»   » ಶಿವಣ್ಣ ಹುಟ್ಟುಹಬ್ಬಕ್ಕೆ 2 ಲಕ್ಷ ಮೌಲ್ಯದ ಸೈಕಲ್ ಗಿಫ್ಟ್ ಕೊಟ್ಟ ಪುನೀತ್

ಶಿವಣ್ಣ ಹುಟ್ಟುಹಬ್ಬಕ್ಕೆ 2 ಲಕ್ಷ ಮೌಲ್ಯದ ಸೈಕಲ್ ಗಿಫ್ಟ್ ಕೊಟ್ಟ ಪುನೀತ್

Posted By:
Subscribe to Filmibeat Kannada

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 55ನೇ ವಸಂತಕ್ಕೆ ಕಾಲಿಟ್ಟಿರುವ ಸೆಂಚುರಿ ಸ್ಟಾರ್ ಶಿವಣ್ಣನಿಗೆ ಸಹೋದರ ಪುನೀತ್ ರಾಜ್ ಕುಮಾರ್ ರವರಿಂದ ಒಂದು ಸ್ಪೆಷಲ್ ಉಡುಗೊರೆ ಸಿಕ್ಕಿದೆ.

Puneet Rajkumar Birthday Gift To Shiva Rajkumar

ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಪವರ್ ಸ್ಟಾರ್ ಪುನೀತ್ ಒಂದು ವಿಶೇಷವಾದ ಸೈಕಲ್ ಗಿಫ್ಟ್ ಆಗಿ ಕೊಟ್ಟಿದ್ದಾರೆ. ಬಿ.ಎಮ್.ಡಬ್ಲ್ಯೂ ಸೈಕಲ್ ಇದಾಗಿದ್ದು, ಇದರ ಬೆಲೆ ಸುಮಾರು 2 ಲಕ್ಷ ರೂಪಾಯಿ. ನೀಲಿ ಬಣ್ಣದ ಈ ಸೈಕಲ್ ಲುಕ್ ಸಖತ್ ಆಗಿದೆ.

ಅಪ್ಪು ಸೆಂಚುರಿ, ಶಿವಣ್ಣ ಹಾಫ್ ಸೆಂಚುರಿ: ಗೆಲುವಿನ ಗುಟ್ಟೇನು.?

Puneet Rajkumar Birthday Gift To Shiva Rajkumar

ಶಿವರಾಜ್ ಕುಮಾರ್ ದಿನ ಬೆಳ್ಳಗೆ ಸೈಕ್ಲಿಂಗ್ ಮಾಡುತ್ತಾರೆ. ಅದಕ್ಕೆ ಪುನೀತ್ ಅಣ್ಣನಿಗಾಗಿ ಸೈಕಲ್ ಉಡುಗೊರೆ ಕೊಟ್ಟಿದ್ದಾರೆ. ಅಂದಹಾಗೆ, ಈ ಬಾರಿ ಶಿವಣ್ಣ ತಾಯಿ ಪಾರ್ವತಮ್ಮ ಅವರ ನಿಧನದ ಹಿನ್ನಲೆಯಲ್ಲಿ ಹುಟ್ಟುಹಬ್ಬವನ್ನು ಆಚರಿಸುವುದಿಲ್ಲ ಎಂದಿದ್ದರು. ಆದರೆ ಅಭಿಮಾನಿಗಳ ಒತ್ತಾಯಕ್ಕೆ ಸಿಂಪಲ್ ಆಗಿ ಬರ್ತ್ ಡೇ ಮಾಡಿಕೊಳ್ಳುತ್ತಿದ್ದಾರೆ.

English summary
Puneet Rajkumar gave BMW Bicycle as gift To Shiva Rajkumar's Birthday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada