Just In
Don't Miss!
- News
ನೇತಾಜಿ ಸಮಾರಂಭದಲ್ಲಿ ಜೈ ಶ್ರೀರಾಮ್ ಘೋಷಣೆ: ಬಿಜೆಪಿಗೆ RSS ಎಚ್ಚರಿಕೆ
- Lifestyle
ಕಾಂತಿಯುತ ತ್ವಚೆಗಾಗಿ ಬಾಳೆಹಣ್ಣಿನ ವಿವಿಧ ಫೇಸ್ ಮಾಸ್ಕ್ ಗಳು
- Sports
ಟೀಮ್ ಇಂಡಿಯಾ vs ಇಂಗ್ಲೆಂಡ್: ಚೆನ್ನೈಗೆ ಬಂದಿಳಿದ ಜೋ ರೂಟ್ ಪಡೆ
- Finance
900ಕ್ಕೂ ಹೆಚ್ಚು ಪಾಯಿಂಟ್ ಕುಸಿದ ಸೆನ್ಸೆಕ್ಸ್; 13,967 ಪಾಯಿಂಟ್ ನಲ್ಲಿ ನಿಫ್ಟಿ ದಿನಾಂತ್ಯ
- Automobiles
ಅನಾವರಣವಾಯ್ತು 2021ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್ಎಸ್ ಬೈಕ್
- Education
KSAT Recruitment 2021: 16 ಶೀಘ್ರಲಿಪಿಗಾರ ಮತ್ತು ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಪವರ್ ಸ್ಟಾರ್-ರಾಕಿಂಗ್ ಸ್ಟಾರ್'ರನ್ನ ಮೆಚ್ಚಿದ ಟಾಲಿವುಡ್ 'ಸುಪ್ರೀಂ ಹೀರೋ'

ಕನ್ನಡ ಸಿನಿಮಾರಂಗದಲ್ಲಿ ಬರುತ್ತಿರುವ ಸಿನಿಮಾಗಳು ಪರಭಾಷೆಯ ಕಲಾವಿದರನ್ನ ಆಕರ್ಷಣೆ ಮಾಡ್ತಿವೆ. ಇಲ್ಲಿಯ ಕಲಾವಿದರ ಅಭಿನಯಕ್ಕೆ ಕೇವಲ ಪ್ರೇಕ್ಷಕರಷ್ಟೇ ಅಲ್ಲದೆ ಪರಭಾಷೆಯ ನಟರು ಮನಸೋಲುತ್ತಿದ್ದಾರೆ. ಈ ಮಾತನ್ನ ನಾವ್ ಹೇಳ್ತಿಲ್ಲ, ಸ್ವತಃ ಅನ್ಯ ಭಾಷೆಯ ಕಲಾವಿದರೇ ಹೇಳಿಕೊಂಡಿದ್ದಾರೆ.
ಪ್ರಯೋಗಾತ್ಮಕ ಸಿನಿಮಾಗಳಂತೆ ಕಮರ್ಷಿಯಲ್ ಚಿತ್ರಗಳು ಕೂಡ ಜನರನ್ನ ಆಕರ್ಷಣೆ ಮಾಡುತ್ತಿದ್ದು, ಸದ್ಯ ಪಕ್ಕದ ಇಂಡಷ್ಟ್ರಿಯವರ ಕಣ್ಣು ನಮ್ಮ 'ಪವರ್ ಸ್ಟಾರ್' ಹಾಗೂ 'ರಾಕಿಂಗ್ ಸ್ಟಾರ್' ಮೇಲೆ ಇದೆ. ಹೌದಾ.! ಅಂತ ಆಶ್ಚರ್ಯ ಪಡಬೇಕಾಗಿಲ್ಲ ಖುದ್ದು ಟಾಲಿವುಡ್ ನಟರೇ ಈ ಮಾತನ್ನ ಹೇಳಿದ್ದಾರೆ. ರಾಕಿಂಗ್ ಸ್ಟಾರ್ ಹಾಗೂ ಪವರ್ ಸ್ಟಾರ್ ಬಗ್ಗೆ ಇಂತಹ ಮಾತನ್ನಾಡಿದ ಆ ನಟ ಯಾರು ? ಮುಂದೆ ಓದಿ

