಅನ್ನೋದು ಎಲ್ಲಾ ವಿಷಯಕ್ಕೂ ಬೇಕು. ಕಾರು, ಜಾಗಕ್ಕೆ ಮಾತ್ರವಲ್ಲ. ಸಂಬಂಧಗಳು ಸರಿಯಾದ ರೀತಿ ರಿಜಿಸ್ಟರ್ ಆಗಬೇಕು ಎಂಬ ವಿಚಾರವನ್ನು ನಿರ್ದೇಶಕರು ಈ ಸಿನಿಮಾದಲ್ಲಿ ಸೂಕ್ಷ್ಮವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ನವೀನ್ ರಾವ್ ನಿರ್ಮಾಣದಲ್ಲಿ ಮೂಡಿ ಬಂದ ಚಿತ್ರದಲ್ಲಿ ರವಿಶಂಕರ್‌, ತಬಲಾ ನಾಣಿ, ಸುಧಾ ಬೆಳವಾಡಿ, ಬಾಬು ಹಿರಣ್ಣಯ್ಯ, ಸ್ವಾತಿ, ರಮೇಶ್‌ ಭಟ್‌, ಉಮೇಶ್‌ ಸೇರಿ ದೊಡ್ಡ ತಾರಾಬಳಗವೇ ಇದೆ.

Pruthvi Ambaars Two Films To Hit Theatres On Same Day

ಇಬ್ಬರಲ್ಲಿ ಮುಂದಕ್ಕೆ ಹೋಗೋರು ಯಾರು..?

ಮತ್ಸ್ಯಗಂಧ ಹಾಗೂ ಫಾರ್ ರಿಜಿಸ್ಟ್ರೇಷನ್ ಎರಡು ಚಿತ್ರಗಳ ಬಿಡುಗಡೆಯ ದಿನ ಒಂದೇ ಆದ ಹಿನ್ನೆಲೆ, ಎರಡು ಚಿತ್ರಗಳಲ್ಲಿ ಯಾವ ಚಿತ್ರವನ್ನ ಮುಂದೂಡಲಾಗುತ್ತೆ ಅನ್ನುವ ಕುತೂಹಲ ಈಗ ಮನೆ ಮಾಡಿದೆ. ಒಂದು ವೇಳೆ ಎರಡು ಸಿನಿಮಾ ಒಟ್ಟಿಗೆ ತೆರೆಗೆ ಬಂದರೆ, ಪೃಥ್ವಿ ಅಂಬಾರ್ ಹೇಗೆ ನಿಭಾಯಿಸುತ್ತಾರೆ..? ಫಲಿತಾಂಶದ ಮೇಲಾಗುವ ಪರಿಣಾಮಗಳೇನು ಅನ್ನುವ ಪ್ರಶ್ನೆಯೂ ಕೂಡ ಈಗ ಅನೇಕರನ್ನ ಕಾಡ್ತಿದೆ. ನಿಜಕ್ಕೂ ಮತ್ಸ್ಯಗಂಧ ಹಾಗೂ ಫಾರ್ ರಿಜಿಸ್ಟ್ರೇಷನ್ ಎರಡು ಚಿತ್ರ ಗಳು ಒಟ್ಟಿಗೆ ಒಂದೇ ದಿನ ತೆರೆಗೆ ಬರುತ್ತಾವಾ ಕಾದು ನೋಡಬೇಕಿದೆ.

More from Filmibeat

English summary
Pruthvi ambaar's Matsya gandha & For registration to release on same day. makers of both the films announced feb 23 as release date of their film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X