ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಲಿರುವ ಪವರ್ ಸ್ಟಾರ್

By Pavithra

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಪಾರ ಅಭಿಮಾನಿಗಳನ್ನ ಹೊಂದಿರುವ ನಟ. ಬಾಲನಟನಾಗಿ ಚಿತ್ರರಂಗ ಪ್ರವೇಶ ಮಾಡಿದಾಗಿಂದಲೂ ಅಪ್ಪು ಅಂದರೆ ಎಲ್ಲರಿಗೂ ಅಚ್ಚುಮೆಚ್ಚು. ಈಗಾಗಲೇ ಸಾಕಷ್ಟು ಜನರನ್ನ ಕಿರುತೆರೆ ಮೂಲಕ ಭೇಟಿ ಮಾಡುತ್ತಿರುವ ಪವರ್ ಸ್ಟಾರ್ ತಮ್ಮನ್ನ ಇಷ್ಟ ಪಡುವ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಲಿದ್ದಾರೆ.

ಸೋಷಿಯಲ್ ಮೀಡಿಯಾದಿಂದ ಬಹಳಷ್ಟು ದೂರ ಉಳಿದಿರುವ ಪವರ್ ಸ್ಟಾರ್ ಅವರನ್ನ ನೇರವಾಗಿ ಭೇಟಿ ಮಾಡಲು ವರ್ಷಕ್ಕೆ ಒಮ್ಮೆ ಮಾತ್ರ ಅವಕಾಶ ಸಿಗುತ್ತೆ. ಆದರೆ ಪುನೀತ್ ರಾಜ್ ಕುಮಾರ್ ಅವರನ್ನು ಇನ್ನು ಮುಂದೆ ನೀವು ಪ್ರತಿನಿತ್ಯ ಮಾತನಾಡಿಸಬಹುದು. ಅದು ಹೇಗೆ ಅಂತೀರಾ, ಅಪ್ಪು ಇನ್ನ ಕೆಲವೇ ದಿನಗಳಲ್ಲಿ ಟ್ವಿಟ್ಟರ್ ಗೆ ಎಂಟ್ರಿಕೊಡಲಿದ್ದಾರೆ.

Puneet Rajkumar has sai he will open a Twitter account

ಈಗಾಗಲೇ ಫೇಸ್ ಬುಕ್ ನಲ್ಲಿ ಅಕೌಂಟ್ ಕ್ರಿಯೇಟ್ ಮಾಡಿರುವ ಅಪ್ಪು ಆದಷ್ಟು ಬೇಗ ಟ್ವಿಟ್ಟರ್ ನ ಮೂಲಕ ಅಭಿಮಾನಿಗಳನ್ನ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. ನಿನ್ನೆ ಮಲ್ಲೇಶ್ವರಂ ಸ್ಪೋರ್ಟ್ ಫೌಂಡೇಶನ್ ಅಸೋಸಿಯೇಷನ್ ನಲ್ಲಿ ನಡೆದ ರಾಜಕುಮಾರ್ ಬಾಕ್ಸಿಂಗ್ ಕಪ್ ಪಂದ್ಯಾವಳಿಯ ಸಂದರ್ಭದಲ್ಲಿ ಈ ಮಾತನ್ನ ಪುನೀತ್ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ನಟ ಜಗ್ಗೇಶ್ ಕೂಡ ಭಾಗಿ ಆಗಿದ್ದರು. ಕಾರ್ಯಕ್ರಮವನ್ನ ತಮ್ಮ ಟ್ವಿಟ್ಟರ್ ನಲ್ಲಿ ಲೈವ್ ಮಾಡಿದ ಜಗ್ಗೇಶ್ ಪುನೀತ್ ಅವರನ್ನ ಟ್ವಟ್ಟರ್ ನಲ್ಲಿ ಖಾತೆ ತೆರೆಯುವಂತೆ ಸಲಹೆ ನೀಡಿದರು. ಆಗ ಪುನೀತ್ ರಾಜ್ ಕುಮಾರ್ ಆದಷ್ಟು ಬೇಗ ಟ್ವಿಟ್ಟರ್ ಗೆ ಬರುವುದಾಗಿ ತಿಳಿಸಿದ್ದಾರೆ.

More from Filmibeat

English summary
Kannada actor Puneet Rajkumar has said that he will open a Twitter account as soon as possible. Puneet has said this in a Rajkumar Boxing Cup tournament at the Sport Foundation Association at Malleswaram yesterday(jan.26).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X