For Quick Alerts
  ALLOW NOTIFICATIONS  
  For Daily Alerts

  ಪಕ್ಕಾ ಕಮರ್ಷಿಯಲ್ ಆದ ಪವರ್ ಸ್ಟಾರ್ ಪುನೀತ್

  By Pavithra
  |
  ಪವರ್ ಸ್ಟಾರ್ ಪುನೀತ್ ಈಗ ಪಕ್ಕಾ ಕಮರ್ಷಿಯಲ್ | Filmibeat Kannada

  ಕನ್ನಡ ಸಿನಿಮಾರಂಗದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈಗ ಪಕ್ಕಾ ಕಮರ್ಷಿಯಲ್. ಅಯ್ಯೋ ಇದೇನು ಪಕ್ಕಾ ಕಮರ್ಷಿಯಲ್ ಅಂದ್ರೆ ಅಂತ ಆಶ್ಚರ್ಯ ಪಡಬೇಡಿ, ನಾವು ಹೇಳುತ್ತಿರುವುದು ಸಿನಿಮಾ ಬಗ್ಗೆ. ಅಪ್ಪು, ವಾಸು ನಾನ್ ಪಕ್ಕಾ ಕಮರ್ಷಿಯಲ್ ಸಿನಿಮಾ ತಂಡವನ್ನ ಸೇರಿಕೊಂಡಿದ್ದಾರೆ.

  ಹಾಗಂತ ಅಪ್ಪು ಚಿತ್ರದಲ್ಲಿ ಅಭಿನಯಿಸುತ್ತಿಲ್ಲ. ಅನೀಶ್ ತೇಜೇಶ್ವರ್ ಅಭಿನಯದ ಚಿತ್ರಕ್ಕೆ ಒಂದು ಹಾಡನ್ನ ಹಾಡಿದ್ದಾರೆ. ಕಳೆದ ಬಾರಿ 'ಅಕಿರ' ಚಿತ್ರಕ್ಕೂ ಪುನೀತ್ ಒಂದು ಹಾಡನ್ನ ಹಾಡಿದ್ದರು. ಈಗ ವಾಸು ನಾನ್ ಪಕ್ಕಾ ಕಮರ್ಷಿಯಲ್ ಚಿತ್ರಕ್ಕೂ ಹಾಡಿದ್ದಾರೆ.

  ಪುನೀತ್ ಅವರನ್ನ ಭೇಟಿ ಮಾಡಿದ ಪೋಲೆಂಡ್ ರಾಯಭಾರಿ: ಯಾಕೆ?ಪುನೀತ್ ಅವರನ್ನ ಭೇಟಿ ಮಾಡಿದ ಪೋಲೆಂಡ್ ರಾಯಭಾರಿ: ಯಾಕೆ?

  ಪುನೀತ್ ವಾಸು ಚಿತ್ರಕ್ಕೆ ಹಾಡಿರುವ ಹಾಡು ಯಾವುದು?. ಸಿನಿಮಾ ಯಾವ ಹಂತದಲ್ಲಿದೆ?. ಅನೀಶ್ ಅವರನ್ನ ತೆರೆ ಮೇಲೆ ಕಮರ್ಷಿಯಲ್ ಆಗಿ ನೋಡುವುದು ಯಾವಾಗ? ಇಷ್ಟೆಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಮುಂದೆ ಓದಿ

  ಡ್ಯುಯೆಟ್ ಸಾಂಗ್ ಹಾಡಿದ ಅಪ್ಪು

  ಡ್ಯುಯೆಟ್ ಸಾಂಗ್ ಹಾಡಿದ ಅಪ್ಪು

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಧ್ವನಿಯಲ್ಲಿ ಹೆಚ್ಚಾಗಿ ಇಂಟ್ರಡಕ್ಷನ್ ಸಾಂಗ್, ಟೈಟಲ್ ಸಾಂಗ್ ಅನ್ನು ಹಾಡಿಸುತ್ತಾರೆ. ಆದರೆ ಪವರ್ ಸ್ಟಾರ್ ಕೂಡ ರೊಮ್ಯಾಂಟಿಕ್ ಆಗಿರುವ ಹಾಡನ್ನ ಹಾಡುತ್ತಾರೆ ಅನ್ನೋದನ್ನ ನಿರೂಪಿಸಿದ್ದು ಅನೀಶ್ ಮತ್ತು ತಂಡ. ಅದೇ ಕಾರಣಕ್ಕೆ ಅಪ್ಪು ಮತ್ತೆ ಡ್ಯುಯೆಟ್ ಸಾಂಗ್ ಹಾಡಿದ್ದಾರೆ.

