For Quick Alerts
  ALLOW NOTIFICATIONS  
  For Daily Alerts

  'ಶಿವಪ್ಪ' ಸಿನಿಮಾಗಾಗಿ ಹೊಸ ಗೆಟಪ್ ನಲ್ಲಿ ಕಾಣಿಸಿಕೊಂಡ ನಟ ಪೃಥ್ವಿ ಅಂಬರ್

  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸದ್ಯ ಶಿವಪ್ಪ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. 'ಟಗರು' ಸಿನಿಮಾ ಬಳಿಕ ಶಿವಣ್ಣ ಮತ್ತು ಡಾಲಿ ಧನಂಜಯ್ ಇಬ್ಬರು ಒಟ್ಟಿಗೆ ನಟಿಸುತ್ತಿರುವ ಸಿನಿಮಾವಿದು. ವಿಶೇಷ ಎಂದರೆ ಚಿತ್ರದಲ್ಲಿ ದಿಯಾ ಖ್ಯಾತಿಯ ನಟ ಪೃಥ್ವಿ ಅಂಬರ್ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  ಈಗಾಗಲೇ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು, ಶಿವರಾಜ್ ಕುಮಾರ್ ಮತ್ತು ಪೃಥ್ವಿ ಅಂಬರ್ ಇಬ್ಬರು ಮೊದಲ ದಿನದ ಚಿತ್ರೀಕರಣದಲ್ಲಿ ಹಾಜರಾಗಿದ್ದಾರೆ. ಅಂದ್ಹಾಗೆ ಶಿವಪ್ಪ ಸಿನಿಮಾಗೆ ತಮಿಳು ನಿರ್ದೇಶಕ ವಿಜಯ್ ಮಿಲ್ಟನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶಿವಣ್ಣ ಜೊತೆೆಗೆ ಡಾಲಿ ಧನಂಜಯ್ ಮತ್ತು ಪೃಥ್ವಿ ಅಂಬರ್ ಇರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇದೀಗ ಪೃಥ್ವಿ ಚಿತ್ರಕ್ಕಾಗಿ ಹೊಸ ಗೆಟಪ್ ನಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಮುಂದೆ ಓದಿ..

  ಪುನೀತ್ ಜೊತೆ ನಟಿಸಿದ್ದ ಅಂಜಲಿ ಈಗ ಶಿವರಾಜ್ ಕುಮಾರ್ ಗೆ ನಾಯಕಿಪುನೀತ್ ಜೊತೆ ನಟಿಸಿದ್ದ ಅಂಜಲಿ ಈಗ ಶಿವರಾಜ್ ಕುಮಾರ್ ಗೆ ನಾಯಕಿ

  ಚಿತ್ರಕ್ಕಾಗಿ ಲುಕ್ ಬದಲಾಯಿಸಿಕೊಂಡ ಪೃಥ್ವಿ

  ಚಿತ್ರಕ್ಕಾಗಿ ಲುಕ್ ಬದಲಾಯಿಸಿಕೊಂಡ ಪೃಥ್ವಿ

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ನಟಿಸಲು ನಟ ಪೃಥ್ವಿ ಅಂಬರ್ ಸಖತ್ ಎಕ್ಸಾಯಿಟ್ ಆಗಿದ್ದಾರೆ. ಶಿವಪ್ಪ ಸಿನಿಮಾದಲ್ಲಿ ಪೃಥ್ವಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಪೃಥ್ವಿ ಅಂಬರ್ ಹೊಸ ಗೆಟಪ್ ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಹೊಸ ಲುಕ್ ನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಹೊಸ ಗೆಟಪ್ ಹೇಗಿದೆ? ಎಂದ ಪೃಥ್ವಿ

  ಹೊಸ ಗೆಟಪ್ ಹೇಗಿದೆ? ಎಂದ ಪೃಥ್ವಿ

  ಉದ್ದ ಕೂದಲು ಬಿಟ್ಟಿದ್ದ ಪೃಥ್ವಿ ಇದೀಗ ಕೂದಲಿಗೆ ಕತ್ತರಿ ಹಾಕಿದ್ದಾರೆ. ಸಖತ್ ಹ್ಯಾಂಡ್ ಸಮ್ ಆಗಿ ಕಾಣಿಸುತ್ತಿರುವ ಪೃಥ್ವಿ ಹೊಸ ಗೆಟಪ್ ಗೆ ಅಭಿಮಾನಿಗಳಿಂದ ಮೆಚ್ಚುಗೆಯ ಕಾಮೆಂಟ್ಸ್ ಹರಿದು ಬರುತ್ತಿದೆ. ನಟ ಪೃಥ್ವಿ ಹೊಸ ಗೆಟಪ್ ನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, 'ಕೂದಲಿಗೆ ಕತ್ತರಿ ಬಿತ್ತು, ಹೊಸ ಗೆಟಪ್ ಹೇಗಿದೆ?, ಶಿವಪ್ಪ ಸಿನಿಮಾದ ಶೂಟಿಂಗ್ ಪ್ರಾರಂಭವಾಗಿದೆ. ನಿಮ್ಮೆಲ್ಲರ ಆಶೀರ್ವಾದ ಇರಲಿ' ಎಂದು ಕೇಳಿಕೊಂಡಿದ್ದಾರೆ.

  ಶಿವರಾಜ್ ಕುಮಾರ್-ಡಾಲಿ ಜತೆಯಾಗಿ ನಟಿಸುತ್ತಿರುವ ಸಿನಿಮಾಕ್ಕೆ ಹೆಸರು ಫಿಕ್ಸ್ಶಿವರಾಜ್ ಕುಮಾರ್-ಡಾಲಿ ಜತೆಯಾಗಿ ನಟಿಸುತ್ತಿರುವ ಸಿನಿಮಾಕ್ಕೆ ಹೆಸರು ಫಿಕ್ಸ್

  'ಶಿವಪ್ಪ' ಪಕ್ಕಾ ಆಕ್ಷನ್ ಸಿನಿಮಾ

  'ಶಿವಪ್ಪ' ಪಕ್ಕಾ ಆಕ್ಷನ್ ಸಿನಿಮಾ

  'ಶಿವಪ್ಪ' ಪಕ್ಕಾ ಆಕ್ಷನ್ ಸಿನಿಮಾವಾಗಿದ್ದು, ಶಿವರಾಜ್ ಕುಮಾರ್ ಚಿತ್ರದಲ್ಲಿ ಮೂರು ಶೇಡ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ನಟ ಪೃಥ್ವಿ ಅಂಬರ್ ಮತ್ತು ಡಾಲಿ ಪಾತ್ರ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ನಿರ್ದೇಶಕ ವಿಜಯ್ ಮಿಲ್ಟನ್ ಈಗಾಗಲೇ ಕನ್ನಡದಲ್ಲಿ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ. ಆದರೆ ಇದು ವಿಜಯ್ ನಿರ್ದೇಶನದ ಮೊದಲ ಕನ್ನಡ ಸಿನಿಮಾ. ತಮಿಳಿನಲ್ಲಿ ನಾಲ್ಕು ಸಿನಿಮಾಗಳನ್ನು ವಿಜಯ್ ನಿರ್ದೇಶನ ಮಾಡಿದ್ದಾರೆ.

  Rajinikanth ಅಭಿಮಾನಿಗಳಿಗೆ ಆತಂಕ | Filmibeat Kannada
  ಶಿವರಾಜ್ ಕುಮಾರ್ ಗೆ ಅಂಜಲಿ ನಾಯಕಿ

  ಶಿವರಾಜ್ ಕುಮಾರ್ ಗೆ ಅಂಜಲಿ ನಾಯಕಿ

  ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸಿರುವ ನಟಿ ಅಂಜಲಿ ಇದೀಗ ಶಿವರಾಜ್ ಕುಮಾರ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೊದಲು ಪುನೀತ್ ರಾಜ್ ಕುಮಾರ್ ಅಭಿನಯದ ರಣವಿಕ್ರಮ ಸಿನಿಮಾದಲ್ಲಿ ನಟಿಸಿದ್ದ ಅಂಜಲಿ ಇದೀಗ 8 ವರ್ಷಗಳ ಬಳಿಕ ಮತ್ತೆ ಕನ್ನಡ ಸಿನಿಮಾರಂಗಕ್ಕೆ ವಾಪಸ್ ಆಗಿದ್ದಾರೆ.

  English summary
  Kannada Actor Pruthvi Ambar Appearing in the new getup for Shivappa movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X