»   » ಕ್ರೇಜಿ ಕ್ಯಾರೆಕ್ಟರ್ ಕೃಷ್ಣೇಗೌಡ ಕುರಿತು ಒಂದು ಸುದ್ದಿ

ಕ್ರೇಜಿ ಕ್ಯಾರೆಕ್ಟರ್ ಕೃಷ್ಣೇಗೌಡ ಕುರಿತು ಒಂದು ಸುದ್ದಿ

Posted By: ಜೀವನರಸಿಕ
Subscribe to Filmibeat Kannada

ಕೃಷ್ಣೇಗೌಡ. ಈ ವ್ಯಕ್ತಿಯದ್ದು ಕ್ರೇಜಿ ಕ್ಯಾರೆಕ್ಟರ್. ಜಗತ್ತು ತನ್ನ ಬಗ್ಗೆ ಹೇಗೆ ಮಾತಾಡುತ್ತೆ ಅನ್ನೋದನ್ನ ಇವ್ರು ಯಾವತ್ತೂ ತಲೆ ಕೆಡಿಸಿಕೊಳ್ಳಲ್ಲ. ನಾನು ನನ್ನ ತರಹ ಇರ್ತೀನಿ ಅಂತ ಚಿತ್ರರಂಗದಲ್ಲಿ ಓಡಾಡಿಕೊಂಡಿರೋ ವ್ಯಕ್ತಿ.

ಚಿತ್ರರಂಗದಲ್ಲಿ ಹತ್ತಾರು ಚಿತ್ರ ನಿರ್ಮಾಣ ಮಾಡಿ ನೂರಾರು ಕೋಟಿ ಕಳ್ಕೊಂಡ ವ್ಯಕ್ತಿಯೇನಲ್ಲ. ಆದ್ರೆ ನಿರ್ಮಾಪಕರು ಆಗಾಗ ನಡೆಸೋ ಪ್ರತಿಭಟನೆಗಳಲ್ಲಿ ಸದಾ ಮುಂಚೂಣಿಯಲ್ಲಿರೋ ವ್ಯಕ್ತಿ. ಪ್ರತಿಭಟನೆಯ ವಿಚಾರಗಳಲ್ಲಿ ಹಲವು ಟಿವಿಗಳಲ್ಲಿ ಚರ್ಚೆಯಲ್ಲಿ ಭಾಗವಹಿಸೋಕೆ ನಾ ಮುಂದು ತಾಮುಂದು ಅಂತ ಕಾಣಿಸಿಳ್ಳೋ ವ್ಯಕ್ತಿ. [ನಟ ರಮೇಶ್ ಅರವಿಂದ್ ವಿರುದ್ಧ ತಿರುಗಿಬಿದ್ದ ಕೃಷ್ಣೇಗೌಡ]

Publicity lover Krishnegowda to become hero

ಇಂತಿಪ್ಪ 40 ವರ್ಷ ಕಳೆದ್ರೂ ಯಂಗ್ ಅಂಡ್ ಎನರ್ಜೆಟಿಕ್ ಆಗಿ ಕಾಣೋ ಕೃಷ್ಣೇಗೌಡ್ರು ಹೀರೋ ಆಗಿ ಹೊಸ ಸಿನಿಮಾ ಮಾಡೋ ಪ್ಲಾನ್ನಲ್ಲಿದ್ದಾರೆ ಅಂತಾನೂ ಸುದ್ದಿ ಇದೆ. ಹೀರೋ ಆಗೋಕೆ ಪ್ರಚಾರ ಪಡ್ಕೊಳ್ಳೋಕೆ 1000 ರುಪಾಯಿ ಕೊಟ್ಟು ರಿಜಿಸ್ಟರ್ ಮಾಡಿಸಿ ಕೋಟಿ ಕೊಟ್ರೂ ಸಿಗದ ಪ್ರಚಾರ ಪಡ್ಕೋತಿದ್ದಾರೆ ಪ್ರಚಾರಪ್ರಿಯ ಕೃಷ್ಣೇಗೌಡ ಅಂತಿದ್ದಾರೆ ಸಿನಿರಂಗದ ಪಂಡಿತರು.

ಸದ್ಯ ಇದೂ ಕೂಡ ಒಂದು ಗಾಳಿ ಸುದ್ದಿ. ಆದ್ರೆ ಸತ್ಯ ಹೊಟ್ಟೇಲಿರೋ ಮಗು ಇದ್ದ ಹಾಗೆ. ಅದು ಜೀವಂತವಾಗಿಯಾದ್ರೂ ಅಥವಾ ಹೇಗಾದ್ರೂ ಹೊರಬರ್ಲೇ ಬೇಕಲ್ವಾ?

English summary
Publicity lover, Kannada producer Krishnegowda (40) plans to produce a Kannada movie with himself in the lead role. More than his movies, his presence in protests make more noise. Let's wish him all the best.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada