ಪೃಥ್ವಿ ಅಂಬರ್ ಅನ್ನು ಹುಡುಕಿ ಬಂದ ಬಂಪರ್ ಆಫರ್
'ದಿಯಾ' ಸಿನಿಮಾ ಮೂಲಕ ಖ್ಯಾತಿಗೆ ಬಂದ ನಟ ಪೃಥ್ವಿ ಅಂಬರ್ ಗೆ ಸಾಲು-ಸಾಲು ಅವಕಾಶಗಳು ಅರಸಿ ಬರುತ್ತಿವೆ.
Recommended Video
ಈಗಾಗಲೇ ಮೂರು ಸಿನಿಮಾಗಳಲ್ಲಿ ನಾಯಕನಾಗಿ ನಟಿಸುತ್ತಿರುವ ಪೃಥ್ವಿ ಅಂಬರ್‌ಗೆ ಕನ್ನಡ ದಿಗ್ಗಜ ನಟರೊಬ್ಬರ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಹುಡುಕಿಕೊಂಡು ಬಂದಿದೆ. ದಿಯಾ ಸಿನಿಮಾದಲ್ಲಿ ಉತ್ತಮ ನಟನೆ ಅವರಿಗೆ ಅವಕಾಶಗಳ ದೊಡ್ಡ ಬಾಗಿಲನ್ನೇ ತೆರೆದಿಟ್ಟಿದೆ.
ಹೌದು, ನಟ ಪೃಥ್ವಿ ಅಂಬರ್ ಗೆ ಶಿವರಾಜ್ ಕುಮಾರ್ ಅವರ ನಟನೆಯ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಅವಕಾಶ ಬಂದಿದೆ. ಅವಕಾಶವನ್ನು ಎರಡೂ ಕೈಯಿಂದ ಬಾಚಿಕೊಂಡಿದ್ದಾರೆ ನಟ ಪೃಥ್ವಿ ಅಂಬರ್.

ಶಿವರಾಜ್ ಕುಮಾರ್ ಸಿನಿಮಾದಲ್ಲಿ ಪೃಥ್ವಿ ಅಂಬರ್
ತಮಿಳಿನ ನಿರ್ದೇಶಕ ವಿಜಯ್ ಮಿಲ್ಟನ್ ಅವರು ನಿರ್ದೇಶಿಸುತ್ತಿರುವ, ಶಿವರಾಜ್ ಕುಮಾರ್, ಡಾಲಿ ಧನಂಜಯ್ ಒಟ್ಟಿಗೆ ನಟಿಸುತ್ತಿರುವ ಕನ್ನಡ ಸಿನಿಮಾದಲ್ಲಿ ಪೃಥ್ವಿ ಅಂಬರ್ ಗೆ ಪ್ರಮುಖ ಪಾತ್ರವೊಂದು ನೀಡಲಾಗಿದೆ. ಒದಗಿ ಬಂದ ಅವಕಾಶದ ಬಗ್ಗೆ ಥ್ರಿಲ್ ಆಗಿದ್ದಾರೆ ನಟ ಪೃಥ್ವಿ ಅಂಬರ್.

ಶಿವಣ್ಣನ ಜೊತೆ ನಟಿಸುವ ಅವಕಾಶ ಖುಷಿ ತಂದಿದೆ: ಪೃಥ್ವಿ
ವೃತ್ತಿ ಜೀವನದ ಆರಂಭದಲ್ಲಿಯೇ ಶಿವರಾಜ್ ಕುಮಾರ್ ಅವರೊಟ್ಟಿಗೆ ನಟಿಸುವ ಅವಕಾಶ ಸಿಕ್ಕಿದ್ದು ಖುಷಿ ತಂದಿದೆ. ಕತೆ ಕೇಳಿದ ಕೂಡಲೆ ನಟಿಸಲು ಒಪ್ಪಿಕೊಂಡೆ. ಸಿನಿಮಾದ ಉದ್ದಕ್ಕೂ ಶಿವರಾಜ್ ಕುಮಾರ್ ಅವರ ಜೊತೆಗೇ ಇರುವ ಪಾತ್ರ ನನ್ನದು. ಬಹಳ ಭಿನ್ನವಾದ ಪಾತ್ರ ಎಂದಿದ್ದಾರೆ ಪೃಥ್ವಿ ಅಂಬರ್.

'ಪೃಥ್ವಿ ಪಾತ್ರ ಪ್ರೇಕ್ಷಕರಿಗೆ ಇಷ್ಟವಾಗಲಿದೆ'
ಭಿನ್ನವಾಗಿ ಡಿಸೈನ್ ಮಾಡಿದ ಪಾತ್ರದಲ್ಲಿ ಪೃಥ್ವಿ ಅಂಬರ್ ನಟಿಸುತ್ತಿದ್ದಾರಂತೆ. ಪೃಥ್ವಿ ಅಂಬರ್ ಪಾತ್ರ ಖಂಡಿತವಾಗಿಯೂ ಪ್ರೇಕ್ಷಕರಿಗೆ ಇಷ್ಟವಾಗಲಿದೆ. ಪೃಥ್ವಿ ಅವರ ವೃತ್ತಿ ಜೀವನಕ್ಕೆ ಹೆಚ್ಚಿನ ಬೂಸ್ಟ್ ಈ ಪಾತ್ರ ನೀಡಲಿದೆ ಎಂದಿದೆ ಚಿತ್ರತಂಡ.

ನವೆಂಬರ್ 19 ರಂದು ಮುಹೂರ್ತ
ಪೃಥ್ವಿ ಅಂಬರ್ ಈಗಾಗಲೇ ಶುರಗ್ ಲೆಸ್, ಲೈಫ್ ಇಸ್ ಬ್ಯೂಟಿಫುಲ್ ಮತ್ತು ಫಾರ್ ರಿಜಿಸ್ಟ್ರೇಶನ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಶಿವಣ್ಣ ಜೊತೆಗಿನ ಸಿನಿಮಾದ ಮುಹೂರ್ತವು ಇದೇ ತಿಂಗಳ 19 ರಂದು ನಡೆಯಲಿದೆ. ಚಿತ್ರೀಕರಣವು ಡಿಸೆಂಬರ್ ನಲ್ಲಿ ಪ್ರಾರಂಭವಾಗಲಿದೆ.


Click it and Unblock the Notifications











