ನೀವ್ ಹಾಡ್ತೀರಾ? ಹಾಗಾದ್ರೆ ಪುನೀತ್ ನಿಮಗೆ ಒಂದು ಅವಕಾಶ ಕೊಡ್ತಾರೆ!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸ್ವಂತ ಬ್ಯಾನರ್ ಪ್ರಾರಂಭವಾಗಿ ಸಾಕಷ್ಟು ದಿನಗಳು ಕಳೆದಿವೆ. 'ಪಿ ಆರ್ ಕೆ' ಸಂಸ್ಥೆ ಅಡಿಯಲ್ಲಿ ಈಗಾಗಲೇ ಚಿತ್ರ ನಿರ್ಮಾಣ ಶುರುವಾಗಿದ್ದು ಹೇಮಂತ್ ಕುಮಾರ್ ನಿರ್ದೇಶನದಲ್ಲಿ ಶೂಟಿಂಗ್ ಕೂಡ ಪ್ರಾರಂಭವಾಗಿದೆ.
ಹೋಮ್ ಬ್ಯಾನರ್ ಪ್ರಾರಂಭ ಮಾಡಿ ಸ್ವಲ್ಪ ದಿನಗಳಲ್ಲೇ ಪುನೀತ್ 'ಪಿ ಆರ್ ಕೆ' ಆಡಿಯೋ ಕಂಪನಿ ಕೂಡ ಶುರು ಮಾಡಿದ್ದರು. ತಾಯಿ ಪಾರ್ವತಮ್ಮನವರ ಹಾದಿಯಲ್ಲೇ ಹೆಜ್ಜೆ ಇಡುತ್ತಿರುವ ಪುನೀತ್ ರಾಜ್ ಕುಮಾರ್ ಈ ಎರಡು ಸಂಸ್ಥೆಗಳ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ನಿರ್ಧಾರ ಮಾಡಿದ್ದಾರೆ.

ಹೊಸ ಗಾಯಕರಿಗೆ ಹಾಗೂ ಹಾಡಬೇಕು ಎಂದು ಹಂಬಲ ಹೊಂದಿರುವ ಪ್ರತಿಯೊಬ್ಬರಿಗೆ ಒಳ್ಳೆ ಸದಾವಕಾಶ ಕಲ್ಪಿಸುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ 'ಪಿ ಆರ್ ಕೆ' ಆಡಿಯೋ ಕಂಪನಿಯ ಮೂಲಕ ಹೊಸ ಸಿಂಗರ್ ಗಳ ಅನ್ವೇಷಣೆ ಪ್ರಾರಂಭವಾಗಲಿದೆ.

ನೀವ್ ಹಾಡ್ತೀರಾ ? ಅಂತ ತಮ್ಮ ಅಫೀಶಿಯಲ್ ಪೇಜ್ ನಲ್ಲಿ ಹಾಕಿರುವ ಪುನೀತ್ ರಾಜ್ ಕುಮಾರ್ ಟೀಂ ಸದ್ಯದಲ್ಲೇ ಈ ಬಗ್ಗೆ ಮಾಹಿತಿಯನ್ನೂ ಹೊರಹಾಕಲಿದೆ. ಸಾಕಷ್ಟು ದಿನಗಳಿಂದ ನಾನು ಸಿಂಗರ್ ಆಗಬೇಕು ಅಂತ ನೂರಾರು ಕನಸು ಕಟ್ಟಿರುವ ಗಾಯಕ-ಗಾಯಕಿಯರಿಗೆ ಈ ಮೂಲಕ ಚಾನ್ಸ್ ಸಿಗಲಿದೆ.

ಈ ಹಿಂದೆ 'ವಜ್ರೇಶ್ವರಿ' ಬ್ಯಾನರ್ ನಲ್ಲಿ ತೆರೆಕಂಡ 'ರನ್ ಆಂಟನಿ' ಸಿನಿಮಾಗಾಗಿ ಟ್ಯಾಲೆಂಟ್ ಹಂಟ್ ಮಾಡಲಾಗಿತ್ತು. ಆಯ್ಕೆ ಆದ ಫ್ರಶ್ ಸಿಂಗರ್ ಗಳಿಂದ 'ರನ್ ಆಂಟನಿ' ಸಿನಿಮಾದ ಪ್ರಮೋಷನ್ ಸಾಂಗ್ ಹಾಡಿಸಿದ್ದರು. ಅದಷ್ಟೇ ಅಲ್ಲದೇ ಪ್ರತಿಯೊಬ್ಬರಿಗೂ ಪುನೀತ್ ಅವರೇ ಪ್ರಶಸ್ತಿ ನೀಡಿ ಸನ್ಮಾನ ಮಾಡಿದ್ದರು. ಅದೇ ರೀತಿಯಲ್ಲಿ ಈಗ 'ಪಿ ಆರ್ ಕೆ' ಬ್ಯಾನರ್ ಮುಂಬರುವ ಸಿನಿಮಾಗಾಗಿ ಗಾಯಕರ ಅನ್ವೇಷಣೆ ಶುರುವಾಗಿದೆ.


Click it and Unblock the Notifications











