Don't Miss!
- News
ಅನಧಿಕೃತ ಕಟ್ಟಡಗಳಿಗೆ ಕಾರಣರಾದ ಅಧಿಕಾರಿಗಳಿಗೆ ಶಿಕ್ಷೆ ಪ್ರಮಾಣ ನಿಗದಿಗೆ ಹೈಕೋರ್ಟ್ ಸೂಚನೆ
- Lifestyle
Today Rashi Bhavishya: ಗುರುವಾರದ ದಿನ ಭವಿಷ್ಯ: ಮೇಷ, ಮೀನ ರಾಶಿಯವರು ವಾದಗಳಿಂದ ದೂರವಿರಿ
- Sports
ನ್ಯೂಜಿಲೆಂಡ್ ಕೇಂದ್ರೀಯ ಒಪ್ಪಂದದಿಂದ ಹೊರ ನಡೆದ ಟ್ರೆಂಟ್ ಬೌಲ್ಟ್! ಏಕೆ ಈ ನಿರ್ಧಾರ?
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ Z ಫೋಲ್ಡ್ 4 ಮತ್ತು ಗ್ಯಾಲಕ್ಸಿ Z ಫ್ಲಿಪ್ 4 ಫೋನ್ ಬಿಡುಗಡೆ!
- Automobiles
ನಮ್ಮ ಬೆಂಗಳೂರಿನಲ್ಲಿ ಬ್ಯಾಟರಿ ವಿನಿಮಯ ಕೇಂದ್ರಕ್ಕೆ ಚಾಲನೆ ನೀಡಿದ ಹೋಂಡಾ
- Finance
ಸೆನ್ಸೆಕ್ಸ್ ಕುಸಿತ, ನಿಫ್ಟಿ ಏರಿಕೆ: ಬುಧವಾರ ವಹಿವಾಟಿನ ಅಂತ್ಯ ಹೀಗಿದೆ
- Travel
ಭಾರತದಲ್ಲಿಯ 10 ಪ್ರಸಿದ್ದ ಹನುಮಂತ ದೇವರ ದೇವಾಲಯಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಜಪ್ಪಯ್ಯ ಅಂದ್ರೂ, 'ಪುಲಿ' ಚಿತ್ರದ ಮೊದಲೆರಡು ದಿನದ ಟಿಕೆಟ್ ಸಿಗಲ್ಲ!
ಕಾಲಿವುಡ್ ನಲ್ಲಿ ವಿಜಯ್ ಅಭಿಮಾನಿಗಳಿಗೆ ಹಾಗೂ ಸ್ಯಾಂಡಲ್ ವುಡ್ ನಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಅಕ್ಟೋಬರ್ 1 ರಂದು ಹಬ್ಬದ ವಾತಾವರಣ ಯಾಕಂತೀರಾ?. ಯಾಕೆಂದರೆ ರಾಜಮೌಳಿ ಅವರ ನಿರ್ದೇಶನದ ತೆಲುಗಿನ ಬಿಗ್ ಹಿಟ್ 'ಬಾಹುಬಲಿ'ಯ ನಂತರ ಇದೀಗ ಮತ್ತೊಂದು ಐತಿಹಾಸಿಕ ಚಿತ್ರ ಬಿಡುಗಡೆಗೆ ತಯಾರಾಗಿ ನಿಂತಿದೆ.
ಇಳೆಯದಳಪತಿ ವಿಜಯ್ ಹಾಗೂ ಕನ್ನಡದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ ಈ ವರ್ಷದ ಬಹುನಿರೀಕ್ಷಿತ ಚಿತ್ರ 'ಪುಲಿ' ಅಕ್ಟೋಬರ್ 1 ರಂದು ಭರ್ಜರಿಯಾಗಿ ತೆರೆ ಮೇಲೆ ಅಪ್ಪಳಿಸಲಿದೆ. [ತಮಿಳು 'ಪುಲಿ' ಬಾಲ ಹಿಡಿದು ನಿಂತ ಕಲಾ ಸಾಮ್ರಾಟ್]
ಇದೀಗ ಚಿತ್ರದ ಬಿಡುಗಡೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ಚಿತ್ರ ತೆರೆಗೆ ಬರುವ 4 ದಿನಗಳ ಮೊದಲೇ ಟಿಕೇಟ್ ಬುಕ್ಕಿಂಗ್ ಕಾರ್ಯ ಶುರುವಾಗಿದೆ. ಇನ್ನು ಚೆನ್ನೈನ ಕೆಲವಾರು ಚಿತ್ರಮಂದಿರಗಳಲ್ಲಿ ಈಗಾಗಲೇ ಟಿಕೇಟ್ ಹಂಚಲು ಶುರು ಹಚ್ಚಿಕೊಂಡಿದ್ದು, ಎಲ್ಲೆಡೆ ಸೋಲ್ಡ್ ಔಟ್ ಆಗಿದೆ.
'ಬುಕ್ ಮೈ ಶೋ' ಹಾಗೂ 'ಟಿಕೇಟ್ ನ್ಯೂ' ಮುಂತಾದೆಡೆ ಪ್ರೇಕ್ಷಕರಿಗೆ ಅಡ್ವಾನ್ಸ್ ಟಿಕೇಟ್ ಬುಕ್ಕಿಂಗ್ ಅವಕಾಶ ಕೂಡ ಕಲ್ಪಿಸಲಾಗಿದೆ. ವಿಶೇಷ ಏನಪ್ಪಾ ಅಂದ್ರೆ ಚಿತ್ರ ಬಿಡುಗಡೆಯಾಗುವ ಮೊದಲ ವಾರ ಅಂದರೆ ಅಕ್ಟೋಬರ್ 1 ರಿಂದ 8 ರವರೆಗೆ ಚಿತ್ರಮಂದಿರಗಳು 'ಪುಲಿ' ಬಿಡುಗಡೆಗೆ ಮೊದಲೇ ಹೌಸ್ ಫುಲ್ ಬೋರ್ಡ್ ತೂಗು ಹಾಕಿಕೊಂಡಿದೆ. [ವಿಜಯ್ ಹುಟ್ಟುಹಬ್ಬಕ್ಕೆ 'ಪುಲಿ' ಟೀಸರ್ ಗಿಫ್ಟ್]
ಇನ್ನು ಚೆನ್ನೈನ 'ಮಾಯಾಜಾಲ' ಎಂಬ ಚಿತ್ರಮಂದಿರವೊಂದು ಈಗಲೇ ಟಿಕೇಟ್ ಹಂಚಲು ಶುರುಮಾಡಿದ್ದು, ಚಿತ್ರಮಂದಿರದ ಮಾಲೀಕರು ಹೇಳುವ ಪ್ರಕಾರ ಚಿತ್ರ ಬಿಡುಗಡೆಯಾಗುವ ಮೂರು ದಿನಗಳ ಕಾಲಾವಧಿಯ ಟಿಕೇಟ್ ಈಗಾಗಲೇ ಸೋಲ್ಡ್ ಔಟ್ ಆಗಿದೆಯಂತೆ. ಮುಂದೆ ಓದಿ...

