ಹೊಸ ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ಅಂಕಿತ

By Rajendra

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಹೊಸ ಚಿತ್ರಕ್ಕೆ ಅಂಕಿತ ಹಾಕಿದ್ದಾರೆ. ಇದೇ ಮಾರ್ಚ್ 17ಕ್ಕೆ 37ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಪುನೀತ್ ಅಂದೇ ತಮ್ಮ ಹೊಸ ಚಿತ್ರವನ್ನು ಘೋಷಿಸುವುದಾಗಿ ಹೇಳಿದ್ದಾರೆ.

'ಯಾರೇ ಕೂಗಾಡಲಿ' ಚಿತ್ರದ ಬಳಿಕ ಪುನೀತ್ ಯಾವ ಚಿತ್ರಕ್ಕೂ ಸಹಿಹಾಕಿರಲಿಲ್ಲ. ಈ ಬಾರಿಯ ಚಿತ್ರ ಸ್ವಂತ ಬ್ಯಾನಲ್ ನಲ್ಲೇ ಮೂಡಿಬರುತ್ತಿರುವುದು ವಿಶೇಷ. ನಾಯಕ ನಟನಾಗಿ ಪುನೀತ್ ಅಭಿನಯಿಸುತ್ತಿರುವ 20ನೇ ಚಿತ್ರ ಇದು. ಒಟ್ಟಾರೆ ಅಭಿನಯಿಸಿದ ಚಿತ್ರಗಳ ಸಂಖ್ಯೆ 34.

ಸದ್ಯಕ್ಕೆ 'ಕನ್ನಡದ ಕೋಟ್ಯಾಧಿಪತಿ 2'ರಲ್ಲಿ ಪುನೀತ್ ಬಿಜಿಯಾಗಿದ್ದಾರೆ. ರೀಮೇಕ್ ಚಿತ್ರಗಳ ಭರಾಟೆಯಲ್ಲಿ ಹೊಸತೇನಾದರೂ ಕೊಡಬೇಕೆಂಬ ಹುಮ್ಮಸ್ಸಿನಲ್ಲಿ ಅವರಿದ್ದಾರೆ. ಹಾಗಾಗಿ ಈ ಬಾರಿ ಆಕ್ಷನ್ ಕಟ್ ಹೇಳಲು ಕರ್ನಾಟಕ ಮೂಲದ ತೆಲುಗು ನಿರ್ದೇಶಕ ಜಯಂ ಸಿ ಪರಂಜಿ ಬರುತ್ತಿದ್ದಾರೆ.

ಜಯಂತ್ ಅವರು ತೆಲುಗಿನಲ್ಲಿ ಹಲವಾರು ಹಿಟ್ ಚಿತ್ರಗಳನ್ನು ಕೊಟ್ಟಂತಹ ನಿರ್ದೇಶಕ. ಪ್ರೇಮಿಂಚುಕುಂದಾಂ ರಾ, ಟಕ್ಕರಿ ದೊಂಗ, ಲಕ್ಷ್ಮಿ ನರಸಿಂಹ, ತೀನ್ ಮಾರ್ ಸೇರಿದಂತೆ ಹಲವು ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಈ ಬಾರಿ ಪುನೀತ್ ಅವರಿಗೆಂದೇ ಒಂದು ಪಕ್ಕಾ ಕಥೆಯನ್ನು ರೆಡಿ ಮಾಡಿದ್ದಾರಂತೆ.

ಕಥೆ ಹಳೆಯದಾದರೂ ಪುನೀತ್ ಅವರಿಗೆ ಹೇಳಿಮಾಡಿಸಿದಂತಿದೆ ಎನ್ನುತ್ತವೆ ಮೂಲಗಳು. ಬಹುತೇಕ ಚಿತ್ರೀಕರಣ ವಿದೇಶದಲ್ಲೇ ನಡೆಯಲಿದೆ. ನಾಯಕಿ ಯಾರು ಎಂಬುದು ಇನ್ನೂ ಅಂತಿಮವಾಗಿಲ್ಲ. ಚಿತ್ರೀಕರಣ ಮೇ ತಿಂಗಳಿಂದ ಆರಂಭವಾಗಲಿದೆ. ಚಿತ್ರಕ್ಕೆ ಸಂಬಂಧಿಸಿದಂತೆ ಉಳಿದ ವಿವರಗಳನ್ನು ನಿರೀಕ್ಷಿಸಲಾಗಿದೆ. (ಏಜೆನ್ಸೀಸ್)

More from Filmibeat

English summary
Puneet Rajkumar has finally given a nod to his next film and that will be directed by a Karnataka-born Telugu director. Jayant C Paranji, who has worked with some of the big names in Telugu film industry like Chiranjeevi, Balakrishna, Nagarjuna, Venkatesh, Mahesh Babu and Pawan Kalyan, will be directing Puneet Rajkumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X