For Quick Alerts
  ALLOW NOTIFICATIONS  
  For Daily Alerts

  ಒಂದೇ ಸ್ಟೆಪ್ ಹಾಕಿದ ಅಪ್ಪು-ಅಲ್ಲು ಅರ್ಜುನ್, ಯಾರಿಗೆ ಸಿಕ್ತು ಬಹುಪರಾಕ್?

  |

  ಕಳೆದ ಎರಡ್ಮೂರು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಡ್ಯಾನ್ಸ್ ಬೆಸ್ಟ್ ಅಥವಾ ತೆಲುಗು ಸ್ಟಾರ್ ಅಲ್ಲು ಅರ್ಜುನ್ ಡ್ಯಾನ್ಸ್ ಬೆಸ್ಟ್ ಎಂಬ ಚರ್ಚೆ ನಡೆಯುತ್ತಿದೆ. ಇವರಿಬ್ಬರಲ್ಲಿ ಯಾರು ಉತ್ತಮ ಡ್ಯಾನ್ಸರ್ ಎನ್ನುವ ಮಟ್ಟಿಗೆ ಹೋಲಿಕೆಯಾಗುತ್ತಿದೆ.

  Rachita ram behind the scenes | Filmibeat Kannada

  ಇದಕ್ಕೆ ಕಾರಣ ಪುನೀತ್ ನಟಿಸಿರುವ ನಟಸಾರ್ವಭೌಮ ಸಿನಿಮಾದ 'ಓಪನ್ ದಿ ಬಾಟಲ್......' ಹಾಡು ಹಾಗೂ ಅಲ್ಲು ಅರ್ಜುನ್ ನಟಿಸಿರುವ ಅಲಾ ವೈಕುಂಠಪುರಂಲೋ ಚಿತ್ರದ 'ಪುಟ್ಟ ಬೊಮ್ಮಾ ಪುಟ್ಟ ಬೊಮ್ಮಾ.....'. ಹಾಡು.

  ಅಲಾ ವೈಕುಂಟಪುರಂಲೋ ಸಿನಿಮಾ ಹಿಂದಿಗೆ ರೀಮೇಕ್, ಈತನೇ ನಾಯಕ!ಅಲಾ ವೈಕುಂಟಪುರಂಲೋ ಸಿನಿಮಾ ಹಿಂದಿಗೆ ರೀಮೇಕ್, ಈತನೇ ನಾಯಕ!

  ಈ ಎರಡು ಹಾಡಿನಲ್ಲಿ ಸಾಮ್ಯತೆ ಇರುವ ಒಂದು ಸಾಮಾನ್ಯ ಸ್ಟೆಪ್ ಇದೆ. ನೋಡುವುದಕ್ಕೆ ಈ ಎರಡು ಸ್ಟೆಪ್ ಒಂದೇ ಥರ ಇದೆ. ಹಾಗಾಗಿ, ಯಾರು ಚೆನ್ನಾಗಿ ಹೆಜ್ಜೆ ಹಾಕಿದ್ದಾರೆ ಎನ್ನುವುದು ಚರ್ಚೆ. ಹಾಗಿದ್ರೆ, ಅಭಿಮಾನಿಗಳು ಯಾರಿಗೆ ಬಹುಪರಾಕ್ ಎನ್ನುತ್ತಿದ್ದಾರೆ. ಮುಂದೆ ಓದಿ...

  ನಟಸಾರ್ವಭೌಮದಲ್ಲಿ ಪುನೀತ್!

  ನಟಸಾರ್ವಭೌಮದಲ್ಲಿ ಪುನೀತ್!

  ನಿರ್ದೇಶಕ ಪವನ್ ಒಡೆಯರ್ ನಿರ್ದೇಶನ ಮಾಡಿದ್ದ ನಟಸಾರ್ವಭೌಮ ಚಿತ್ರದ 'ಓಪನ್ ದಿ ಬಾಟಲ್' ಎಂಬ ಪಾರ್ಟಿ ಸಾಂಗ್ ಇದೆ. ಈ ಹಾಡಿನಲ್ಲಿ ಪುನೀತ್ ರಾಜ್ ಕುಮಾರ್ ಸ್ಟೈಲಿಶ್ ಸ್ಟೆಪ್ ಹಾಕಿದ್ದಾರೆ. 2019ರ ಜನವರಿಯಲ್ಲಿ ಈ ಸಿನಿಮಾ ತೆರೆಕಂಡಿತ್ತು.