'ಪುಲಿ' ಒಟ್ಟು ಬಿಡುಗಡೆಯಾಗುವ ಸ್ಕ್ರೀನ್
ಇಳೆಯದಳಪತಿ ವಿಜಯ್ 'ಪುಲಿ' ಮೂರು ಭಾಷೆಗಳಲ್ಲಿ ಸೇರಿ ಒಟ್ಟಾರೆ ಸುಮಾರು 3000 ಗಳ ಅಂದಾಜು ಸ್ಕ್ರೀನ್ ಗಳಲ್ಲಿ ತೆರೆ ಕಾಣುವ ಸಾಧ್ಯತೆಯಿದೆ. ಸದ್ಯಕ್ಕೆ ಬಲ್ಲ ಮೂಲಗಳಿಂದ ಇಷ್ಟು ಮಾಹಿತಿ ಲಭ್ಯವಾಗಿದ್ದು, ಆಫೀಶೀಯಲ್ ಆಗಿ ಇನ್ನೂ ಬಿಡುಗಡೆಯ ಒಟ್ಟು ಸ್ಕ್ರೀನ್ ಗಳ ಮಾಹಿತಿ ಲಭ್ಯವಾಗಿಲ್ಲ. [ವಾವ್..! ಕಾಲಿವುಡ್ ನಲ್ಲಿ ಸುದೀಪ್ 'ಪುಲಿ' ಆರ್ಭಟ]

