»   » ಭರತ್ ಸರ್ಜಾ ಎಂಟ್ರಿಯ 'ಪುಲಿಕೇಶಿ' ಶೂಟಿಂಗ್ ಶುರು

ಭರತ್ ಸರ್ಜಾ ಎಂಟ್ರಿಯ 'ಪುಲಿಕೇಶಿ' ಶೂಟಿಂಗ್ ಶುರು

Posted By:
Subscribe to Filmibeat Kannada
Bharath Sarja
ಕಳೆದ ವರ್ಷವೇ 'ಪುಲಿಕೇಶಿ' ಎಂಬ ಚಿತ್ರಕ್ಕೆ ಮುಹೂರ್ತ ನಡೆದಿತ್ತು. ಆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ 'ಭರತ್ ಸರ್ಜಾ' ಎಂಬ ಸರ್ಜಾ ಕುಟುಂಬದ ಮತ್ತೊಂದು ಕುಡಿಯ ಪ್ರವೇಶ ಪಕ್ಕಾ ಆಗಿತ್ತು. ಆದರೆ ನಾಯಕಿ ಆಯ್ಕೆ ಆಗಿರಲಿಲ್ಲ.

ಈಗ ಚಿತ್ರೀಕರಣದ ಪ್ರಾರಂಭಿಸಿರುವ ಪುಲಿಕೇಶಿಗೆ ಈಗ ನಾಯಕಿ ಪಕ್ಕಾ ಆಗಿದ್ದಾರೆ. ಅದು ಬೇರಾರೂ ಅಲ್ಲ, 'ಚಿತ್ರ' ಹೆಸರಿನ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿರುವ 'ಜಿಂಕೆಮರಿ' ರೇಖಾ. ಅವರು ಇತ್ತೀಚಿಗೆ ನಟಿಸಿರುವ ಕನ್ನಡಚಿತ್ರ 'ಗೋವಿಂದಾಯ ನಮಃ'.

ಪುಲಿಕೇಶಿ ಚಿತ್ರದ ಮೂಲಕ ರೇಖಾ ಮತ್ತೊಮ್ಮೆ ಕನ್ನಡಕ್ಕೆ ಬರಲಿರುವುದು ಪಕ್ಕಾ ಆಗಿದೆ. ಅರೇ, ರೇಖಾ ತುಂಬಾ ಸೀನಿಯರ್. ಅವರು ಚಿರಂಜೀವಿ ಸರ್ಜಾ ತಮ್ಮ ಧ್ರುವ ಸರ್ಜಾರಿಗೂ ತಮ್ಮನಾಗಿರುವ ಭರತ್ ಗೆ ಅಕ್ಕನ ಥರ ಕಾಣಿಸುವುದಿಲ್ಲವೇ? ಇದು ನಿಮ್ಮ ಪ್ರಶ್ನೆಯೇ?

ಹೌದು, ಇದು ಬಹುತೇಕ ಎಲ್ಲರೂ ಕೇಳುತ್ತಿರುವ ಪ್ರಶ್ನೆ. ಆದರೆ ಅದಕ್ಕೆ ನಿರ್ದೇಶಕ ಮಾಬಾ "ರೇಖಾ ಸಾಕಷ್ಟು ಸೀನಿಯರ್ ಆದ್ರೂ ತಮ್ಮ ದೇಹವನ್ನು ಸ್ಲಿಮ್ ಆಗಿ ಇಟ್ಟುಕೊಂಡಿದ್ದಾರೆ. ಹಾಗಾಗಿ ಅವರು ಭರತ್ ಸರ್ಜಾಗೆ ಅಕ್ಕನಂತೆ ಕಾಣಿಸುವುದಿಲ್ಲ" ಎಂದಿದ್ದಾರೆ.