  ರಂಗಾಗಿದೆ ಮನಸ್ಸಿನ ಬೀದಿ

  ರಂಗಾಗಿದೆ ಮನಸ್ಸಿನ ಬೀದಿ

  ವಾಸು ನಾನ್ ಪಕ್ಕಾ ಕಮರ್ಷಿಯಲ್ ಸಿನಿಮಾದಲ್ಲಿನ 'ರಂಗಾಗಿದೆ ಈ ಮನಸ್ಸಿನ ಬೀದಿ' ಅನ್ನುವ ಹಾಡನ್ನು ಪುನೀತ್ ಹಾಡಿದ್ದಾರೆ. ಕಿರಣ್ ಈ ಹಾಡನ್ನ ಬರೆದಿದ್ದು ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.

  ನಾರ್ವೆಯಲ್ಲಿ ಚಿತ್ರೀಕರಣ

  ನಾರ್ವೆಯಲ್ಲಿ ಚಿತ್ರೀಕರಣ

  ಕಳೆದ ಬಾರಿ ಅಕಿರ ಸಿನಿಮಾಗೆ ಪುನೀತ್ ಹಾಡಿದ ಹಾಡನ್ನ ಮೊಟ್ಟ ಮೊದಲ ಬಾರಿಗೆ ನಾರ್ವೆಯಲ್ಲಿ ಚಿತ್ರೀಕರಣ ಮಾಡುವ ಮೂಲಕ ಇತಿಹಾಸನ್ನ ಬರೆದಿತ್ತು ಸಿನಿಮಾತಂಡ. ಸ್ವತಃ ಅಪ್ಪು ಅವರೇ ಹಾಡನ್ನ ಕೇಳಿ ತುಂಬಾ ಖುಷಿ ಪಟ್ಟಿದ್ದರು. ಸದ್ಯ ವಾಸು ಪಕ್ಕಾ ಕಮರ್ಷಿಯಲ್ ಚಿತ್ರದ ಹಾಡನ್ನ ನಾರ್ವೆ ಮತ್ತು ಸ್ವೀಡನ್ ನಲ್ಲಿ ಶೂಟ್ ಮಾಡಲಿದ್ದಾರೆ.

  ವಾಸು ಪಕ್ಕಾ ಕಮರ್ಷಿಯಲ್

  ವಾಸು ಪಕ್ಕಾ ಕಮರ್ಷಿಯಲ್

  ವಾಸು ಪಕ್ಕಾ ಕಮರ್ಷಿಯಲ್ ಅನೀಶ್ ನಾಯಕನಾಗಿ ನಟಿಸುತ್ತಿರುವ ಸಿನಿಮಾ, ವಿಂಕ್ ವಿಶಲ್ ಪ್ರೊಡಕ್ಷನ್ಸ್ ನಲ್ಲಿ ಚಿತ್ರ ನಿರ್ಮಾಣ ಆಗುತ್ತಿದೆ. ಅಜಿತ್ವಾಸನ್ ಉಗ್ಗಿನ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಟೀಸರ್ ಬಿಡುಗಡೆ ಮಾಡಿ ಚಿತ್ರೀಕರಣ ಮುಗಿಸಿರುವ ಟೀಂ ಇನ್ನು ಕೆಲವೇ ದಿನಗಳಲ್ಲಿ ಚಿತ್ರವನ್ನ ತೆರೆ ಮೇಲೆ ತರಲಿದೆ.

  English summary
  Kannada actor Puneet Rajkumar has sung a song Anish starrer 'Vasu Naan Pakka commercial' film, The film maker has decided to shoot the song shoot in Norway. Ajanesh Loknath has music directed the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X