ಕೋಸ್ಟಲ್ ವುಡ್ ಗೆ ಎಂಟ್ರಿಕೊಟ್ಟ ಪವರ್ ಸ್ಟಾರ್

By Pavithra

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೇವಲ ಕಲಾವಿದನಾಗಿ ಮಾತ್ರವಲ್ಲದೆ ನಿರ್ಮಾಪಕನಾಗಿ, ಗಾಯಕನಾಗಿ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ನಟ. ಚಿಕ್ಕ ವಯಸ್ಸಿನಿಂದಲೇ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ಹಾಡುಗಳನ್ನು ಹಾಡಿರುವ ಪುನೀತ್ ರಾಜ್ ಕುಮಾರ್ ಮೊಟ್ಟ ಮೊದಲ ಬಾರಿಗೆ ತುಳು ಚಿತ್ರದ ಹಾಡನ್ನು ಹಾಡಿದ್ದಾರೆ.

'ಉಮಿಲ್' ಎನ್ನುವ ತುಳು ಸಿನಿಮಾದ ಹಾಡನ್ನು ಪುನೀತ್ ರಾಜ್ ಕುಮಾರ್ ಇತ್ತೀಚಿಗಷ್ಟೆ ಹಾಡಿದ್ದಾರೆ. ರವಿ ಬಸ್ರೂರ್ ಸಂಗೀತ ನಿರ್ದೇಶನ ಮಾಡಿರುವ ಈ ಚಿತ್ರದ ಮೂಲಕ ಪುನೀತ್ ರಾಜ್ ಕುಮಾರ್ ತುಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

ಕರುಣಾಕರ ಶೆಟ್ಟಿ, ಪ್ರಜ್ನೇಶ್ ಶೆಟ್ಟಿ ಹಾಗೂ ಪ್ರಜ್ವಲ್ ಶೆಟ್ಟಿ ಜಂಟಿಯಾಗಿ ನಿರ್ಮಾಣ ಮಾಡಿರುವ 'ಉಮಿಲ್' ಸಿನಿಮಾವನ್ನು ರಂಜಿತ್ ಸುವರ್ಣ ನಿರ್ದೇಶಿಸಿದ್ದಾರೆ. ತುಳುವಿನ ಮೊದಲ ಆನಿಮೇಷನ್ ಚಿತ್ರ ಇದ್ದಾಗಿದ್ದು ರವಿ ಬಸ್ರೂರು ಸಂಗೀತ, ಪವನ್ ಕರ್ಕೆರ ಕ್ಯಾಮೆರಾ ವರ್ಕ್ ಸಿನಿಮಾಗಿದೆ.

Puneet Rajkumar has sung for Tulu Umil cinema

ಕಿರ್ತನ್ ಭಂಡಾರಿಗೆ ಬರೆದಿರುವ ಹಾಡನ್ನು ಪುನೀತ್ ರಾಜ್ ಕುಮಾರ್ ಹಾಡಿದ್ದು ಈ ಬಗ್ಗೆ ಫೇಸ್ ಬುಕ್ ನಲ್ಲಿ ಸಂತೋಷ ವ್ಯಕ್ತ ಪಡಿಸಿದ್ದಾರೆ. ತೆಲುಗಿನ 'ಈಗ' ಸಿನಿಮಾ ಶೈಲಿಯಲ್ಲಿ ಆನಿಮೇಷನ್ ಬಳಸಿಕೊಂಡಿದ್ದು, ಚಿತ್ರದ ಟೀಸರ್ ಬಿಡುಗಡೆ ಸಿನಿಮಾ ನಿರ್ದೇಶಕರು ಸಿದ್ದತೆ ಮಾಡಿಕೊಂಡಿದ್ದಾರೆ.

Puneet Rajkumar has sung for Tulu Umil cinema

ಸಿನಿಮಾದಲ್ಲಿ ತುಳು ಕಲಾವಿದರಾದ ಉಮೇಶ್ ಮಿಜಾರ್, ಪೂಜಾ ಶೆಟ್ಟಿ, ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಬೋಜರಾಜ್ ವಾಮಂಜೂರ್, ಸತೀಶ್ ಬಂದಲೆ ಇನ್ನೂ ಅನೇಕರು ಕಾಣಿಸಿಕೊಂಡಿದ್ದಾರೆ. 'ಉಮಿಲ್' ಸಿನಿಮಾ ಮೂಲಕ ಪವರ್ ಸ್ಟಾರ್ ಧ್ವನಿಯನ್ನು ಕೋಸ್ಟಲ್ ವುಡ್ ಸಿನಿಮಾ ಪ್ರೇಮಿಗಳು ಕೇಳಲಿದ್ದಾರೆ.

More from Filmibeat

English summary
Kannada actor Puneet Rajkumar has sung for Tulu cinema. by this Puneet Rajkumar has entered into the Tulu film industry. Umil cinema is directed by Ranjit Suvarna
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X