'ಕನ್ನಡದ ಸ್ಟಾರ್' ಗಳ ಮೇಲೆ ಟಾಲಿವುಡ್ ಕಣ್ಣು
ಪರಭಾಷಾ ಸ್ಟಾರ್ ಗಳಿಗೆ ಕನ್ನಡದ ಸ್ಟಾರ್ ಕಲಾವಿದರ ಮೇಲೆ ಯಾವಾಗಲೂ ಕಣ್ಣು ಇದ್ದೇ ಇರುತ್ತೆ. ಸಾಮಾನ್ಯವಾಗಿ ಟಾಲಿವುಡ್ ಸ್ಟಾರ್ ಗಳು ಬೆಂಗಳೂರಿಗೆ ಬಂದಾಗ ನಿಮಗೆ ಕನ್ನಡ ಸ್ಟಾರ್ ಗಳ ಬಗ್ಗೆ ಹಾಗೂ ಕನ್ನಡ ಸಿನಿಮಾಗಳ ಬಗ್ಗೆ ಸಾಮಾನ್ಯವಾಗಿ ಮಾತನಾಡಿರ್ತಾರೆ. ಆದ್ರೀಗ, ಮೆಗಾ ಫ್ಯಾಮಿಲಿಯಿಂದ 'ಪವರ್ ಸ್ಟಾರ್' ಮತ್ತು 'ರಾಕಿಂಗ್ ಸ್ಟಾರ್' ಗೆ ಮೆಚ್ಚುಗೆ ವ್ಯಕ್ತವಾಗಿದೆ.

'ರಾಕಿಂಗ್ ಸ್ಟಾರ್' ಅಭಿನಯಕ್ಕೆ ಮೆಚ್ಚುಗೆ
ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸಖತ್ ಕ್ರೇಜ್ ಕ್ರಿಯೆಟ್ ಮಾಡಿರುವ 'ಪವರ್ ಸ್ಟಾರ್' ಹಾಗೂ 'ರಾಕಿಂಗ್ ಸ್ಟಾರ್' ರನ್ನ ಮೆಚ್ಚಿಕೊಂಡಿರುವುದು ಮೆಗಾ ಫ್ಯಾಮಿಲಿಯವರು. ನಟ 'ಸಾಯಿ ಧರಮ್ ತೇಜ್' ನನಗೆ ಸ್ಯಾಂಡಲ್ ವುಡ್ ನಲ್ಲಿ ಪವರ್ ಸ್ಟಾರ್ ಹಾಗೂ ರಾಕಿಂಗ್ ಸ್ಟಾರ್ ಅಂದ್ರೆ ಇಷ್ಟ ಎಂದಿದ್ದಾರೆ.

ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ ಸಾಯಿ
ಇತ್ತಿಚೆಗಷ್ಟೇ ನಟ ಸಾಯಿ ಧರಮ್ ತೇಜ ತಮ್ಮ ಫೇಸ್ ಬುಕ್ ನಲ್ಲಿ ಲೈವ್ ಮಾಡಿದ್ರು. ಲೈವ್ ನಲ್ಲಿ ಅಭಿಮಾನಿಯೊಬ್ಬರು ಕನ್ನಡದ ಯಾವ ಸ್ಟಾರ್ ಇಷ್ಟವಾಗ್ತಾರೆ ಅನ್ನೋ ಪ್ರಶ್ನೆಯನ್ನ ಕೇಳಿದ್ರು. ಅದಕ್ಕೆ ಉತ್ತರಿಸಿದ 'ಸಾಯಿ ಧರಮ್ ತೇಜ' ನನಗೆ ಪುನೀತ್ ಹಾಗೂ ಯಶ್ ಅಂದ್ರೆ ಇಷ್ಟವಾಗುತ್ತಾರೆ ಎಂದಿದ್ದಾರೆ.

ಪಕ್ಕದ ಇಂಡಸ್ಟ್ರಿಯಲ್ಲೂ ಕಾಣಿಸಿಕೊಳ್ತಾರಾ?
ಸ್ಯಾಂಡಲ್ ವುಡ್ ಕಲಾವಿದರಿಗೆ ಪಕ್ಕದ ಇಂಡಷ್ಟ್ರಿಯಲ್ಲೂ ಬಾರಿ ಬೇಡಿಕೆ ಇದೆ. ಅಲ್ಲಿಯ ಸಿನಿಮಾಮಂದಿ ಇಲ್ಲಿಯ ಚಿತ್ರಗಳನ್ನ, ಅವುಗಳ ಸಕ್ಸಸ್ ಅನ್ನ ನೋಡಿರುತ್ತಾರೆ. ಕೆ.ಜಿ.ಎಫ್ ತಮಿಳು, ತೆಲುಗಿನಲ್ಲೂ ತೆರೆಗೆ ಬರೋದ್ರಿಂದ ರಾಕಿಂಗ್ ಸ್ಟಾರ್ ರನ್ನ ಮುಂದಿನ ದಿನಗಳಲ್ಲಿ ಅಲ್ಲಿಯ ಸಿನಿಮಾಗಳಲ್ಲಿ ನೋಡೋ ಸಾಧ್ಯತೆಗಳಿವೆ.