  ಅಲ್ಲು ಅರ್ಜುನ್ ಚಿತ್ರದಲ್ಲೂ ಈ ಸ್ಟೆಪ್ ಇದೆ

  ಅಲ್ಲು ಅರ್ಜುನ್ ಚಿತ್ರದಲ್ಲೂ ಈ ಸ್ಟೆಪ್ ಇದೆ

  ಬಳಿಕ, ಅಲ್ಲು ಅರ್ಜುನ್ ನಟನೆಯ ಅಲಾ ವೈಕುಂಠಪುರಂಲೋ ಸಿನಿಮಾದ 'ಪುಟ್ಟ ಬೊಮ್ಮಾ ಪುಟ್ಟ ಬೊಮ್ಮಾ.....' ಹಾಡು ಸಖತ್ ದೊಡ್ಡ ಹಿಟ್ ಆಯಿತು. ನಟಸಾರ್ವಭೌಮದಲ್ಲಿ ಪುನೀತ್ ಹಾಕಿದ್ದ ಸ್ಟೆಪ್‌ನ್ನು ಆಂಗಲ್ ಬದಲಾಯಿಸಿ ಅಲ್ಲು ಅರ್ಜುನ್ ಮಾಡಿದ್ದಾರೆ. ಪುನೀತ್ ಮತ್ತು ಅಲ್ಲು ಅರ್ಜುನ್ ಹಾಕಿದ ಎರಡೂ ಸ್ಟೆಪ್ ಒಂದೇ ಆಗಿರುವುದರಿಂದ ಇಬ್ಬರಲ್ಲಿ ಯಾರೂ ಉತ್ತಮವಾಗಿ ಡ್ಯಾನ್ಸ್ ಮಾಡಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ.

  ಇಷ್ಟದ ನಟ, ಡಾನ್ಸರ್, ಯುವರತ್ನ ಸಿನಿಮಾ ಎಲ್ಲದರ ಬಗ್ಗೆ ಪುನೀತ್ ಮಾತುಇಷ್ಟದ ನಟ, ಡಾನ್ಸರ್, ಯುವರತ್ನ ಸಿನಿಮಾ ಎಲ್ಲದರ ಬಗ್ಗೆ ಪುನೀತ್ ಮಾತು

  ಎರಡೂ ಕಡೆ ಜಾನಿ ಮಾಸ್ಟರ್

  ಎರಡೂ ಕಡೆ ಜಾನಿ ಮಾಸ್ಟರ್

  ಪುನೀತ್ ರಾಜ್ ಕುಮಾರ್ ಮತ್ತು ಅಲ್ಲು ಅರ್ಜುನ್ ಇಬ್ಬರಿಗೂ ಕೊರಿಯೋಗ್ರಫಿ ಮಾಡಿರುವುದು ತೆಲುಗಿನ ಜಾನಿ ಮಾಸ್ಟರ್. ಹಾಗಾಗಿ, ಈ ಸ್ಟೆಪ್‌ನಲ್ಲಿ ಸಾಮ್ಯತೆ ಇದೆ. ಇದರಲ್ಲಿ ಕಾಪಿ ಮಾಡಲಾಗಿದೆ ಎಂಬ ಪ್ರಶ್ನೆಯೇ ಇಲ್ಲ. ಏಕಂದ್ರೆ ಎರಡೂ ಕಡೆ ಒಬ್ಬರೇ ಕೊರಿಯೋಗ್ರಫರ್. ಜಾನಿ ಮಾಸ್ಟರ್ ಈ ಹಿಂದೆ ರಾಜಕುಮಾರ ಚಿತ್ರದಲ್ಲಿ ಪುನೀತ್ ಗೆ ನೃತ್ಯ ಸಂಯೋಜನೆ ಮಾಡಿದ್ದರು.

  ಕನ್ನಡ ಫ್ಯಾನ್ಸ್ ಅಪ್ಪುಗೆ ಬಹುಪರಾಕ್!

  ಕನ್ನಡ ಫ್ಯಾನ್ಸ್ ಅಪ್ಪುಗೆ ಬಹುಪರಾಕ್!

  ಇಬ್ಬರಲ್ಲಿ ಯಾರೂ ಉತ್ತಮ ಹಾಗೂ ಇಬ್ಬರಲ್ಲಿ ಯಾರೂ ಉತ್ತಮ ಡ್ಯಾನ್ಸ್ ಎಂಬ ಪ್ರಶ್ನೆ ಇಲ್ಲ. ಆದರೆ, ಸ್ಯಾಂಡಲ್ ವುಡ್ ಅಭಿಮಾನಿಗಳು ಮಾತ್ರ ಪುನೀತ್ ರಾಜ್ ಕುಮಾರ್ ಸ್ಟೆಪ್ ಸೂಪರ್, ಮೊದಲು ಅಪ್ಪು ಈ ಸ್ಟೆಪ್ ಹಾಕಿದ್ದು ಎಂದು ಬಹುಪರಾಕ್ ಹಾಕುತ್ತಿದ್ದಾರೆ.

  English summary
  Allu arjun in Butta Bomma vs Puneeth rajkumar in Open The Bottle dance: who made good step?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X