ಮಾಬಾ ನಿರ್ದೇಶನದ ಈ ಚಿತ್ರವನ್ನು ಶ್ರೀ ಸಾಯಿ ಶ್ರೀ ಗ್ರೂಫ್ ಎಂಟರ್ ಪ್ರೈಸಸ್ ಅಡಿಯಲ್ಲಿ ಗಿರೀಶ್ ಮತ್ತು ವೀರೇಶ್ ಎಂಬವರು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ರಾಜೇಶ್ ರಾಮನಾಥ್ ಸಂಗೀತ ಹಾಗೂ ಬಿ ಗೌಡ ಛಾಯಾಗ್ರಹಣವಿದೆ.

ಭರತ್ ಸರ್ಜಾ ಹಾಗೂ ರೇಖಾ ನಾಯಕ-ನಾಯಕಿಯಾಗಿರುವ ಪುಲಿಕೇಶಿಯಲ್ಲಿ ಪ್ರಮುಖ ಪಾತ್ರಗಳಲ್ಲಿ ದೇವರಾಜ್, ಪದ್ಮಾ ವಾಸಂತಿ, ರಾಜು ತಾಳಿಕೋಟೆ, ಮೋಹನ್, ಜಿ ಸುರೇಶ್ ಮುಂತಾದವರು ನಟಿಸಲಿದ್ದಾರೆ.

ಒಟ್ಟಿನಲ್ಲಿ ನೆರೆಭಾಷೆ ತಮಿಳಿನಲ್ಲಿ ಮಿಂಚಿರುವ ಕನ್ನಡಿಗ ಅರ್ಜುನ್ ಸರ್ಜಾ, ತಮ್ಮ ಸಹೋದರಿಯ ಮೂರೂ ಮಕ್ಕಳಾದ ಚಿರಂಜೀವಿ ಸರ್ಜಾ, ಧ್ರುವ ಸರ್ಜಾ ಹಾಗೂ ಭರತ್ ಸರ್ಜಾರನ್ನು ಕನ್ನಡದ ಮೂಲಕವೇ ಪರಿಚಯಿಸಿ ಗಮನಸೆಳೆದಿದ್ದಾರೆ.

ಪುಲಿಕೇಶಿಯ ಮೂಲಕ ಕನ್ನಡದಲ್ಲಿ ಮಿಂಚಲು ಭರತ್ ಸರ್ಜಾ ಬರುತ್ತಿದ್ದಾರೆ. ಅದಕ್ಕೂ ಮೊದಲು ಅವರ ಸಹೋದರ, ಚಿರಂಜೀವಿ ಸರ್ಜಾ ತಮ್ಮ ಧ್ರುವ ಸರ್ಜಾ, ಅದ್ದೂರಿ ಚಿತ್ರದ ಮೂಲಕ ಅಮೋಘ ಪ್ರವೇಶಕ್ಕೆ ಸಿದ್ಧರಾಗಿ ಕ್ಷಣಗಣನೆ ಪ್ರಾರಂಭಿಸಿದ್ದಾರೆ.

ಸುದೀಪ್ ಜೊತೆಯಲ್ಲಿ 'ವರದನಾಯಕ' ಚಿತ್ರದ ಮೂಲಕ ಅವರಿಬ್ಬರ ಹಿರಿಯಣ್ಣ ಚಿರಂಜೀವಿ ಸರ್ಜಾ ತಮ್ಮಂದಿರಿಬ್ಬರಿಗೂ ಭಾರೀ ಪೈಪೋಟಿ ನೀಡಲಿದ್ದಾರೆ. ಒಟ್ಟಿನಲ್ಲಿ, ಕನ್ನಡಚಿತ್ರರಂಗದಲ್ಲಿ 'ಸರ್ಜಾ ಸದ್ದು' ಪ್ರಾರಂಭವಾಗಲಿದೆ. (ಒನ್ ಇಂಡಿಯಾ ಕನ್ನಡ)

English summary
Another entry from the family of Arjun Sarja who is the Star in Tamil films, is Bharat Sarja. Last year the Muhuruth was held for Bharat Sarja's debut 'Pulakeshi'. After a long gap the shooting started for 'Pulakeshi' at Kanteerava Studio. Girish and Veeresh are producers of 'Pulakeshi' in Sri Sai Shiri Group Enterprises, and Ma Bha is the Director. 
 
Please Wait while comments are loading...