'ಅಯೋಗ್ಯ' ನ ಗಾನಕ್ಕೆ ಪವರ್ ಸ್ಟಾರ್ ಸಾಥ್
Recommended Video

'ಅಯೋಗ್ಯ' ಸದ್ಯ ಕನ್ನಡ ಸಿನಿಮಾದ ಸಂಗೀತ ಕ್ಷೇತ್ರದಲ್ಲಿ ಸಖತ್ ಸದ್ದು ಮಾಡುತ್ತಿರುವ ಚಿತ್ರ. ಬಿಡುಗಡೆ ಮಾಡಿದ ಮೊದಲ ಹಾಡಿನಿಂದಲೇ ಚಿತ್ರದ ಬಗ್ಗೆ ನಿರೀಕ್ಷೆ ಮೂಡಿಸಿರುವ 'ಅಯೋಗ್ಯ' ಚಿತ್ರದ ಮೊದಲ ವಿಡಿಯೋ ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿದ್ದಾರೆ.
ಮಹೇಶ್ ಕುಮಾರ್ ನಿರ್ದೇಶನದ 'ಅಯೋಗ್ಯ' ಚಿತ್ರದ 'ಹಿಂದೆ ಹಿಂದೆ ಹೋಗು ಮಕ್ ಉಗುದ್ರು ಹಿಂದೆ ಹೋಗು".. ಹಾಡನ್ನು ಪುನೀತ್ ರಾಜ್ ಕುಮಾರ್ ಇಂದು ಚಿತ್ರತಂಡದ ಸಮ್ಮುಖದಲ್ಲಿ ಬಿಡುಗಡೆ ಮಾಡಿ 'ಅಯೋಗ್ಯ' ಟೀಂ ಗೆ ಶೂಭ ಕೋರಿದ್ರು.

ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು. ಸಂಜಿತ್ ಹೆಗ್ಡೆ ಹಾಡನ್ನ ಹಾಡಿದ್ದಾರೆ. ಭರ್ಜರಿ ಚೇತನ್ ಕುಮಾರ್ ಹಾಡನ್ನು ಬರೆದಿದ್ದಾರೆ. ಇನ್ನು ಹಾಡಿನ ಬಗ್ಗೆ ಹೇಳುವುದಾದರೆ ಹಾಡಿನಲ್ಲಿ ನೀನಾಸಂ ಸತೀಶ್ ಸಖತ್ತಾಗಿಯೇ ಡ್ಯಾನ್ಸ್ ಮಾಡಿರುವುದು ವಿಶೇಷ.

ಹಳ್ಳಿ ಸ್ಟೈಲ್ ನಲ್ಲಿ ಕ್ಯಾಚಿ ಲೈನ್ ಇರುವ "ಹಿಂದೆ ಹಿಂದೆ ಹೋಗು' ಹಾಡು ಕೂಡ "ಏನಮ್ಮಿ ಏನಮ್ಮಿ" ಹಾಡಿನ ರೀತಿಯಲ್ಲೇ ಹಿಟ್ ಆಗುವ ಎಲ್ಲಾ ಸಾಧ್ಯತೆಗಳಿವೆ ಇನ್ನು ಸಾಂಗ್ ನಲ್ಲಿ ಡಿಂಪಲ್ ಕ್ವೀನ್ ಪಕ್ಕಾ ಹಳ್ಳಿ ಬೆಡಗಿ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications