ಶುಗರ್‌ಲೆಸ್ ಚಿತ್ರೀಕರಣ ಪ್ರಾರಂಭ: ಸಿಹಿ ನಿರೀಕ್ಷೆಯಲ್ಲಿ ಚಿತ್ರತಂಡ
ದಿಯಾ ಖ್ಯಾತಿಯ ಪೃಥ್ವಿ ಅಂಬರ್ ನಟನೆಯ ಸಿನಿಮಾ 'ಶುಗರ್ ಲೆಸ್' ಇದೇ ಸೋಮವಾರದಿಂದ ಚಿತ್ರೀಕರಣ ಪ್ರಾರಂಭವಾಗಿದ್ದು, ಬಹು ದಿನಗಳ ವಿರಾಮದ ನಂತರ ಚಿತ್ರತಂಡ ಹುರುಪಿನಿಂದ ಚಿತ್ರೀಕರಣ ನಡೆಸುತ್ತಿದೆ.
ಸಿನಿಮಾದ ಚಿತ್ರೀಕರಣ ಬೆಂಗಳೂರಿನಲ್ಲಿಯೇ ನಡೆಯುತ್ತಿದ್ದು, 45 ದಿನಗಳ ಒಂದೇ ಶೆಡ್ಯೂಲ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ನಂತರ ಹಾಡುಗಳ ಚಿತ್ರೀಕರಣ ಇರಲಿದೆ.
ದಿಯಾ ಸಿನಿಮಾ ಮೂಲಕ ಖ್ಯಾತಿ ಪಡೆದಿರುವ ಪೃಥ್ವಿ ಅಂಬರ್ ಸಿನಿಮಾದ ನಾಯಕರಾಗಿದ್ದು, ಸಿನಿಮಾದ ನಾಯಕಿಯಾಗಿ ಪ್ರಿಯಾಂಕಾ ತಿಮ್ಮೇಶ್ ನಟಿಸುತ್ತಿದ್ದಾರೆ. ಇನ್ನೂ ಹಲವು ಪ್ರಮುಖ ನಟರು ತಾರಾಗಣದಲ್ಲಿದ್ದಾರೆ.

ನಿರ್ದೇಶಕನಾಗಿ ಮೊದಲ ಸಿನಿಮಾ
ಶುಗರ್ ಲೆಸ್ ಸಿನಿಮಾವನ್ನು ಶಶಿಧರ್ ಕೆ.ಎಂ ನಿರ್ದೇಶಿಸುತ್ತಿದ್ದು, ಇದು ಅವರ ಮೊದಲ ನಿರ್ದೇಶನದ ಸಿನಿಮಾ. ಈ ಮೊದಲು ನಿರ್ಮಾಪಕ ಆಗಿದ್ದ ಶಶಿಧರ್ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ಅವರು ಡಾಟರ್ ಆಫ್ ಪಾರ್ವತಮ್ಮ ಸಿನಿಮಾ ನಿರ್ಮಿಸಿದ್ದರು.

ಸ್ನೇಹಿತನ ಪಾತ್ರದಲ್ಲಿ ನಟ ಧರ್ಮಣ್ಣ
ಸಿನಿಮಾದಲ್ಲಿ ಸ್ನೇಹಿತನ ಗೆಳೆಯನ ಪಾತ್ರದಲ್ಲಿ ನಟ ಧರ್ಮಣ್ಣ ಅಭಿನಯಿಸುತ್ತಿದ್ದಾರೆ. ಸಿನಿಮಾದಲ್ಲಿ ಕಾಮಿಕ್ ರಿಲೀಫ್ ಆಗಿರುವ ಜೊತೆಗೆ ಕಥೆಯ ಪ್ರಮುಖ ಭಾಗವೂ ಆಗಿದ್ದಾರೆ ಧರ್ಮಣ್ಣ. ಹಳ್ಳಿ ಹೈದನ ಪಾತ್ರದಲ್ಲಿ ಮಿಂಚಲಿದ್ದಾರೆ ಧರ್ಮಣ್ಣ.

ಅನೂಪ್ ಸಿಳಿನ್ ಸಂಗೀತ
ಸಿನಿಮಾದ ನಿರ್ದೇಶಕ ಶಶಿಧರ್ ಕೆ.ಎಂ ಅವರೇ ನಿರ್ಮಾಪಕರೂ ಆಗಿದ್ದಾರೆ. ರಾಮಾ ರಾಮಾ ರೇ ಕ್ಯಾಮೆರಾ ಮನ್ ಲವಿತ್ ಈ ಸಿನಿಮಾಕ್ಕೆ ಕ್ಯಾಮೆರಾ ಕುಸುರಿ ಮಾಡಲಿದ್ದಾರೆ. ಅನೂಪ್ ಸಿಳೀನ್ ಸಂಗೀತವಿದೆ. ಪುಷ್ಕರ್ ಮಲ್ಲಿಕಾರ್ಜುನ್ ಸಿನಿಮಾಕ್ಕೆ ಸಹಕಾರ ನೀಡಿದ್ದಾರೆ.
Recommended Video

ಕೊರೊನಾ ಮುಗಿದ ಮೇಲೆ ಬಿಡುಗಡೆ
ಕೊರೊನಾ ತಾಂಡವ ಮುಗಿವ ವೇಳೆಗೆ ಸಿನಿಮಾವನ್ನು ಬಿಡುಗಡೆಗೆ ತಯಾರುಮಾಡಿಟ್ಟುಕೊಳ್ಳುವ ಇರಾದೆಯಲ್ಲಿ ಚಿತ್ರತಂಡ ಕೆಲಸ ಮಾಡುತ್ತಿದೆ. ಉತ್ಸಾಹಿ ತಂಡ 'ಶುಗರ್‌ಲೆಸ್' ಸಿನಿಮಾ ಮೂಲಕ ಪ್ರೇಕ್ಷಕರಿಗೆ ಸಿನಿಮಾ ಸಿಹಿ ಉಣಿಸಲು ತಯಾರಿ ನಡೆಸಿದೆ.


Click it and Unblock the Notifications











