For Quick Alerts
  ALLOW NOTIFICATIONS  
  For Daily Alerts

  ಎಸ್ ಪಿ ಬಿಗೆ 'ಸ್ವೀಟ್' ಗೌರವ; ಚಾಕೋಲೇಟ್ ನಲ್ಲಿ ಗಾನ ಗಂಧರ್ವನ ಪ್ರತಿಮೆ

  |

  ದಿವಂಗತ ಖ್ಯಾತ ಹಿನ್ನಲೆ ಗಾಯಕ, ಗಾನ ಗಂಧರ್ವ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಸ್ಮರಣೆಗಾಗಿ ಚಾಕೋಲೇಟ್ ಅಂಗಡಿಯೊಂದರಲ್ಲಿ ಗಾಯಕ ಎಸ್ ಪಿ ಬಿ ಚಾಕೋಲೇಟ್ ಪ್ರತಿಮೆ ನಿರ್ಮಾಣ ಮಾಡಿ ಅಚ್ಚರಿ ಮೂಡಿಸಿದ್ದಾರೆ.

  ಅಂದಹಾಗೆ ಈ ಚಾಕೋಲೇಟ್ ಪ್ರತಿಮೆ ನಿರ್ಮಾಣವಾಗಿದ್ದು, ಪುದುಚೇರಿಯ ಮಿಷನ್ ಸ್ಟ್ರೀಟ್ ನಲ್ಲಿರುವ ಅಂಗಡಿಯಲ್ಲಿ. ಸುಮಾರು 5.8 ಅಡಿ ಎತ್ತರದ 339 ತೂಕದ ಬಾಲಸುಬ್ರಹ್ಮಣ್ಯಂ ಚಾಕೋಲೇಟ್ ಪ್ರತಿಮೆ ಎಲ್ಲರ ಗಮನ ಸೆಳೆಯುತ್ತಿದೆ. ಈ ಪ್ರತಿಮೆಯನ್ನು ಸಂಪೂರ್ಣವಾಗಿ ಚಾಕೋಲೇಟ್ ನಿಂದಲೇ ಮಾಡಲಾಗಿದೆ. ಈ ಕ್ರಿಸ್ಮಸ್ ಮತ್ತು ಹೊಸ ವರ್ಷ ಸೀಸನ್ ನಲ್ಲಿ ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಅಂಗಡಿ ಮಾಲಿಕರು ಈ ಪ್ರತಿಮೆ ಪ್ರದರ್ಶನ ಏರ್ಪಡಿಸಿದ್ದಾರೆ.

  ಸಂಗೀತ, ನೃತ್ಯ ಶಾಲೆಗೆ ಎಸ್‌ಪಿ ಬಾಲಸುಬ್ರಹ್ಮಣ್ಯಂ ಹೆಸರಿಟ್ಟ ಆಂಧ್ರ ಸರ್ಕಾರಸಂಗೀತ, ನೃತ್ಯ ಶಾಲೆಗೆ ಎಸ್‌ಪಿ ಬಾಲಸುಬ್ರಹ್ಮಣ್ಯಂ ಹೆಸರಿಟ್ಟ ಆಂಧ್ರ ಸರ್ಕಾರ

  ಅಂದಹಾಗೆ ಈ ಸುಂದರ ಸ್ವೀಟ್ ಪ್ರತಿಮೆಯನ್ನು ಅಂಗಡಿಯ ಮುಖ್ಯ ಬಾಣಸಿಗ ರಾಜೇಂದ್ರನ್ ತನ್ನ ತಂಡದೊಂದಿಗೆ ತಯಾರಿಸಿದ್ದಾರೆ. ಈ ಪ್ರತಿಮೆಯನ್ನು ಮುಂದಿನ ವರ್ಷ ಜನವರಿ 3ರ ವರೆಗೂ ಪ್ರದರ್ಶನಕ್ಕೆ ಇಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

  ಪೊಗರು ರಿಲೀಸ್ ಗೆ ಮೊದಲೆ ಮತ್ತೊಂದು ಸುರ್ಪ್ರೈಸ್ ಕೊಟ್ಟ ಧ್ರುವ ಸರ್ಜಾ | Filmibeat Kannada

  ಈ ಅಂಗಡಿ ಚಾಕೋಲೇಟ್ ಪ್ರತಿಮೆ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ಎಪಿಜೆ ಅಬ್ದುಲ್ ಕಲಾಂ, ನಟ ರಜನಿಕಾಂತ್ ಪ್ರತಿಮೆಗಳನ್ನು ನಿರ್ಮಾಣ ಮಾಡಿ ಗ್ರಾಹಕರ ಗಮನ ಸೆಳೆದಿದೆ. ಇದೀಗ ಎಸ್ ಪಿ ಬಿ ಪ್ರತಿಮೆ ನಿರ್ಮಾಣ ಮಾಡಿ, ಗ್ರಾಹಕರನ್ನು ಆಕರ್ಷಿಸುತ್ತಿದ್ದಾರೆ.

  English summary
  Puducherry bakery makes SP Balasubrahmanyam's chocolate statue to honour him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X