ಪವರ್ ಸ್ಟಾರ್ ಫಿಟ್ನೆಸ್ ಚಾಲೆಂಜ್ ಗೆ ಅಭಿಮಾನಿಗಳು ಫಿದಾ

By Pavithra

Recommended Video

ಯಶ್ , ಸುದೀಪ್ ಆಯ್ತು ಈಗ ಪುನೀತ್ ಫಿಟ್ನೆಸ್ ವಿಡಿಯೋ ನೋಡಿ | FIlmibeat Kannada

ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್ ಆರಂಭಿಸಿದ ಫಿಟ್ನೆಸ್ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬಾಲಿವುಡ್, ಟಾಲಿವುಡ್ ಸೇರಿದಂತೆ ಸ್ಯಾಂಡಲ್ ವುಡ್ ನ ಸ್ಟಾರ್ ಗಳೆಲ್ಲರೂ ತಾವು ಕೂಡ ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿ ತಮ್ಮ ಸ್ನೇಹಿತರಿಗೂ ಚಾಲೆಂಜ್ ಹಾಕಿದ್ದಾರೆ.

ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್, ಪವನ್ ಕುಮಾರ್, ಸಂಯುಕ್ತ ಹೆಗ್ಡೆ, ರಾಧಿಕಾ ಚೇತನ್ ಸೇರಿದಂತೆ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಕೂಡ ಚಾಲೆಂಜ್ ಸ್ವೀಕರಿಸಿ ತಮ್ಮ ಸ್ನೇಹಿತರಿಗೆ ಮತ್ತೆ ಚಾಲೆಂಜ್ ಹಾಕಿದ್ದಾರೆ.

ಡಾ ಅಶ್ವಥ್ ನಾರಾಯಣ್ ಅವರು ಹಾಕಿದ್ದ ಚಾಲೆಂಜ್ ಸ್ವೀಕರಿಸಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವಿಶೇಷವಾದ ರೀತಿಯಲ್ಲಿ ಫಿಟ್ನೆಸ್ ಚಾಲೆಂಜ್ ಅನ್ನು ಕಂಪ್ಲೀಟ್ ಮಾಡಿದ್ದಾರೆ. ಅದರ ಜೊತೆಯಲ್ಲಿ ಅವರ ಸ್ನೇಹಿತರಿಗೂ ಚಾಲೆಂಜ್ ಹಾಕಿದ್ದಾರೆ. ಹಾಗಾದರೆ ಅಪ್ಪು ಚಾಲೆಂಜ್ ಕ್ಲಿಯರ್ ಮಾಡಿದ್ದು ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ.

ಪವರ್ ಸ್ಟಾರ್ ಫಿಟ್ನೆಸ್ ಚಾಲೆಂಜ್

ಪವರ್ ಸ್ಟಾರ್ ಫಿಟ್ನೆಸ್ ಚಾಲೆಂಜ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಮ್ ಫಿಟ್ ತೋ ಇಂಡಿಯಾ ಫಿಟ್ ಚಾಲೆಂಜ್ ಸ್ವೀಕರಿಸಿದ್ದಾರೆ. ಸದಾ ಎಲ್ಲರಿಗಿಂತಲೂ ವಿಭಿನ್ನ ಎನ್ನಿಸುವ ಅಪ್ಪು ಇದರಲ್ಲಿಯೂ ತಮ್ಮದೇ ಸ್ಟೈಲ್ ನಲ್ಲಿ ವರ್ಕ್ ಔಟ್ ಮಾಡಿದ್ದಾರೆ.

ಅಪ್ಪು ವರ್ಕ್ ಔಟ್ ಗೆ ಫ್ಯಾನ್ಸ್ ಫಿದಾ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಮ್ ಫಿಟ್ ತೋ ಇಂಡಿಯಾ ಫಿಟ್ ಚಾಲೆಂಜ್ ಗಾಗಿ ಬ್ಯಾಕ್ ಫ್ಲಿಪ್ ಮಾಡಿ ಅದರ ಜೊತೆಯಲ್ಲಿ ಪುಷ್ ಅಪ್ಸ್ ಮಾಡಿದ್ದಾರೆ. ಅದನ್ನ ನೋಡಿದ ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ.

ಧ್ರುವ ಹಾಗೂ ರಕ್ಷಿತ್, ಶ್ರೀ ಮುರಳಿಗೆ ಚಾಲೆಂಜ್

ಧ್ರುವ ಹಾಗೂ ರಕ್ಷಿತ್, ಶ್ರೀ ಮುರಳಿಗೆ ಚಾಲೆಂಜ್

ಚಾಲೆಂಜ್ ಕ್ಲಿಯರ್ ಮಾಡಿದ ನಂತರ ಪವರ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ, ಧ್ರುವ ಸರ್ಜಾ, ಶ್ರೀ ಮುರಳಿ ಮತ್ತು ಡ್ಯಾನಿಶ್ ಸೇಠ್ ಅವರಿಗೆ ಹಮ್ ಫಿಟ್ ತೋ ಇಂಡಿಯಾ ಫಿಟ್ ಚಾಲೆಂಜ್ ಹಾಕಿದ್ದಾರೆ.

ಹಮ್ ಫಿಟ್ ತೋ ಇಂಡಿಯಾ ಫಿಟ್

ಹಮ್ ಫಿಟ್ ತೋ ಇಂಡಿಯಾ ಫಿಟ್

ಹಮ್ ಫಿಟ್ ತೋ ಇಂಡಿಯಾ ಫಿಟ್ ಚಾಲೆಂಜ್ ಅನ್ನು ಸಾಕಷ್ಟು ಕನ್ನಡ ಸಿನಿಮಾ ಸ್ಟಾರ್ ಗಳು ಸ್ವೀಕರಿಸಿದ್ದಾರೆ. ರಾಧಿಕಾ ಚೇತನ್, ಹರ್ಷಿಕಾ ಪೂಣಚ್ಚ, ಪವನ್ ಕುಮಾರ್ , ಸಂಯುಕ್ತಾ ಹೊರನಾಡು, ಯಶ್, ಸುದೀಪ್ ಇನ್ನೂ ಅನೇಕರು ಸ್ವೀಕರಿಸಿದ್ದಾರೆ.

More from Filmibeat

English summary
Kannada star Power Star Puneeth Raj Kumar has received the Hum Fit To India Fit Challenge. Puneet Rajkumar has challenged Rakshit Shetty Dhruv Sarja, Sri Murali and Danish Seth.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X