ಕಡಲ ಕಿನಾರೆಯಲ್ಲಿ 'ಲವ್ ಮಾಕ್ ಟೇಲ್' ಮಿಲನಾ ಜೊತೆ 'ದಿಯಾ' ಪೃಥ್ವಿಯ ಡ್ಯುಯೆಟ್
ದಿಯಾ ಖ್ಯಾತಿಯ ನಟ ಪೃಥ್ವಿ ಅಂಬರ್ ಮತ್ತು ಮಿಲನಾ ನಾಗರಾಜ್ ನಟನೆಯ 'ಫಾರ್ Regn' ಸಿನಿಮಾ ಅನೌನ್ಸ್ ಆಗಿ ತಿಂಗಳಾಗಿತ್ತು. ಬಳಿಕ ಚಿತ್ರದಿಂದ ಯಾವುದೇ ಅಪ್ ಡೇಟ್ಸ್ ಸಿಕ್ಕಿರಲಿಲ್ಲ. ನಟಿ ಮಿಲನಾ ನಾಗರಾಜ್ 'ಲವ್ ಮಾಕ್ಟೇಲ್-2' ನಲ್ಲಿ ನಿರತರಾಗಿದ್ದರು. ಇತ್ತ ಪೃಥ್ವಿ ಅಂಬರ್ ಸಹ ಬೇರೆ ಬೇರೆ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
ಇತ್ತೀಚಿಗಷ್ಟೆ 'ಫಾರ್ Regn' ಚಿತ್ರಕ್ಕೆ ಮುಹೂರ್ತ ಮಾಡುವ ಮೂಲಕ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭಿಸುವುದಾಗಿ ಹೇಳಿದ್ದರು. ಅಂದರಂತೆ ಈಗ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದ್ದು, ಉಡುಪಿಯ ಕಡಲ ಕಿನಾರೆಯಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಈ ಬಗ್ಗೆ ನಟಿ ಮಿಲನಾ ನಾಗರಾಜ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿ ಫೋಟೋವನ್ನು ಹಂಚಿಕೊಂಡಿದ್ದಾರೆ.
ಅಂದಹಾಗೆ ಡ್ಯುಯೆಟ್ ಹಾಡಿನ ಮೂಲಕ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದೆ ಎನ್ನಲಾಗುತ್ತಿದೆ. ಹೌದು, ಉಡುಪಿ, ಮಂಗಳೂರಿನ ಸುಂದರ ಕಡಲ ತೀರದಲ್ ಮಿಲನಾ ಮತ್ತು ಪೃಥ್ವಿ ಅಂಬರ್ ನಡುವಿನ ರೊಮ್ಯಾಂಟಿಕ್ ಹಾಡನ್ನು ಸೆರೆಹಿಡಿಯುತ್ತೆ ಸಿನಿಮಾತಂಡ. ಬಳಿಕ ಚಿತ್ರತಂಡ ಸಕಲೇಶಪುರ ಕಡೆ ಹೊರಡಲಿದೆ. 'ಫಾರ್ Regn' ರೊಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿದೆ.

ಅಂದಹಾಗೆ 'ಫಾರ್ Regn' ಚಿತ್ರಕ್ಕೆ ನವೀನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶ್ಯಾಡೋ, ಹರಿವಿನ ಹಾದಿ, ಎಲ್ಲೋ ಬೋರ್ಡ್ ಮುಂತಾದ ಕಿರುಚಿತ್ರಗಳನ್ನು ನಿರ್ದೇಶನ ಮಾಡಿರುವ ನವೀನ್ ಮೊದಲ ಬಾರಿಗೆ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದಾರೆ. ಚಿತ್ರಕ್ಕೆ ಹರಿಷ್ ಆರ್ ಸಂಗೀತ ನೀಡುತ್ತಿದ್ದಾರೆ.


Click it and Unblock the Notifications