ಯುಎಸ್ಎ ನಲ್ಲಿ 130 ಸ್ಕ್ರೀನ್ ಗಳಲ್ಲಿ ಬಿಡುಗಡೆ
ಎ.ಟಿ.ಎಮ್.ಯು.ಎಸ್ ಎಂರ್ಟಟೈನ್ಮೆಂಟ್ ಸಂಸ್ಥೆಯು ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಅಮೇರಿಕಾದಲ್ಲಿ ಸುಮಾರು 130 ಸ್ಕ್ರೀನ್ ಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ. 104 ಸ್ಕ್ರೀನ್ ಗಳಲ್ಲಿ ತಮಿಳು ವರ್ಷನ್ ತೆರೆ ಕಂಡರೆ 26 ಸ್ಕ್ರೀನ್ ಗಳಲ್ಲಿ ತೆಲುಗು ವರ್ಷನ್ ತೆರೆ ಕಾಣಲಿದೆ.

ಕೇರಳದಲ್ಲಿ 200 ಸ್ಕ್ರೀನ್ ಗಳಲ್ಲಿ
ಬಲ್ಲ ಮಾಹಿತಿಗಳ ಪ್ರಕಾರ ಸುಂದರ ನಾಡು ಕೇರಳದಲ್ಲಿ ಸುಮಾರು 200 ಸ್ಕ್ರೀನ್ ಗಳಲ್ಲಿ 'ಪುಲಿ' ತೆರೆ ಕಾಣಲಿದೆ ಎಂದು ಅಂದಾಜು ಮಾಡಲಾಗಿದೆ.

ಚೆನ್ನೈನ ಹೆಚ್ಚಿನ ಚಿತ್ರಮಂದಿರಗಳು ಹೌಸ್ ಫುಲ್
ಚಿತ್ರ ಬಿಡುಗಡೆಯಾಗುವ ಮೂರು ದಿನಗಳ ಶೋ 'ಅಭಿರಾಮಿ ಸಿನಿಮಾಸ್, 'ಮಾಯಾಜಾಲ' ಚಿತ್ರಮಂದಿರ ಸೇರಿದಂತೆ ಚೆನ್ನೈನ ಹೆಚ್ಚಿನ ಚಿತ್ರಮಂದಿರಗಳು ಈಗಾಗಲೇ ಹೌಸ್ ಫುಲ್ ಬೋರ್ಡ್ ನೇತು ಹಾಕಿಕೊಂಡಿವೆ.

ಎಜಿಎಸ್ ಸಿನಿಮಾಸ್
ಎಜಿಎಸ್ ಸಿನಿಮಾಸ್ ನಲ್ಲಿ 'ಪುಲಿ' ಚಿತ್ರದ ಫಸ್ಟ್ ಡೇ ಫಸ್ಟ್ ಶೋನ ಟಿಕೇಟ್ ಗಳು ಈಗಾಗಲೇ ಭರ್ಜರಿ ಮೊತ್ತಕ್ಕೆ ಮಾರಾಟವಾಗಿದೆ. ಜೊತೆಗೆ ಅಕ್ಟೋಬರ್ 2 ಹಾಗೂ 3 ರಂದು ಚಿತ್ರದ ಟಿಕೇಟ್ ಗಳು ಮಾರಾಟಗೊಂಡಿವೆ.

'ಪುಲಿ' ರನ್ನಿಂಗ್ ಟೈಮ್
ದೊಡ್ಡ ತಾರಾಬಳಗವನ್ನೇ ಹೊಂದಿರುವ ಐತಿಹಾಸಿಕ ಕಥೆಯನ್ನಾಧರಿಸಿದ 'ಪುಲಿ' ಚಿತ್ರದ ಒಟ್ಟಾರೆ ರನ್ನಿಂಗ್ ಟೈಮ್ 2 ಗಂಟೆ ಹಾಗೂ 34 ನಿಮಿಷಗಳು