For Quick Alerts
  ALLOW NOTIFICATIONS  
  For Daily Alerts

  ಇದೇ ತಿಂಗಳಲ್ಲಿ ಪವರ್ ಫುಲ್ 'ಪವರ್ * * *' ತೆರೆಗೆ

  By Rajendra
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಮತ್ತೊಂದು ಅದ್ದೂರಿ ಚಿತ್ರ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. 'ನಿನ್ನಿಂದಲೇ' ಚಿತ್ರದ ಬಳಿಕ ಅಷ್ಟೇ ನಿರೀಕ್ಷೆ ಹುಟ್ಟಿಸಿರುವ ಚಿತ್ರ ಇದು. ಈಗಾಗಲೆ ಪವರ್ ಸ್ಟಾರ್ ಚಿತ್ರದ ಪ್ಲಾಟಿನಂ ಡಿಸ್ಕ್ ಸಹ ಬಿಡುಗಡೆಯಾಗಿ ಹೊಸ ದಾಖಲೆ ಸೃಷ್ಟಿಸಿರುವುದು ಗೊತ್ತೇ ಇದೆ.

  ತೆಲುಗಿನ 'ದೂಕುಡು' ಚಿತ್ರದ ರೀಮೇಕ್ ಆದರೂ ಕನ್ನಡಕ್ಕೆ ಈ ಚಿತ್ರವನ್ನು ಹೇಗೆ ತಂದಿದ್ದಾರೆ. ಪುನೀತ್ ಹೇಗೆಲ್ಲಾ ಅಭಿನಯಿಸಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಇದ್ದೇ ಇದೆ. 14 ರೀಲ್ಸ್ ಎಂಟರ್ ಟೈನ್ ಮೆಂಟ್ ಪ್ರೈ ಲಿ ಹಾಗೂ ಕೊಲ್ಲ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಗೋಪಿ ಅಚಂಟ, ರಾಮ್ ಅಚಂಟ ಹಾಗೂ ಅನಿಲ್ ಸುಂಕರ ಅವರು ನಿರ್ಮಿಸಿರುವ ಮತ್ತು ಕೊಲ್ಲ ಪ್ರವೀಣ್ ಅವರ ಸಹ ನಿರ್ಮಾಣವಿರುವ 'ಪವರ್ * * *' ಚಿತ್ರ ಇದೇ ಆಗಸ್ಟ್ ತಿಂಗಳಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. [ಬಿಡುಗಡೆಗೂ ಮುನ್ನವೇ ಪವರ್ ಸ್ಟಾರ್ ಹೊಸ ದಾಖಲೆ]

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ನಾಯಕಿ. ಶಿವಾಜಿ ಪ್ರಭು, ಕೆಲ್ಲಿ ಡಾರ್ಜಿ, ರಂಗಾಯಣ ರಘು, ಸಾಧುಕೋಕಿಲ, ಶರತ್ ಲೋಹಿತಾಶ್ವ, ಶೋಭರಾಜ್, ಜೈಜಗದೀಶ್, ಚಿತ್ರಾ, ದೊಡ್ಡಣ್ಣ, ಆದಿಲೋಕೇಶ್, ಧರ್ಮ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  ಕೆ.ಮಾದೇಶ್ ಅವರು ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಎಸ್.ಎಸ್.ತಮನ್ ಸಂಗೀತ ನೀಡಿದ್ದಾರೆ. ಎ.ವಿ. ಕೃಷ್ಣಕುಮಾರ್ ಅವರ ಛಾಯಾಗ್ರಹಣ, ದೀಪು.ಎಸ್.ಕುಮಾರ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ, ಗಣೇಶ್, ಹರ್ಷ, ಮುರಳಿ, ಗಾಯಿತ್ರಿರಘುರಾಂ ನೃತ್ಯ ನಿರ್ದೇಶನ, ಕೆ.ಎಸ್.ಚಂಪಕಧಾಮ (ಬಾಬು) ಹಾಗೂ ಎಸ್.ಕುಮಾರ್ ಅವರ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರಕ್ಕೆ ಎಂ.ಎಸ್.ರಮೇಶ್ ಸಂಭಾಷಣೆ ಬರೆದಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Power Star Puneeth Rajkumar upcoming movie 'Power ***' all set to release in August 2014. The movie creates new record before release. The film is directed by K. Madesh and produced by Ram Achata Gopichand Achanta and Anil Sunkara. It is a remake of the 2011 Telugu language film Dookudu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X